“ನವರಸ ನಟನ ಸಾರ್ವಭೌಮ” ಕೈಕಾಲ ಸತ್ಯನಾರಾಯಣ ವಿಧಿವಶ

ತೆಲುಗು ಹಿರಿಯ ನಟ ಕೈಕಾಲ ಸತ್ಯನಾರಾಯಣ (Veteran Actor Kaikala Satyanarayana) ಅವರು ತಮ್ಮ 87ನೇ ವರ್ಷದಲ್ಲಿ ಇಹಲೋಕವನ್ನು ತ್ಯಜಿಸಿದ್ದಾರೆ. ಹಿರಿಯ ನಟನ ಸಾವಿನ ಸುದ್ದಿಯನ್ನು ತಿಳಿದ ತೆಲುಗು ಸಿನಿರಂಗ ಕಂಬನಿಯನ್ನು ಮಿಡಿದಿದ್ದಾರೆ. ಕಳೆದ ವರ್ಷ ಅಕ್ಟೋಬರ್‌ನಲ್ಲಿ ಹಿರಿಯ ನಟ ಮನೆಯಲ್ಲಿ ಕುಸಿದು ಬಿದ್ದು ಆಸ್ಪತ್ರೆಗೆ ದಾಖಲಾಗಿದ್ದರು. ನಂತರ ನವೆಂಬರ್‌ ತಿಂಗಳನಿಂದ ಕೃತಕ ಉಸಿರಾಟದ ಸಹಾಯದಿಂದ ಸಾವು ಬದುಕಿನೊಂದಿಗೆ ಹೋರಾಟ ನಡೆಸುತ್ತಿದ್ದು, ಅಲ್ಲಿಂದ ಅವರ ಆರೋಗ್ಯ ಸ್ಥಿರವಾಗಿ ಇರಲಿಲ್ಲ.

1935ಜೂಲಾಯಿ 25ರಂದು ಆಂಧ್ರ ಪ್ರದೇಶದ ಕೃಷ್ಣ ಜಿಲ್ಲೆಯಲ್ಲಿ ಹಿರಿಯ ನಟ ಕೈಕಾಲ ಸತ್ಯನಾರಾಯಣ ಜನಿಸಿದರು. ನವರಸ ನಟನ ಸಾರ್ವಭೌಮ ಎಂದೇ ಹೆಸರು ಪಡೆದಿದ್ದ ಹಿರಿಯ ನಟ ಕೈಕಾಲ 200 ನಿರ್ದೇಶಕರೊಂದಿಗೆ ಸುಮಾರು 770 ಸಿನಿಮಾಗಳಲ್ಲಿ ನಟಿಸಿ ಪ್ರಖ್ಯಾತಿಯನ್ನು ಪಡೆದುಕೊಂಡಿದ್ದಾರೆ. 1959ರಲ್ಲಿ “ಸಿಪಾಯಿ ಕುತುರು” ಸಿನಿಮಾ ಮೂಲಕ ಸಿನಿಲೋಕಕ್ಕೆ ಪಾದಾರ್ಪಣೆ ಮಾಡಿದ್ದಾರೆ. ಇನ್ನೂ ಅವರು ಮಹೇಶ್‌ ಬಾಬು ನಟನೆಯ “ಮಹರ್ಷಿ” ಸಿನಿಮಾದಲ್ಲಿ ಕೊನೆಯದಾಗಿ ನಟಿಸಿದ್ದಾರೆ.

ಕಳೆದ ಐದು ದಶಕಗಳಿಂದ ನಾಯಕ ನಟ, ಪೋಷಕ ನಟ, ಖಳನಾಯಕನಾಗಿ ನಟಿಸಿ ಸಿನಿರಂಗಕ್ಕೆ ಅಪಾರ ಕೊಡುಗೆಯನ್ನು ಸಲ್ಲಿಸಿದ್ದಾರೆ. ಹಿರಿಯ ನಟ ಕೈಕಾಲ ಅವರು ಕೃಷ್ಣಾರ್ಜುನ ಯುದ್ಧಂ, ನರ್ತನಾಸಲ, ಯಮಗೋಲ, ಸೊಗ್ಗಡು, ಅಡವಿ ರಾಮುಡು, ದಾನ ವೀರ ಸೂರ ಕರ್ಣ, ತಯರಮ್ಯ ಬಂಗಾರಯ್ಯ, ಗ್ಯಾಂಗ್‌ ಲೀಡರ್‌ ಸೇರಿದಂತೆ ಮುಂತಾದ ಹಿಟ್‌ ಸಿನಿಮಾಗಳಲ್ಲಿ ನಟಿಸಿದ್ದಾರೆ.

ಇದನ್ನೂ ಓದಿ : Darshan – Sudeep : ಸುದೀಪ್‌ ಬೆಂಬಲಕ್ಕೆ ಧನ್ಯವಾದ ಹೇಳಿದ ದರ್ಶನ್‌ : ಹಳೆಯದನ್ನು ಮರೆತು ಇಬ್ಬರು ಒಂದಾಗಿ ಎಂದ ಜಗ್ಗೇಶ್

ಇದನ್ನೂ ಓದಿ : Jhoome Jo Pathaan : “ಪಠಾನ್‌” ಸಿನಿಮಾದ ಎರಡನೇ ಹಾಡು “ಜೂಮ್‌ ಜೋ” ರಿಲೀಸ್‌ : ಇನ್ನೊಂದು ಸಲ ಹಾಟ್‌ ಲುಕ್‌ನಲ್ಲಿ ಶಾರುಖ್‌ ಮತ್ತು ದೀಪಿಕಾ ಪಡುಕೋಣೆ

ಇದನ್ನೂ ಓದಿ : kantara: ಆಸ್ಕರ್​ ರೇಸ್​ಗೆ ಇಳಿಯಲು ಸಜ್ಜಾದ ಕಾಂತಾರ : ಕಾಂತಾರ 2 ಬಗ್ಗೆಯೂ ಹೊಂಬಾಳೆ ಫಿಲ್ಮ್ಸ್​​ನಿಂದ ಬಿಗ್​ ಅಪ್​​ಡೇಟ್​

ಇದನ್ನೂ ಓದಿ : ಕೆಜಿಎಫ್‌ ಸಿನಿಮಾಕ್ಕೆ 4 ವರ್ಷ : ಇತಿಹಾಸ ಸೃಷ್ಟಿಸಿದ ದಿನವನ್ನು ನೆನಪಿಸಿದ ಹೊಂಬಾಳೆ ಫಿಲ್ಮ್ಸ್

ರಾಮ ಫಿಲ್ಮ್ಸ್‌ ಪ್ರೊಡಕ್ಷನ್‌ ಬ್ಯಾನರ್‌ ಅಡಿಯಲ್ಲಿ ನಿರ್ಮಾಪಕರಾಗಿ ಕೈಕಾಲ ಅವರು ಕೊಡಮ ಸಿಂಹಂ, ಮುದ್ದಲ ಮೊಗುಡು, ಬಂಗಾರು ಕುಟುಂಬಂ ಸೇರಿದಂತೆ ಮುಂತಾದ ಸಿನಮಾಗಳ ಪ್ರೆಸೆಂಟರ್‌ ಆಗಿ ಕೂಡ ಕಾರ್ಯನಿರ್ವಹಿಸಿದ್ದಾರೆ. ಅಷ್ಟೇ ಅಲ್ಲದೇ ರಾಜಕೀಯ ಕ್ಷೇತ್ರಕ್ಕೆ ಎಂಟ್ರಿ ನೀಡಿದ ಕೈಕಾಲ ಅವರು ಮಚಿಲಿಪಟ್ನಂನಿಂದ ಎಂಪಿಯಾಗಿ ಸೇವೆ ಸಲ್ಲಿಸಿದ್ದಾರೆ. ಹಿರಿಯ ನಟ ಕೈಕಾಲ ಸತ್ಯನಾರಾಯಣ ಅವರ ನಿಧನದ ಸುದ್ದಿಯನ್ನು ತಿಳಿದ ತೆಲುಗು ಸಿನಿರಂಗದವರು ಕಂಬನಿ ಮಿಡಿದಿದ್ದು, ತೆರೆಯ ಮೇಲಿನ ಅವರ ಅದ್ಭುತ ನಟನೆ ಬಗ್ಗೆ ಸ್ಮರಿಸಿದ್ದಾರೆ.

Veteran Actor Kaikala Satyanarayana “Sovereign of Navarasa Actor” passed away

Comments are closed.