ಸೋಮವಾರ, ಏಪ್ರಿಲ್ 28, 2025
HomekarnatakaDengue anxiety : ಕೊರೋನಾ ಬಳಿಕ ಡೆಂಗ್ಯೂ ಆತಂಕ : ರಾಜಧಾನಿಯಲ್ಲಿ 2 ಸಾವಿರ ದಾಟಿದ...

Dengue anxiety : ಕೊರೋನಾ ಬಳಿಕ ಡೆಂಗ್ಯೂ ಆತಂಕ : ರಾಜಧಾನಿಯಲ್ಲಿ 2 ಸಾವಿರ ದಾಟಿದ ಪ್ರಕರಣ

- Advertisement -

ಬೆಂಗಳೂರು : ನಗರದಲ್ಲಿ ಕಳೆದ ಒಂದು ವಾರದಿಂದ ಬಿಟ್ಟು ಬಿಡದೇ ಮಳೆ ಸುರಿಯುತ್ತಲೇ ಇದೆ. ಹೀಗಾಗಿ ಅಕಾಲಿಕ ಮಳೆಗಾಲದ ಸ್ಥಿತಿ ನಿರ್ಮಾಣವಾಗಿದೆ. ಇದರ ಬೆನ್ನಲ್ಲೇ ಈಗಷ್ಟೇ ಕೊರೋನಾದಿಂದ ಚೇತರಿಸಿಕೊಳ್ಳುತ್ತಿರುವ ಜನರಿಗೆ ಈಗ ಡೆಂಗ್ಯೂ ಭೀತಿ (Dengue anxiety) ಎದುರಾಗಿದೆ. ನಗರದಾದ್ಯಂತ 2 ಸಾವಿರ ಕೇಸ್ ಗಳು ದಾಖಲಾಗಿದ್ದು,ಕಳೆದ ವರ್ಷಕ್ಕೆ ಹೋಲಿಕೆ ಮಾಡಿದ್ರೆ ಈ ವರ್ಷವೇ ಕೇಸ್ ಗಳ ಪ್ರಮಾಣ ಏರಿಕೆಯಾಗಿದೆ ಎಂಬುದು ಜನರ ಆತಂಕಕ್ಕೆ ಕಾರಣವಾಗಿದೆ.

ಹೌದು, ಬೆಂಗಳೂರಿನಲ್ಲಿ ಡೆಂಗ್ಯು ಕೇಸ್ ಗಳ ಸಂಖ್ಯೆ ದಿಢೀರ್ ಏರಿಕೆಯಾಗಿದೆ. ನಗರದಾದ್ಯಂತ ಈಗಾಗಲೇ 2 ಸಾವಿರ ಕೇಸ್ ಗಳು ದಾಖಲಾಗಿದ್ದು,ಕಳೆದ ವರ್ಷಕ್ಕೆ ಹೋಲಿಕೆ ಮಾಡಿದ್ರೆ ಈ ವರ್ಷವೇ ಕೇಸ್ ಗಳ ಪ್ರಮಾಣ ಏರಿಕೆಯಾಗಿದೆ ಎಂಬುದು ಜನರ ಆತಂಕಕ್ಕೆ ಕಾರಣವಾಗಿದೆ. ಕಳೆದ ವರ್ಷ ಮೇ ವೇಳೆಗೆ 1800 ರಷ್ಟು ಕೇಸ್ ಗಳು ದಾಖಲಾಗಿದ್ದು, ಈ ವರ್ಷ ಮೇ ವೇಳೆಗೆ ಡೆಂಗ್ಯೂ ಕೇಸ್ ಗಳ ಸಂಖ್ಯೆ 2 ಸಾವಿರವನ್ನು ದಾಟಿದೆ. ಅಲ್ಲದೇ ಕಳೆದ ಎರಡು ತಿಂಗಳಿನಿಂದ ವಲಯ ಮಟ್ಟದಲ್ಲಿ ಕೇಸ್ ಗಳ ಸಂಖ್ಯೆ ಏರಿಕೆಯಾಗುತ್ತಲೇ ಇದೆ.

ಇನ್ನು ಈಸ್ಟ್ ಝೋನ್ ನಲ್ಲಿ ಒಟ್ಟು 653 ಕೇಸ್ ಗಳು ದಾಖಲಾಗಿದ್ದು, ಬಿಬಿಎಂಪಿ 8 ವಲಯಗಳಲ್ಲಿ ಎಷ್ಟು ಡೆಂಗ್ಯು ಪ್ರಕರಣಗಳು ದಾಖಲಾಗಿವೆ ಅನ್ನೋದನ್ನು ಗಮನಿಸೋದಾದರೇ, ಬೊಮ್ಮನಹಳ್ಳಿ ವಲಯ – 104 ಪ್ರಕರಣ,ದಾಸರಹಳ್ಳಿ ವಲಯ – 38 ಪ್ರಕರಣ,ಈಸ್ಟ್ ವಲಯ – 653 ಪ್ರಕರಣ,ಮಹದೇವಪುರ ವಲಯ – 342 ಪ್ರಕರಣ,ಆರ್.ಆರ್.ನಗರ ವಲಯ – 122 ಪ್ರಕರಣ,ಸೌತ್ ವಲಯ – 170 ಪ್ರಕರಣ,ವೆಸ್ಟ್ ವಲಯ – 162 ಪ್ರಕರಣ ಯಲಹಂಕ ವಲಯ – 202 ಪ್ರಕರಣಗಳು ಇದುವರೆಗೂ ದಾಖಲಾಗಿದೆ.

ಇನ್ನು ಸತತವಾಗಿ ಮಳೆ ಸುರಿದಿರೋದರಿಂದ ಮುಂದಿನ ದಿನಗಳಲ್ಲಿ ಕೇಸ್ ಗಳು ಇನ್ನು ಹೆಚ್ಚಾಗುವ ಸಾಧ್ಯತೆಯಿದೆ. ಹೀಗಾಗಿ ಡೆಂಗ್ಯು ತಡೆಗಟ್ಟುವ ಸಲುವಾಗಿ ಬಿಬಿಎಂಪಿ ಸಕಲ ಸಿದ್ದತೆ ಮಾಡಿಕೊಂಡಿದೆ. 8 ವಲಯಗಳಲ್ಲಿ ಶಾಲಾ ಕಾಲೇಜುಗಳ‌ ಬಳಿ ನಿಗಾ ಇಡುತ್ತಿರುವ ಬಿಬಿಎಂಪಿ ಶಾಲಾ – ಕಾಲೇಜುಗಳ ಬಳಿ ನೀರು ನಿಂತುಕೊಳ್ಳದಂತೆ ಸೂಚನೆ ನೀಡಲಾಗಿದೆ. ಆರೋಗ್ಯ ಸಿಬ್ಬಂದಿಗಳು ಶಾಲೆಗಳ‌ ಬಳಿ ಪರೀಶೀಲನೆ ಮಾಡಿ ಶಾಲೆಗಳ ಸುತ್ತಾ-ಮುತ್ತ ಲಾರ್ವಿಸೈಡ್ ಹಾಗೂ ಫಾಗ್ ಸಿಂಪಡಣೆ ಮಾಡಲು ಸೂಚನೆ ನೀಡಲಾಗಿದೆ. ಇನ್ನೂ ವಲಯ ಮಟ್ಟದಲ್ಲಿ ಡೋರ್ ಟು ಡೋರ್ ಸರ್ವೆ ಮಾಡಿ ಸೊಳ್ಳೆ ಕಡಿತದಿಂದ ಅನಾರೋಗ್ಯದ ಸಮಸ್ಯೆ ಉಂಟಾದ್ರೆ ವೈದ್ಯರ ಬಳಿ ತೋರಿಸಿಕೊಳ್ಳಲು ಸೂಚನೆಯನ್ನು ನೀಡಲಾಗುತ್ತಿದೆ. ಒಟ್ಟಿನಲ್ಲಿ ಬಿಬಿಎಂಪಿಗೆ ಈಗಿರೋ ಕಸ,ರಸ್ತೆ ಗುಂಡಿ ಮಧ್ಯೆ ಹೊಸದೊಂದು ಸಮಸ್ಯೆ ಎದುರಿಸುತ್ತಿದೆ.

ಇದನ್ನೂ ಓದಿ : Hike Water Bill : ಜನರಿಗೆ ