BBMP master plan: 9 ಮಾಲ್‌ ನಿಂದ 50 ಕೋಟಿ ತೆರಿಗೆ ವಂಚನೆ: ಟ್ಯಾಕ್ಸ್ ವಸೂಲಿಗೆ ಬಿಬಿಎಂಪಿ ಮಾಸ್ಟರ್ ಪ್ಲ್ಯಾನ್

(BBMP master plan) ಸಿಲಿಕಾನ್ ಸಿಟಿಯಲ್ಲಿ ಪ್ರವಾಸಿಗರ ಪ್ರಮುಖ ಆಕರ್ಷಣೆ ಎಂದರೇ ಅದ್ದೂರಿ ಮಾಲ್ ಗಳು. ಆದರೆ ಹೀಗೆ ಪ್ರವಾಸೋದ್ಯಮ ಹಾಗೂ ಬೆಂಗಳೂರಿನ ಜನರ ಮೆಚ್ಚಿನ ತಾಣವಾಗಿರೋ ಮಾಲ್ ಗಳು ನಿಯಮಗಳನ್ನು ಪಾಲಿಸೋದರಲ್ಲಿ ಕಳ್ಳಾಟವಾಡುತ್ತಲೇ ಬಂದಿದ್ದು ಯಾವೆಲ್ಲ ಮಾಲ್ ಗಳು ತೆರಿಗೆ ಕಟ್ಟದೇ ವಂಚಿಸಿದೆ ಅನ್ನೋ ಎಕ್ಸಕ್ಲೂಸಿವ್ ಡಿಟೇಲ್ಸ್ ಇಲ್ಲಿದೆ.

ಬೆಂಗಳೂರಿನ 9 ಮಾಲ್ ಗಳು ಬರೋಬ್ಬರಿ 50 ಕೋಟಿ ರೂ ತೆರಿಗೆ ಬಾಕಿ ಉಳಿಸಿಕೊಂಡಿದೆ. ಮಾಲ್ ಬಂದ್ ಮಾಡಿದ್ರೆ ಸಾರ್ವಜನಿಕರಿಗೆ ತೊಂದರೆ ಕಾರಣ ತೆರಿಗೆ ಬಾಕಿ ಇರುವ ಮಾಲ್‌ಗಳಿಗೆ ಬ್ಯಾಂಕ್ ಅಟ್ಯಾಚ್‌ಮೆಂಟ್ ಮಾಡಲು ಬಿಬಿಎಂಪಿ (BBMP master plan) ಸಿದ್ಧತೆ ನಡೆಸಿದೆ. ನಗರದ ಯಾವ ಯಾವ ಮಾಲ್‌ಗಳು ಎಷ್ಟು ತೆರಿಗೆ ಬಾಕಿ ಉಳಿಸಿಕೊಂಡಿದೆ ಅನ್ನೋದನ್ನು ನೋಡೋದಾದರೇ

  • 2017-18 ರಿಂದ 27 ಕೋಟಿ ರೂ. ಮಂತ್ರಿಮಾಲ್ ತೆರಿಗೆ ಬಾಕಿ
  • 2019-20ರಿಂದ ಜಿಟಿ ವರ್ಲ್ಡ್ ಮಾಲ್ 5 ಕೋಟಿ 39 ಲಕ್ಷ ರೂ. ತೆರಿಗೆ ಬಾಕಿ
  • ಫೀನಿಕ್ಸ್ ಮಾಲ್ 2 ಕೋಟಿ 76 ಲಕ್ಷ ತೆರಿಗೆ ಬಾಕಿ
  • ವಿ.ಆರ್ ಮಾಲ್ 7 ಕೋಟಿ 32 ಲಕ್ಷ ರೂ ತೆರಿಗೆ ಬಾಕಿ
  • ವೆಗಾ ಸಿಟಿ ಮಾಲ್ 2 ಕೋಟಿ 54 ಲಕ್ಷ ರೂ ತೆರಿಗೆ ಬಾಕಿ
  • ರಾಯಲ್ ಮೀನಾಕ್ಷಿ ಮಾಲ್ 2 ಕೋಟಿ 54 ಲಕ್ಷ ರೂ ತೆರಿಗೆ ಬಾಕಿ
  • ಸೆಂಟ್ರಲ್ ಮಾಲ್ 2 ಕೋಟಿ 46 ಲಕ್ಷ ರೂ ತೆರಿಗೆ ಬಾಕಿ
  • ವರ್ಜಿನಿಯಾ ಮಾಲ್ 1 ಕೋಟಿ 21 ಲಕ್ಷ ರೂ. ತೆರಿಗೆ ಬಾಕಿ
  • ಸೋಲ್ ಸ್ಪೇಸ್ ಅರೆನಾ ಮಾಲ್ 1 ಕೋಟಿ 1 ಲಕ್ಷ ತೆರಿಗೆ ಬಾಕಿ
  • ಒರಾಯನ್ ಮಾಲ್ 75 ಲಕ್ಷ ತೆರಿಗೆ ಬಾಕಿ
  • ಜುಪಿಟರ್ ಮಾಲ್ 39 ಲಕ್ಷ ಬಾಕಿ
  • 2020-21 ಸ್ವಾಗತ್ ಗರುಡಾ ಮಾಲ್ 96 ಲಕ್ಷ ರೂ. ಬಾಕಿ
  • ಫೋರಂ ಮಾಲ್ 72 ಲಕ್ಷ ಆಸ್ತಿ ತೆರಿಗೆ ಬಾಕಿ
  • ಮೋರ್ 4 ಲಕ್ಷ ತೆರಿಗೆ ಬಾಕಿ
  • ಹೈಪರ್ ಸಿಟಿ ಮಾಲ್ 48 ಲಕ್ಷ ರೂ. ತೆರಿಗೆ ಬಾಕಿ

ಈಗಾಗಲೇ ಹಲವಾರು ಭಾರಿ ಬಿಬಿಎಂಪಿ (BBMP master plan) ಮಂತ್ರಿ ಮಾಲ್ ಗೆ ಬೀಗ ಜಡಿದಿತ್ತು. ಈಗ ಎಲ್ಲಾ ಮಾಲ್ ಗಳ ಅಕೌಂಟ್ ಅಟ್ಯಾಚ್ ಮೆಂಟ್ ಮಾಡಲು ಸಿದ್ಧತೆ ನಡೆಸಿದೆ. ಒಟ್ಟಿನಲ್ಲಿ ಪ್ರತಿನಿತ್ಯ ಲಕ್ಷಾಂತರ ರೂಪಾಯಿ ಗಳಿಸುವ ಮಾಲ್ ಗಳು ವರ್ಷಕ್ಕೆ ತೆರಿಗೆ ಕಟ್ಟಲು ಮೀನಾಮೇಷ ಎಣಿಸುತ್ತಿದ್ದು, ಇದಕ್ಕೆಲ್ಲ ಬಿಬಿಎಂಪಿ ಅಂತ್ಯಹಾಡಲು ಸಿದ್ಧತೆ ನಡೆಸಿದೆ.

ಇದನ್ನೂ ಓದಿ : Cyclone Effect: ಗೈಡ್ ಲೈನ್ಸ್ ಹೊರಡಿಸಿದ ರಾಜ್ಯ ಸರ್ಕಾರ

ಇದನ್ನೂ ಓದಿ : Mandous Cyclone Effect : ಮಾಂಡೌಸ್ ಚಂಡಮಾರುತ ಎಫೆಕ್ಟ್ : ರಾಜ್ಯದಲ್ಲಿ ಚಳಿಗಾಳಿ, ಎಚ್ಷರಿಕೆ ಕೊಟ್ಟ ಆರೋಗ್ಯ‌ ಸಚಿವ

(BBMP master plan) The major tourist attractions in Silicon City are the lavish malls. But in this way, the malls, which are the favorite destination of the people of Bangalore and tourism, have been cheating while following the rules.

Comments are closed.