ಬೆಂಗಳೂರು : ದೇಶದಾದ್ಯಂತ ಕೊರೋನಾ ಅಬ್ಬರ ಎಲ್ಲೇ ಮೀರುತ್ತಿರುವಾಗಲೇ ಉದ್ಯಾನನಗರಿ ಬೆಂಗಳೂರು ಮತ್ತೊಮ್ಮೆ(Dangerous Zone Bangalore) ಕೊರೋನಾ ಹಾಟ್ ಸ್ಪಾಟ್ ರೂಪ ಪಡೆಯುತ್ತಿದ್ದು, ರಾಜಧಾನಿಯಲ್ಲಿ ಪ್ರತಿನಿತ್ಯ ಸಾವಿರಾರು ಜನರಿಗೆ ಸೋಂಕು ಹರಡುತ್ತಿದೆ. ಅಲ್ಲದೇ ನಗರದ ಪಾಸಿಟಿವಿಟಿ ರೇಟ್ ಕೂಡ ಏರುಮುಖವಾಗುತ್ತಲೇ ಇದೆ. ರಾಜಧಾನಿಯಲ್ಲಿ ಕಾಡ್ಗಿಚ್ಚು ನಂತೆ ಕೋವಿಡ್ ಸೋಂಕು ಹರಡುತ್ತಿದ್ದು, ಬೆಂಗಳೂರಿನ ಎಲ್ಲ ವಲಯ ಕೊರೊನಾದ ಹಾಟ್ ಸ್ಪಾಟ್ ಗಳಾಗಿ ಬದಲಾಗುತ್ತಿವೆ.
ರಾಜಧಾನಿಯಲ್ಲಿ ಕರೋನಾ ಚಿಕಿತ್ಸೆಗಾಗಿ ಈಗಾಗಲೇ ಆರಕ್ಕೂ ಹೆಚ್ಚು ಆಸ್ಪತ್ರೆಗಳನ್ನು ಮೀಸಲಿರಿಸಲಾಗಿದ್ದು, ಬೆಂಗಳೂರಿನ್ನು 8 ವಲಯಗಳನ್ನಾಗಿ ವಿಂಗಡಿಸಲಾಗಿದೆ. ವಲಯದ ಆಧಾರದಲ್ಲಿ ಕೊರೋನಾ ರೋಗಿಗಳ ನಿರ್ವಹಣೆ,ಹೋಂ ಐಷೋಲೇಶನ್ ಸೇರಿದಂತೆ ಎಲ್ಲದಕ್ಕೂ ಸ್ಪಷ್ಟ ನಿಯಮ ರೂಪಿಸಲಾಗಿದೆ. ಇನ್ನು ನಗರದ ಯಾವೆಲ್ಲಾ ವಾರ್ಡ್ ಗಳಲ್ಲಿ ಎಷ್ಟೆಷ್ಟು ಪಾಸಿಟಿವಿಟಿ ರೇಟ್ ಇದೇ ಅನ್ನೋದನ್ನು ಗಮನಿಸೋದಾದರೇ, ಬೆಂಗಳೂರಿನ 8 ವಲಯ ಗಳೂ ರೆಡ್ ಝೋನ್ ತಲುಪಿವೆ.
ಬೆಂಗಳೂರಿನ ಯಾವ ವಲಯಗಳು ಸೇಫ್ ಅಲ್ಲ ಅನ್ನೋದು ಅಂಕಿ ಅಂಶಗಳಿಂದ ಸಾಬೀತಾಗಿದ್ದು, ಪೂರ್ವ ವಲಯ ಬೆಂಗಳೂರಿನ ಮೋಸ್ಟ್ ಡೇಂಜರ್ ಝೋನ್ ಎಂಬುದನ್ನು ಪಾಸಿಟಿವಿಟಿ ರೇಟ್ ಧೃಡಪಡಿಸಿದೆ. ವಲಯವಾರು ಪಾಸಿಟಿವಿಟಿ ರೇಟ್ ಗಮನಿಸೋದಾದರೇ,
- ಬೊಮ್ಮನಹಳ್ಳಿ (ವಲಯ ) 5.16% ರಷ್ಟು ಪಾಸಿಟಿವಿಟಿ ದರ ಇದೆ.
- ಯಲಹಂಕ-5.42% ಪಾಸಿಟಿವಿಟಿ ರೇಟ್ ತಪುಲಿದ್ದು, ಜನರ ಆತಂಕಕ್ಕೆ ಕಾರಣವಾಗಿದೆ.
- ಪಶ್ಚಿಮ-06.07% ಪಾಸಿಟಿವಿಟಿ ದರವಾಗಿದ್ದು
- ಆರ್ ಆರ್ ನಗರ-06.16% ರಷ್ಟಾಗಿದೆ.
- ದಾಸರಹಳ್ಳಿ-06.50%
- ಮಹದೇವಪುರ-07.55%
- ದಕ್ಷಿಣ ವಲಯ-07.55%
- ಬೆಂಗಳೂರು ಪೂರ್ವ ವಲಯ-08.08% ಪಾಸಿಟಿವಿಟಿ ದರವಿದೆ.
ಸೋಮವಾರ ಒಂದೇ ದಿನ ನಗರದಲ್ಲಿ 11 ಸಾವಿರಕ್ಕೂ ಅಧಿಕ ಕೊರೋನಾ ಪ್ರಕರಣಗಳು ಬೆಂಗಳೂರಿನಲ್ಲಿ ವರದಿಯಾಗಿದೆ. ಕಳೆದ 11 ದಿನದಳ ಅವಧಿಯಲ್ಲಿ ಕೊರೋನಾ ಪ್ರಕರಣ ಏಕಾಏಕಿ ಏರಿಕೆಯಾಗಿದ್ದು ಪಾಸಿಟಿವಿಟಿ ದರ ಆರಂಭಕ್ಕೆ ಹೋಲಿಸಿದರೇ ಈಗ ಮೂರರಷ್ಟು ಹೆಚ್ಚಾಗಿದೆ. ಬೆಂಗಳೂರಿನ ಪರಿಸ್ಥಿತಿ ನಿಯಂತ್ರಣಕ್ಕೆ ನೈಟ್ ಕರ್ಪ್ಯೂ ಹಾಗೂ ವೀಕೆಂಡ್ ಕರ್ಪ್ಯೂ ಮಾತ್ರ ಸಾಕಾಗೋದಿಲ್ಲ. ಕಠಿಣ ನಿಯಮ ಅಥವಾ ಲಾಕ್ ಡೌನ್ ಅಗತ್ಯವಿದೆ ಎಂಬ ಮಾತು ಕೇಳಿ ಬಂದಿದೆ. ಇದಕ್ಕೆ ಪೂರಕವಾಗಿ ಸಿಎಂ ಬೊಮ್ಮಾಯಿ ಕೂಡ ಪರಿಸ್ಥಿತಿ ನಿಯಂತ್ರಣಕ್ಕೆ ಲಾಕ್ ಡೌನ್ ಅನಿವಾರ್ಯ ಎಂಬರ್ಥದಲ್ಲಿ ಮಾತಾನಾಡಿದ್ದು, ಒಟ್ಟಿನಲ್ಲಿ ಬೆಂಗಳೂರು ಮತ್ತೊಮ್ಮೆ ಡೇಂಜರ್ ಝೋನ್ ನಲ್ಲಿ ನಿಂತಿದ್ದು ದುಡಿಯುವ ವರ್ಗ ಮತ್ತೊಮ್ಮೆ ತುತ್ತಿಗೆ ಪರದಾಡುವ ಸ್ಥಿತಿಗೆ ತಲುಪುವ ಆತಂಕದಲ್ಲಿದೆ.
ಇದನ್ನೂ ಓದಿ : Covid-19 Omicron : ದೇಶದಲ್ಲಿ 1.8 ಲಕ್ಷ ಹೊಸ ಕೋವಿಡ್ ಪ್ರಕರಣ: 8 ಲಕ್ಷ ಗಡಿ ದಾಟಿದ ಸಕ್ರಿಯ ಪ್ರಕರಣ
ಇದನ್ನೂ ಓದಿ : ಶಾಲಾ/ಕಾಲೇಜು ಬಂದ್ ಬಗ್ಗೆ ಮಹತ್ವದ ಮಾಹಿತಿ ನೀಡಿದ ಸಚಿವ ಬಿ.ಸಿ ನಾಗೇಶ್
(corona virus Dangerous Zone Bangalore: How Much Do You Know Positivity Rate)