ಭಾನುವಾರ, ಏಪ್ರಿಲ್ 27, 2025
Homeನಮ್ಮ ಬೆಂಗಳೂರುಬಿಎಂಟಿಸಿಗೆ ಖಾಸಗಿಕರಣ ? ನಷ್ಟ ತುಂಬಿಸಿಕೊಳ್ಳು ಖಾಸಗಿ ಚಾಲಕರ ನೇಮಕ

ಬಿಎಂಟಿಸಿಗೆ ಖಾಸಗಿಕರಣ ? ನಷ್ಟ ತುಂಬಿಸಿಕೊಳ್ಳು ಖಾಸಗಿ ಚಾಲಕರ ನೇಮಕ

- Advertisement -

ಬೆಂಗಳೂರು : ಸಿಲಿಕಾನ್ ಸಿಟಿ ಬೆಂಗಳೂರಿನ ಜನರ ಜೀವನಾಡಿ ಬಿಎಂಟಿಸಿ. ಅದರೆ ನಮ್ಮ ಮೆಟ್ರೋ ಹಾಗೂ ಓಲಾ ಊಬರ್ ಗಳ ಸ್ಪರ್ಧೆಯ ಮಧ್ಯೆ ಬಿಎಂಟಿಸಿ ಜನರಿಂದ ಕೊಂಚ ದೂರ ಸರಿದಿರೋದು ಸುಳ್ಳಲ್ಲ. ಈ ಮಧ್ಯೆ ಒಕ್ಕರಿಸಿದ ಕೊರೋನಾ ಸಾಂಕ್ರಾಮಿಕ ಪಿಡುಗು ಬಿಎಂಟಿಸಿಯನ್ನು ಮತ್ತಷ್ಟು ನಷ್ಟಕ್ಕೆ ನೂಕಿದೆ. ಹೀಗಾಗಿ ಶತಾಯ ಗತಾಯ ನಷ್ಟದಿಂದ ಹೊರಬರಲು ಪ್ರಯತ್ನ ನಡೆಸಿರೋ ಬಿಎಂಟಿಸಿ ಈಗ ಚಾಲಕರ ನೇಮಕವನ್ನು ( private drivers) ಹೊರಗುತ್ತಿಗೆ ನೀಡಲು ಪ್ಲ್ಯಾನ್ ನಡೆಸಿದೆ ಅನ್ನೋ ಸಂಗತಿ ಬೆಳಕಿಗೆ ಬಂದಿದೆ.

ಹೌದು ಬಿಎಂಟಿಸಿಯಿಂದ ಪ್ರತಿನಿತ್ಯ ಸಾವಿರಾರು ಬಸ್ ಗಳು ರಸ್ತೆಗಿಳಿಯುತ್ತವೇ. ಈ ಪೈಕಿ ಒಂದೊಂದು ಬಸ್ ಎರಡೆರಡು ಶಿಫ್ಟ್ ನಂತೆ ಸಾವಿರಾರು ನೌಕರರು ಬಿಎಂಟಿಸಿ ಬಸ್ ಗಳನ್ನು ಚಲಾಯಿಸಿ ಬದುಕು ಕಟ್ಟಿಕೊಂಡಿದ್ದಾರೆ. ಆದರೆ ಈಗ ನಷ್ಟದ ಹಾದಿಯಲ್ಲಿರೋ ಬಿಎಂಟಿಸಿ ತನ್ನ ನೌಕರರಿಗೆ ಸಂಬಳ ಸೇರಿದಂತೆ ಯಾವುದೇ ಸೌಲಭ್ಯ ನೀಡುವ ಸ್ಥಿತಿಯಲ್ಲಿಲ್ಲ. ಹೀಗಾಗಿ ಬಿಎಂಟಿಸಿ ಪ್ರೈವೇಟ್ ನಿಂದ ಚಾಲಕರನ್ನು ಗುತ್ತಿಗೆ ಆಧಾರದ ಮೇಲೆ ನೇಮಕ ಮಾಡಿಕೊಳ್ಳಲು ಚಿಂತನೆ ನಡೆಸಿದೆ ಎನ್ನಲಾಗ್ತಿದೆ.

