ಭಾನುವಾರ, ಏಪ್ರಿಲ್ 27, 2025
Homekarnatakaಬಸ್ ಗಳಿಗೆ ಬೆಂಕಿ ಕಾಟ : MIDI BUSಗಳ ಓಡಾಟವನ್ನೇ ನಿಲ್ಲಿಸಿದ ಬಿಎಂಟಿಸಿ

ಬಸ್ ಗಳಿಗೆ ಬೆಂಕಿ ಕಾಟ : MIDI BUSಗಳ ಓಡಾಟವನ್ನೇ ನಿಲ್ಲಿಸಿದ ಬಿಎಂಟಿಸಿ

- Advertisement -

ನಗರದ ಜೀವನಾಡಿ ಎನ್ನಿಸಿರೋ ಬಿಎಂಟಿಸಿ ಬಸ್ ಗಳು ಕೆಲವೊಮ್ಮೆ ಜನರ ಜೀವಕ್ಕೆ ಕುತ್ತು ತಂದಿದ್ದು ಸುಳ್ಳಲ್ಲ.‌ಅದರಲ್ಲೂ ಕೆಲದಿನಗಳಿಂದ ಬೆಂಗಳೂರಿನ ಹಲವು ಬಸ್ ಗಳು ಬೆಂಕಿಗೆ ಆಹುತಿಯಾಗೋ ಮೂಲಕ ಪ್ರಯಾಣಿಕರಿಗೆ ಭಯ ಹುಟ್ಟಿಸಿತ್ತು. ಒಂದಾದ ಮೇಲೊಂದರಂತೆ ಬಸ್ ಗಳು ಸತತ ಬೆಂಕಿಗೆ ಆಹುತಿಯಾಗುತ್ತಿರೋದರಿಂದ ಬಿಎಂಟಿಸಿ ಎಚ್ಚೆತ್ತುಕೊಂಡಿದೆ. ಹೀಗಾಗಿ ಬಿಎಂಟಿಸಿ ಇನ್ಮುಂದೇ ಮಿಡಿ ಬಸ್ ಗಳನ್ನು (MIDI BUS ರಸ್ತೆಗಿಳಿಸದಿರಲು ನಿರ್ಧರಿಸಿದೆ.

ಏಪ್ರಿಲ್ 9ರಂದು ಶೇಷಾದ್ರಿ ರಸ್ತೆಯ ಕೆಆರ್ ಸರ್ಕಲ್ ಬಳಿ ಒಂದು ಬಸ್ ಹೊತ್ತಿ ಉರಿದಿತ್ತು. ಇದಕ್ಕೂ ಮೊದಲು ನಗರದಲ್ಲಿ ಎರಡು ಬಸ್ ಗಳು ಬೆಂಕಿಗೆ ಆಹುತಿಯಾಗಿದ್ದವು. ಹೀಗಾಗಿ ಸತತವಾಗಿ BMTC ಮಿಡಿ ಬಸ್ ಗಳಲ್ಲಿ ಏಕಾಏಕಿ ಕಾಣಿಸಿಕೊಳ್ಳುತ್ತಿರುವ ಬೆಂಕಿಯ ಕಾರಣ ಕಂಡುಕೊಳ್ಳಲು ವಿಫಲವಾಗಿರುವ ಬಿಎಂಟಿಸಿ ಇದೇ ಕಾರಣಕ್ಕೆ ಮಿಡಿ ಬಸ್ ಗಳನ್ನು ಸೇವೆಯಿಂದ ನಿಲ್ಲಿಸಲು BMTC ನಿರ್ಧರಿಸಿದೆ. ಈ ಬಗ್ಗೆ ಎಲ್ಲಾ ವಿಭಾಗದ ಡಿಪೋ ಮ್ಯಾನೇಜರ್ ಗಳಿಗೆ ಮಿಡಿ ಬಸ್ ರಸ್ತೆಗೆ ಇಳಿಸದಂತೆ ಬಿಎಂಟಿಸಿ ಎಂಡಿ ಆದೇಶಿಸಿದ್ದಾರಂತೆ.

