ಮಂಗಳವಾರ, ಏಪ್ರಿಲ್ 29, 2025
HomekarnatakaCyclone Effect: ಗೈಡ್ ಲೈನ್ಸ್ ಹೊರಡಿಸಿದ ರಾಜ್ಯ ಸರ್ಕಾರ

Cyclone Effect: ಗೈಡ್ ಲೈನ್ಸ್ ಹೊರಡಿಸಿದ ರಾಜ್ಯ ಸರ್ಕಾರ

- Advertisement -

(Cyclone Effect) ಸಾಮಾನ್ಯ ವಾತಾವರಣದಂತೆ ಚಳಿಯಿಂದ ಬಳಲಬೇಕಿದ್ದ ರಾಜ್ಯ ಮಾಂಡೋಸಾ ಸೈಕ್ಲೋನ್ ಬಾಧೆಯಿಂದ ಅಕ್ಷರಷಃ ಶೀತಪೆಟ್ಟಿಗೆಯಲ್ಲಿಟ್ಟ ಐಸ್ ಕ್ರೀಂನಂತೆ ಮರಗಟ್ಟುತ್ತಿದೆ. ಈ ಮಧ್ಯೆ ದಿನಕ್ಕೊಮ್ಮೆ ಮಳೆ, ಚಳಿ,ಶೀತಗಾಳಿ ಎಂಬಂತೆ ಬದಲಾಗುತ್ತಿರುವ ವಾತಾವರಣದಿಂದ ಜನರು ಅನಾರೋಗ್ಯದಿಂದ ಬಳಲುತ್ತಿದ್ದಾರೆ. ರಾಜ್ಯದಾದ್ಯಂತ ವೃದ್ಧರು ಸೇರಿದಂತೆ ಎಲ್ಲರೂ ಅನಾರೋಗ್ಯಕ್ಕೆ ತುತ್ತಾಗುತ್ತಿದ್ದಾರೆ. ಇದರ ಮಧ್ಯೆ ಜೀಕಾ ವೈರಸ್ ಭೀತಿ ಎದುರಾಗಿದೆ.

ಹೀಗಾಗಿ ರಾಜ್ಯ ಆರೋಗ್ಯ ಇಲಾಖೆ ಜನರ ಸಮಸ್ಯೆಗೆ ಸ್ಪಂದಿಸಿದ್ದು, ಬೆಂಗಳೂರು ಸೇರಿದಂತೆ ರಾಜ್ಯದಲ್ಲಿ ಶೀತ ವಾತಾವರಣ (Cyclone Effect) ಹಿನ್ನೆಲೆಯಲ್ಲಿ ಜನರ ಆರೋಗ್ಯ ಕಾಪಾಡುವ ನಿಟ್ಟಿನಲ್ಲಿ ಗೈಡ್ ಲೈನ್ಸ್ ಬಿಡುಗಡೆ ಮಾಡಿದೆ.

ರಾಜ್ಯ ಆರೋಗ್ಯ ಇಲಾಖೆಯಿಂದ ಮಾರ್ಗಸೂಚಿ ಬಿಡುಗಡೆ ಮಾಡಿದ್ದು, ಮಕ್ಕಳು, ವೃದ್ಧರು, ಗರ್ಭಿಣಿಯರು ಹೆಚ್ಚು ಕಾಳಜಿಯಿಂದ ಇರಲು ಸೂಚನೆ ನೀಡಿದೆ.

ಸರ್ಕಾರದ ಗೈಡ್ ಲೈನ್ಸ್ ನಲ್ಲಿ ಏನಿದೆ ಅನ್ನೋದನ್ನು ಗಮನಿಸೋದಾದರೇ,

  • ಬೆಚ್ಚಗಿನ ನೀರು ಅಥವಾ ಸೂಪ್ ಕುಡಿಯುವುದು
  • ಜೀರ್ಣವಾಗುವ ಆಹಾರ ಅಥವಾ ತಾಜಾ ಆಹಾರವನ್ನು ಸೇವಿಸೋದು
  • ಮನೆಯ ಹೊರಗೂ ಒಳಗೂ ಸ್ವೆಟರ್ ಹಾಗೂ ಕಿವಿ ಮುಚ್ಚಿಕೊಂಡು ಓಡಾಡುವುದು
  • ಸ್ನಾನಕ್ಕೆ ಬೆಚ್ಚಗಿನ ನೀರನ್ನೇ ಬಳಸುವುದು
  • ಅನಗತ್ಯವಾಗಿ ಹೊರಗಿನ ಓಡಾಟ ತಪ್ಪಿಸುವುದು
  • ನೆಗಡಿ, ಕೆಮ್ಮ ಹಾಗೂ ಜ್ವರ ಇರುವವರಿಂದ ಅಂತರ ಕಾಯ್ದುಕೊಳ್ಳುವುದು
  • ಕೈಕಾಲುಗಳನ್ನು ಅಗಾಗ್ಗೆ ಸೋಪು ಬಳಸಿ ತೊಳೆಯುವುದು
  • ಜ್ವತ ಹಾಗೂ ಫ್ಲೂ ಲಕ್ಷಣಗಳಿದ್ದರೆ ವೈದ್ಯರ ಸಲಹೆ ಪಡೆದು ಔಷಧಿ ಸೇವಿಸಬೇಕು ಎಂದು ಸಲಹೆ ನೀಡಿದೆ.

ಇನ್ನು ಆರೋಗ್ಯ ಇಲಾಖೆ ಸೂಚನೆ ಪ್ರಕಾರ ಏನು ಮಾಡಬಾರದು ಅನ್ನೋದನ್ನು ಗಮನಿಸೋದಾದರೇ,

  • ತಣ್ಣಗಿನ ಪಾನೀಯ, ಐಸ್ ಕ್ರೀಮ್ ಗಳನ್ನು ಸೇವಿಸಬಾರದು
  • ಫ್ರಿಡ್ಜ್ ನಲ್ಲಿಟ್ಟ ನೀರು ಕುಡಿಯಬಾರದು
  • ವೀಕೆಂಡ್ ಟೂರ್ ಹಾಗೂ ಗಿರಿಧಾಮಗಳಿಗೆ ಹೋಗುವುದನ್ನು ತಪ್ಪಿಸಿ
  • ಹೆಚ್ಚಿನ ಮಸಾಲ ಇರೋ ಆಹಾರ & ಜಂಕ್ ಫುಡ್ ಅವಾಯ್ಡ್ ಮಾಡಬೇಕು

ಈಗಾಗಲೇ ರಾಜ್ಯದಲ್ಲಿ ಅಸ್ತಮಾ, ಶೀತ ಜ್ವರದ ಪ್ರಮಾಣ ಹೆಚ್ಚಿದ್ದು ಆಸ್ಪತ್ರೆಗಳಲ್ಲಿ ಹೊರ ರೋಗಿಗಳು ಸೇರಿದಂತೆ ರೋಗಿಗಳ ದಾಖಲೆಯ ಪ್ರಮಾಣ ಹೆಚ್ಚಿದೆ. ಅಲ್ಲದೇ ರಾಯಚೂರಿನ ಮಗುವೊಂದರಲ್ಲಿ ಜೀಕಾ ವೈರಸ್ ಕಾಣಿಸಿಕೊಂಡಿದ್ದು, ಹೆಚ್ಚಿನ ಕಾಳಜಿ ವಹಿಸುವಂತೆ ಆರೋಗ್ಯ ಇಲಾಖೆ ಸೂಚಿಸಿದೆ.

ಇದನ್ನೂ ಓದಿ : Mandous Cyclone Effect : ಮಾಂಡೌಸ್ ಚಂಡಮಾರುತ ಎಫೆಕ್ಟ್ : ರಾಜ್ಯದಲ್ಲಿ ಚಳಿಗಾಳಿ, ಎಚ್ಷರಿಕೆ ಕೊಟ್ಟ ಆರೋಗ್ಯ‌ ಸಚಿವ

(Cyclone Effect) The state, which was supposed to suffer from cold like the normal climate, is literally numb like an ice cream in a cold box due to the cyclone. In the meantime, people are suffering from the changing weather like rain, cold and wind every day. All over the state, including the elderly, everyone is getting sick. In the midst of this, there is a threat of Zika virus.

RELATED ARTICLES

Most Popular