Motorola G32 launch: ಶೀಘ್ರದಲ್ಲೇ ಮಾರುಕಟ್ಟೆಗೆ ಲಗ್ಗೆ ಇಡಲಿದೆ ಮೊಟೊರೋಲ ಜಿ32

ಮೊಟೊರೊಲಾದ (Motorola) ಹೊಚ್ಚ ಹೊಸ ಸ್ಮಾರ್ಟ್‌ಫೋನ್ ಮೋಟೋ ಜಿ32 (Moto G32)ಶೀಘ್ರದಲ್ಲೇ ಭಾರತೀಯ ಮಾರುಕಟ್ಟೆಗೆ ಬರಲಿದೆ ಎಂದು ವರದಿಯಾಗಿದೆ. ಹೊಸ ಮೋಟೋ ಜಿ (Moto G32 launch) ಸರಣಿಯ ಫೋನ್‌ನ ಲಾಂಚ್ ಕುರೋತು ಲೆನೋವೋ-(Lenovo)ಮಾಲೀಕತ್ವದ ಕಂಪನಿಯು ಇನ್ನೂ ಅಧಿಕೃತವಾಗಿ ದೃಢೀಕರಿಸಿಲ್ಲ.ಆದರೆ ಈ ಫೋನ್‌ನ ಸ್ಪೆಸಿಫಿಕೇಶನ್ ಗಳು ಸೋರಿಕೆಯಾಗಿವೆ.


ಮೋಟೋ ಜಿ32 90ಹರ್ಟ್ಸ್ ರಿಫ್ರೆಶ್ ರೇಟ್ ಡಿಸ್ಪ್ಲೇಯನ್ನು ಹೊಂದಿದೆ ಎಂದು ಹೇಳಲಾಗುತ್ತದೆ. ಮತ್ತು (Unisoc T606 SoC ) ನಿಂದ ಚಾಲಿತವಾಗಬಹುದು. ಸೋರಿಕೆಯಾದ ಸ್ಪೆಸಿಫಿಕೇಶನ್ ಗಳು ಮೇ ತಿಂಗಳಲ್ಲಿ ಯುರೋಪ್‌ನಲ್ಲಿ ಅನಾವರಣಗೊಂಡ ಮೋಟೋ ಜಿ 32 ಗೆ ಹೋಲುತ್ತವೆ. ಇದು ಹೋಲ್-ಪಂಚ್ ಡಿಸ್ಪ್ಲೇ ಮತ್ತು 16-ಮೆಗಾಪಿಕ್ಸೆಲ್ ಟ್ರಿಪಲ್ ರಿಯರ್ ಕ್ಯಾಮೆರಾಗಳನ್ನು ಹೊಂದಿರುತ್ತದೆ ಎಂದು ನಿರೀಕ್ಷಿಸಲಾಗಿದೆ.
ಇನ್ನೊಂದು ವರದಿಯು ಜೂನ್ ತಿಂಗಳ ಕೊನೆಯಲ್ಲಿ ಅಥವಾ ಜುಲೈ ತಿಂಗಳ ಮೊದಲ ವಾರದಲ್ಲಿ ಭಾರತದಲ್ಲಿ ಬಿಡುಗಡೆ ಆಗಬಹುದು ಎಂದು ಅಂದಾಜಿಸಲಾಗಿದೆ.

ಮೋಟೋ ಜಿ32 ಸ್ಪೆಸಿಫಿಕೇಶನ್
ವರದಿಯ ಪ್ರಕಾರ, ಮೋಟೋ ಜಿ32 90ಹರ್ಟ್ಸ್ ರಿಫ್ರೆಶ್ ದರದೊಂದಿಗೆ 6.5-ಇಂಚಿನ ಎಚ್ ಡಿ+ ಐ. ಪಿ ಎಸ್ ಡಿಸ್ಪ್ಲೇಯನ್ನು ಹೊಂದಿರುತ್ತದೆ. ಹ್ಯಾಂಡ್ಸೆಟ್ ರಂಧ್ರ-ಪಂಚ್ ಡಿಸ್ಪ್ಲೇ ವಿನ್ಯಾಸವನ್ನು ಹೊಂದಿರಬಹುದು. ಮುಂಬರುವ ಫೋನ್ 4ಜಿಬಿ ರಾಮ್ ಜೊತೆಗೆ (Unisoc T606 SoC) ನೊಂದಿಗೆ ಚಾಲಿತವಾಗಿದೆ ಎಂದು ಹೇಳಲಾಗುತ್ತದೆ. ಮೊಟೊರೊಲಾ ಜಿ 32ನಲ್ಲಿ ಟ್ರಿಪಲ್ ಹಿಂಬದಿಯ ಕ್ಯಾಮರಾ ಘಟಕವನ್ನು ಒದಗಿಸುವ ನಿರೀಕ್ಷೆಯಿದೆ. ಇದು 16-ಮೆಗಾಪಿಕ್ಸೆಲ್ ಪ್ರೈಮರಿ ಸೆನ್ಸರ್ ಮತ್ತು ಎರಡು 2-ಮೆಗಾಪಿಕ್ಸೆಲ್ ಮ್ಯಾಕ್ರೋ ಮತ್ತು ಡೇಪ್ತ್ ಸೆನ್ಸಾರ್ ಒಳಗೊಂಡಿರುತ್ತದೆ ಎಂದು ಹೇಳಲಾಗುತ್ತದೆ.
ಸೆಲ್ಫಿಗಳಿಗಾಗಿ, 8-ಮೆಗಾಪಿಕ್ಸೆಲ್ ಫ್ರಾಂಟ್ ಕ್ಯಾಮೆರಾ ಸೆನ್ಸರ್ ಹೊಂದಿರಬಹುದು. ಸ್ಮಾರ್ಟ್‌ಫೋನ್ ಮೈಕ್ರೊ ಎಸ್‌ಡಿ ಕಾರ್ಡ್ ಮೂಲಕ (1 ಟಿಬಿ ವರೆಗೆ) ವಿಸ್ತರಿಸಬಹುದಾದ 64 ಜಿಬಿ ಇಂಟರ್ನಲ್ ಸಂಗ್ರಹಣೆಯನ್ನು ನೀಡಬಹುದು.
ಈ ಹೊಸ ಸ್ಮಾರ್ಟ್ ಫೋನ್ ನಲ್ಲಿನ ಕನೆಕ್ಟಿವಿಟಿ ಆಯ್ಕೆಗಳು 4ಜಿ ಎಲ್ ಟಿ ಇ, ವೈಫೈ, ಬ್ಲೂಟೂತ್v5, 3.5 ಎಂಎಂ ಆಡಿಯೋ ಜಾಕ್ ಮತ್ತು ಯುಎಸ್ ಬಿ ಟೈಪ್-ಸಿ ಪೋರ್ಟ್ ಅನ್ನು ಒಳಗೊಂಡಿರುವ ಸಾಧ್ಯತೆಯಿದೆ. ದೃಢೀಕರಣಕ್ಕಾಗಿ ಸೈಡ್-ಮೌಂಟೆಡ್ ಫಿಂಗರ್‌ಪ್ರಿಂಟ್ ಸ್ಕ್ಯಾನರ್ ಇರಬಹುದು.
ಬ್ಯಾಟರಿ ಬಗ್ಗೆ ಹೇಳಿದರೆ, 5000 ಎಂ ಎಚ್ ಬ್ಯಾಟರಿ ಹಾಗೂ 18 ವಾಟ್ ಚರ್ಜಿಂಗ್ ಬೆಂಬಲಿಸುತ್ತದೆ.

ಇದನ್ನೂ ಓದಿ: Mithali Raj Retirement: ಎಲ್ಲಾ ಪ್ರಕಾರದ ಕ್ರಿಕೆಟಿಗೆ ನಿವೃತ್ತಿ ಘೋಷಿಸಿದ ಮಿಥಾಲಿ ರಾಜ್; ಟ್ವೀಟ್ ಮೂಲಕ ಭಾವನೆಗಳನ್ನು ಹೊರ ಹಾಕಿದ ಮಾಜಿ ನಾಯಕಿ
(Motorola G32 launch soon in India)

Comments are closed.