ಜನವರಿ 21 ರಂದು ಚಾಮರಾಜಪೇಟೆಯ ಮಕ್ಕಳ ಕೂಟದ ಬಳಿ ಒಂದು ಮಿಡಿ ಬಸ್ ಧಗಧಗನೆ ಹೊತ್ತಿ ಉರಿದಿತ್ತು. ಅಲ್ಲದೇ ಫೆಬ್ರವರಿ 1 ರಂದು ಜಯನಗರ ಸೌತ್ ಎಂಡ್ ಸರ್ಕಲ್ ಮೆಟ್ರೋ ಸ್ಟೇಷನ್ ಬಳಿ ಮತ್ತೊಂದು ಬಸ್ ಭಸ್ಮವಾಗಿತ್ತು. ಬಳಿಕ ತಂತ್ರಜ್ಞರ ಸಮಿತಿ ರಚಿಸಿ ಬೆಂಕಿಗಾಹುತಿಯ ಕಾರಣದ ಮೂಲ ಪತ್ತೆ ಹಚ್ಚಿದ್ದ ನಿಗಮ, ಇದಾಗಿ ಕೆಲವೇ ದಿನಗಳಲ್ಲಿ ನಡು ರಸ್ತೆಯಲ್ಲೇ ಮತ್ತೊಂದು ಬಸ್ ಬೆಂಕಿಗೆ ಆಹುತಿಯಾಗಿತ್ತು. ಹೀಗಾಗಿ ಮಿಡಿ ಬಸ್ ನಿಲ್ಲಿಸಲು ಬಿಎಂಟಿಸಿ ನಿರ್ಧರಿಸಿದೆ.

BMTC ಬಳಿ 186 ಮಿಡಿ ಬಸ್ ಗಳಿವೆ. ಈ ಪೈಕಿ ಮೂರು ಮಿಡಿ ಬಸ್ ಗಳು ಬೆಂಕಿಗಾಹುತಿಯಾಗಿದೆ. ಸದ್ಯ 183 ಮಿಡಿ ಬಸ್ ಗಳು ಸುಸ್ಥಿತಿಯಲ್ಲಿದೆ. ಆದರೂ ಮುನ್ನಚ್ಚರಿಕೆ ಕ್ರಮವಾಗಿ ಈ 183 ಬಸ್‌ಗಳ ಓಡಾಟ ಸ್ಥಗಿತಗೊಳಿಸಿ ಬಿಎಂಟಿಸಿ ಆದೇಶ ಹೊರಡಿಸಿದೆ. ಈ ಹಿಂದೆ ಮಿಡಿ ಬಸ್ ನಲ್ಲಿ ಬೆಂಕಿಯಾಗೋದಿಕ್ಕೆ ಅದರ ವಿನ್ಯಾಸವೇ ಕಾರಣ ಎಂದು ಹೇಳಲಾಗಿತ್ತು. ಗೇರ್ ಬಾಕ್ಸ್ ಬಳಿಯೇ ಇಂಜಿನ್, ಡಿಸೇಲ್ ಬಾಕ್ಸ್ ಇರೋದರಿಂದಲೇ ಹೀಟ್ ನಿಂದ ಬೆಂಕಿ ಹೊತ್ತಿಕೊಳ್ಳುತ್ತಿದೆ ಎಂಬ ಮಾತು ಕೇಳಿಬಂದಿದೆ. ಹೀಗಾಗಿ ಮತ್ತೆ ಬಸ್ ಗೆ ಬೆಂಕಿ ಹಾಗೂ ಮುಜುಗರ ಎದುರಿಸೋದು ಬೇಡ ಎಂಬ ಕಾರಣಕ್ಕೆ ಈಗ ಬಸ್ ಗಳನ್ನೇ ನಿಲ್ಲಿಸೋ ತೀರ್ಮಾನಕ್ಕೆ ಬಂದಿದೆ.

ಇದನ್ನೂ ಓದಿ : ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿ ಪಿಂಕ್‌ ಮೂನ್‌ ಫೋಟೊ ತೆಗೆಯಬೇಕೆ? ಹಾಗಾದರೆ ಈ 10 ಟಿಪ್ಸ್‌ ಪಾಲಿಸಿ

ಇದನ್ನೂ ಓದಿ : ದ್ವೀತಿಯ ಪಿಯುಸಿ ವಿದ್ಯಾರ್ಥಿಗಳಿಗೆ ಸಿಹಿಸುದ್ದಿ: ಬಸ್ ನಲ್ಲಿ ಉಚಿತ ಪ್ರಯಾಣ

BMTC stopped Service for MIDI BUS fire fear

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular