ಬೆಂಗಳೂರು:corona alert : ಚೀನಾದಲ್ಲಿ ಕೊರೊನಾ ಸೋಂಕಿನ ಅಬ್ಬರ ದಿನದಿಂದ ದಿನಕ್ಕೆ ಮೀತಿಮೀರುತ್ತಿದೆ. ಹೀಗಾಗಿ ದೇಶದಲ್ಲಿಯೂ ಕೂಡ ಕೊರೊನಾ ಕುರಿತಂತೆ ಅಗತ್ಯ ಎಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ನಿನ್ನೆ ಪ್ರಧಾನಿ ಮೋದಿ ನೇತೃತ್ವದಲ್ಲಿ ದೆಹಲಿಯಲ್ಲಿ ಕೋವಿಡ್ ಉನ್ನತ ಮಟ್ಟದ ಸಭೆ ನಡೆಸಿದ್ದರೆ ಇತ್ತ ಬೆಳಗಾವಿಯಲ್ಲಿ ಸಿಎಂ ಬೊಮ್ಮಾಯಿ ನೇತೃತ್ವದಲ್ಲಿಯೂ ಸಭೆ ನಡೆಸಲಾಗಿದ್ದು ರಾಜ್ಯ ಸರ್ಕಾರದಿಂದ ಕೋವಿಡ್ ಕುರಿತಂತೆ ಹೊಸ ಮಾರ್ಗಸೂಚಿ ಬಿಡುಗಡೆ ಮಾಡಲಾಗಿದೆ.
ಈ ಎಲ್ಲದರ ನಡುವೆ ಇತ್ತ ಬಿಎಂಟಿಸಿ ಕೂಡ ಕೊರೊನಾ ಕುರಿತಂತೆ ಅಗತ್ಯ ಎಚ್ಚರಿಕೆ ಕ್ರಮಗಳನ್ನು ಮುಂದಾಗಿದ್ದು ಪ್ರಯಾಣಿಕರಿಗೆ ಅಗತ್ಯ ಸೂಚನೆಗಳನ್ನು ಹೊರಡಿಸಿದೆ. ಬಿಎಂಟಿಸಿ ಸಿಬ್ಬಂದಿ ಹಾಗೂ ಬಸ್ನಲ್ಲಿ ಸಂಚರಿಸುವ ಪ್ರಯಾಣಿಕರು ಇನ್ಮೇಲೆ ಮಾಸ್ಕ್ ಧರಿಸಬೇಕು ಎಂದು ಬಿಎಂಟಿಸಿ ನಿರ್ದೇಶನ ನೀಡಿದೆ. ಈ ಮೂಲಕ ಯಾವುದೇ ಕೊರೊನಾ ಸೋಂಕು ಹರಡದಂತೆ ತಡೆಯಲು ಬಿಎಂಟಿಸಿ ಮುಂದಾದಂತಾಗಿದೆ.
ಇನ್ನು ಈ ವಿಚಾರವಾಗಿ ಮಾತನಾಡಿದ ಬಿಎಂಟಿಸಿ ಮಾಹಿತಿ ತಂತ್ರಜ್ಞಾನ ನಿರ್ದೇಶಕ ಸೂರ್ಯಸೇನ್, ಬಿಎಂಟಿಸಿ ಬಸ್ಗಳಲ್ಲಿ ಸಂಚರಿಸುವ ಪ್ರಯಾಣಿಕರಿಗೆ ಮಾಸ್ಕ್ ಧರಿಸುವಂತೆ ಸೂಚನೆ ನೀಡಿದ್ದೇವೆ. ನಮ್ಮ ಸಿಬ್ಬಂದಿಗೆ ಕೊರೊನಾ ಮಾರ್ಗಸೂಚಿ ಪಾಲಿಸುವಂತೆ ಹೇಳಿದ್ದೇವೆ. ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳಲು ಹೆಚ್ಚಿನ ಬಸ್ಗಳನ್ನು ರಸ್ತೆಗಿಳಿಸುವ ಸಿದ್ಧತೆಯಲ್ಲಿದ್ದೇವೆ. ಕಾಲ ಕಾಲಕ್ಕೆ ಬಸ್ಗಳನ್ನು ಸ್ಯಾನಿಟೈಸ್ ಮಾಡುತ್ತೇವೆ ಎಂದು ಹೇಳಿದ್ದಾರೆ .
ಕೊರೊನಾ ನಾಲ್ಕನೇ ಅಲೆ ಮತ್ತೆ ಆರಂಭವಾಗಬಹುದು ಎಂಬ ಆತಂಕ ದೇಶದಲ್ಲಿ ಎದುರಾಗಿದೆ. ಕೊರೊನಾ ಮೊದಲ ಅಲೆಯ ಸಂದರ್ಭದಲ್ಲಿ ಈ ಸೋಂಕಿನ ಗಂಭೀರತೆ ಯಾರಿಗೂ ತಿಳಿದಿರಲಿಲ್ಲ. ಆದರೆ ಈಗ ಪ್ರತಿಯೊಬ್ಬರಿಗೂ ಕೊರೊನಾ ಅಲೆ ಬಂದರೆ ಹೇಗಿರುತ್ತೆ ಎಂಬ ಜ್ಞಾನವಿದೆ. ಹೀಗಾಗಿ ಈ ಬಾರಿ ಜನರು ಕೊರೊನಾ ಮಾರ್ಗಸೂಚಿಗಳನ್ನು ಕಟ್ಟು ನಿಟ್ಟಾಗಿ ಪಾಲಿಸುವ ನಿರೀಕ್ಷೆಯಿದೆ.
ಇದನ್ನು ಓದಿ : KHPT Recruitment 2023:ಕರ್ನಾಟಕ ಆರೋಗ್ಯ ಪ್ರಚಾರ ಟ್ರಸ್ಟ್ ನಲ್ಲಿ ಪದವೀಧರರ ನೇಮಕಾತಿ
ಇದನ್ನೂ ಓದಿ : Jaydev Unadkat : 12 ವರ್ಷಗಳ ನಂತರ ಭಾರತ ಪರ ಟೆಸ್ಟ್ ಆಡುವ ಅವಕಾಶ, ಇದು ಸೌರಷ್ಟ್ರದ ಛಲದಂಕಮಲ್ಲನ ಕಥೆ
corona alert bmtc says passengers to wear masks compulsorily