ಬಾಹ್ಯ ಏಜೆನ್ಸಿ ಮೂಲಕ ಚಾಲಕರ ನೇಮಕಕ್ಕೆ ಚಿಂತನೆ ನಡೆದಿದ್ದು, ಈ ಬಗ್ಗೆ ನಿನ್ನೆ ಬಿಎಂಟಿಸಿ ಆಂತರಿಕ ಮಂಡಳಿಯ ಸಭೆಯಲ್ಲಿ ಚರ್ಚೆ ನಡೆದಿದೆ ಎನ್ನಲಾಗ್ತಿದೆ. ಸಭೆಯಲ್ಲಿ ಖಾಸಗಿ ಚಾಲಕರನ್ನು ನೇಮಿಸಿದ್ರೇ ಆಗೋ ಸಾಧಕ-ಬಾಧಕಗಳ ಬಗ್ಗೆ ಗಂಭೀರ ಚರ್ಚೆ ನಡೆದಿದ್ದು, ಖಾಸಗಿ ಡ್ರೈವರ್ಸ್ ಗಳ ನೇಮಕದಿಂದ ಉಳಿತಾಯವಾಗಲಿದೆ ಸಂಸ್ಥೆಗೆ ಎಂಬ ಅಭಿಪ್ರಾಯ ವ್ಯಕ್ತವಾದ ಹಿನ್ನೆಲೆಯಲ್ಲಿ ಬಿಎಂಟಿಸಿ ಖಾಸಗಿ‌ಚಾಲಕರ ನೇಮಕಕ್ಕೆ ಸಿದ್ದತೆ ನಡೆಸಿದೆ ಎನ್ನಲಾಗ್ತಿದೆ.

ಖಾಸಗಿ ಚಾಲಕರನ್ನು ನೇಮಿಸಿಕೊಂಡು, ಚಾಲಕರು ಓಡಿಸಿದ ಟ್ರಿಪ್ ಗೆ ಅನುಸಾರವಾಗಿ ಸಂಬಳ ನೀಡುವುದು ಬಿಎಂಟಿಸಿ ಪ್ಲ್ಯಾನ್. ಇದರಿಂದ ಅವರಿಗೆ ಪಿಎಫ್, ಇಎಸ್ ಐ ಸೇರಿದಂತೆ ಯಾವುದೇ ಇತರ ಸೌಲಭ್ಯ ನೀಡೋ ಅಗತ್ಯವಿರೋದಿಲ್ಲ. ಅಲ್ಲದೇ ಚಾಲಕರ ನೇರವಾಗಿ‌ ನೇಮಕಗೊಳ್ಳದೇ ಏಜೆನ್ಸಿ ವತಿಯಿಂದ ನೇಮಕಗೊಳ್ಳೋದರಿಂದ ಖರ್ಚು ಕಡಿಮೆಯಾಗಲಿದೆ ಅನ್ನೋದು ಬಿಎಂಟಿಸಿ ಲೆಕ್ಕಾಚಾರ.

ಆದರೆ ಒಂದೊಮ್ಮೆ ರಾಜ್ಯದಲ್ಲಿ ಈ ಪದ್ಧತಿ ಅಳವಡಿಸಿಕೊಳ್ಳಲು ಬಿಎಂಟಿಸಿ ಹಾಗೂ ಸಾರಿಗೆ ಇಲಾಖೆ ಮುಂದಾದ್ರೇ ಹೋರಾಟ ನಡೆಸಿದ್ದಕ್ಕಾಗಿ ವಜಾಗೊಂಡ ಕಾರ್ಮಿಕರು ಶಾಶ್ವತ ವಾಗಿ ಕೆಲಸ ಕಳೆದುಕೊಂಡಂತಾಗಲಿದೆ. ಹೀಗಾಗಿ ಬಿಎಂಟಿಸಿ ಆಡಳಿತ ಮಂಡಳಿ ನಿರ್ಧಾರಕ್ಕೆ ಸಾರಿಗೆ ನೌಕರರ ಸಂಘ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ.

ಇದನ್ನೂ ಓದಿ : Loud Speaker Permission : ಬೆಂಗಳೂರಿನಲ್ಲಿ ಜೋರಾಗಲಿದೆ ಧರ್ಮ ದಂಗಲ್ : ಲೌಡ್ ಸ್ಪೀಕರ್ ಗೆ ಅನುಮತಿ ಕೋರಿ 700 ಅರ್ಜಿ ಸಲ್ಲಿಕೆ

ಇದನ್ನೂ ಓದಿ : Metro train : ಸೈಕ್ಲಿಂಗ್ ಪ್ರಿಯರಿಗೆ ಸಿಹಿಸುದ್ದಿ: ಮೆಟ್ರೋದಲ್ಲಿ ಕೊಂಡೊಯ್ಯಬಹುದು ಸೈಕಲ್‌

BMTC Privatization Hire private drivers to cover losses

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular