Rahul Dravid Birthday : ರಾಹುಲ್ ದ್ರಾವಿಡ್‌ಗೆ 49ನೇ ಜನ್ಮದಿನ, ಶುಭಾಶಯಗಳ ಮಹಾಪೂರ

ಬೆಂಗಳೂರು: ಟೀಮ್ ಇಂಡಿಯಾ ಮುಖ್ಯ ಕೋಚ್, ಮಾಜಿ ನಾಯಕ ರಾಹುಲ್ ದ್ರಾವಿಡ್ಅ (Rahul Dravid Birthday)ವರಿಗೆ ಇಂದು 49ನೇ ಜನ್ಮದಿನದ ಸಂಭ್ರಮ. ಈ ಸಂದರ್ಭದಲ್ಲಿ ಹಾಲಿ, ಮಾಜಿ ಕ್ರಿಕೆಟಿಗರು ಸೇರಿದಂತೆ ಅನೇಕ ಗಣ್ಯರು ಅವರಿಗೆ ಶುಭ ಹಾರೈಸಿದ್ದಾರೆ.

‘509 ಅಂತರರಾಷ್ಟ್ರೀಯ ಪಂದ್ಯಗಳು, 24,208 ರನ್‌ಗಳು, 48 ಶತಕಗಳು, ಟೀಮ್ ಇಂಡಿಯಾದ ಮಾಜಿ ನಾಯಕ, ಹಾಲಿ ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಅವರಿಗೆ ಹುಟ್ಟು ಹಬ್ಬದ ಶುಭಾಶಯಗಳು’ ಇಂದು ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಟ್ವೀಟ್ ಮಾಡಿದೆ.

24,208 ರನ್ನುಗಳು, 48 ಶತಕಗಳು, 2018ರ 19 ವರ್ಷದೊಳಗಿನವರ ವಿಶ್ವಕಪ್ ವಿಜೇತ ತಂಡದ ಕೋಚ್‌ಗೆ ಹುಟ್ಟು ಹಬ್ಬದ ಶುಭಾಶಯಗಳು ಎಂದು ಅಂತರರಾಷ್ಟ್ರೀಯ ಕ್ರಿಕೆಟ್ ಸಮಿತಿ (ಐಸಿಸಿ) ಟ್ವೀಟ್ ಮಾಡಿದೆ.

ಇದನ್ನೂ ಓದಿ: Rahul Dravid Coach : ರಾಹುಲ್‌ ದ್ರಾವಿಡ್‌ ಟೀಂ ಇಂಡಿಯಾ ಮುಖ್ಯ ಕೋಚ್‌ : ಬಿಸಿಸಿಐ ಆದೇಶ

ಇಂಡಿಯನ್ ಪ್ರೀಮಿಯರ್ ಲೀಗ್‌ನ ರಾಯಲ್ ಚಾಲೆಂಜರ್ಸ್ ಬೆಂಗಳೂರು, ಮುಂಬೈ ಇಂಡಿಯನ್ಸ್, ಸನ್‌ರೈಸರ್ಸ್ ಹೈದರಾಬಾದ್ ತಂಡಗಳೂ ತಮ್ಮ ಅಧಿಕೃತ ಟ್ವಿಟರ್ ಹ್ಯಾಂಡಲ್ ಮೂಲಕ ಶುಭಾಶಯ ಕೋರಿವೆ.

‘ಹುಟ್ಟುಹಬ್ಬದ ಶುಭಾಶಯಗಳು. ಭಾರತ ಕ್ರಿಕೆಟ್ ತಂಡಕ್ಕೆ ನಿಮ್ಮ ಸೇವೆ ಮುಂದುವರಿಯಲಿ. ಕರ್ನಾಟಕ ಮತ್ತು ಭಾರತ ತಂಡದ ಪರ ನಿಮ್ಮ ಜೊತೆ ಆಡಿರುವುದು ಅದೃಷ್ಟ. ಶುಭಾಶಯಗಳು’ ಎಂದು ಮಾಜಿ ಕ್ರಿಕೆಟಿಗ ದೊಡ್ಡಗಣೇಶ್ ಟ್ವೀಟ್ ಮಾಡಿದ್ದಾರೆ.

ಸದ್ಯ ಟೀಮ್ ಇಂಡಿಯಾ ಜೊತೆ ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿರುವ ರಾಹುಲ್ ದ್ರಾವಿಡ್ ಐತಿಹಾಸಿಕ ಸಾಧನೆ ಮಾಡುವ ತವಕದಲ್ಲಿದ್ದಾರೆ. ಅತಿಥೇಯ ತಂಡದ ವಿರುದ್ಧದ ಟೆಸ್ಟ್ ಸರಣಿ ಸದ್ಯ 1-1 ರಿಂದ ಸಮಬಲಗೊಂಡಿದೆ. ಇಂದು (ಜನವರಿ 11) ಕೇಪ್‌ಟೌನ್‌ನಲ್ಲಿ ಆರಂಭವಾಗಲಿರುವ ಮೂರನೇ ಟೆಸ್ಟ್ ಅನ್ನು ಭಾರತ ಗೆದ್ದುಕೊಂಡಿದ್ದೇ ಆದಲ್ಲಿ ದಕ್ಷಿಣ ಆಫ್ರಿಕಾದಲ್ಲಿ ಇದೇ ಮೊದಲ ಬಾರಿಗೆ ಸರಣಿ ಗೆದ್ದಂತಹ ಸಾಧನೆಯಾಗಲಿದೆ.

ಇದನ್ನೂ ಓದಿ: Team India : ಶಾರ್ದೂಲ್‌ ಠಾಕೂರ್‌, ವಿರಾಟ್‌ ಕೊಯ್ಲಿ ಆಕರ್ಷಕ ಅರ್ಧ ಶತಕ

ಟ್ವೆಂಟಿ-20 ವಿಶ್ವಕಪ್ ಮುಕ್ತಾಯಗೊಂಡ ಬಳಿಕ ಟೀಮ್ ಇಂಡಿಯಾದ ಮುಖ್ಯ ಕೋಚ್ ಆಗಿ ರಾಹುಲ್ ದ್ರಾವಿಡ್ ಜವಾಬ್ದಾರಿ ವಹಿಸಿಕೊಂಡಿದ್ದರು. ಬಳಿಕ ಭಾರತದಲ್ಲಿ ನ್ಯೂಜಿಲೆಂಡ್ ವಿರುದ್ಧ ನಡೆದ ಟ್ವೆಂಟಿ-20 ಸರಣಿಯನ್ನು ಭಾರತಕ್ಕೆ ಕ್ಲೀನ್‌ಸ್ವೀಪ್ ಮಾಡಿಕೊಂಡಿತ್ತು. ಇದರೊಂದಿಗೆ ಮುಖ್ಯ ಕೋಚ್ ಆಗಿ ಜವಾಬ್ದಾರಿ ವಹಿಸಿಕೊಂಡ ಮೊದಲ ಸರಣಿಯನ್ನೇ ತಂಡ ಕ್ಲೀನ್‌ಸ್ವೀಪ್ ಮಾಡುವಂತೆ ಮಾಡಿದ ಹೆಗ್ಗಳಿಕೆ ಅವರದ್ದಾಗಿದೆ.

(Rahul Dravid Birthday Wishes Pour In As Team India Head Coach Turns 49)

Comments are closed.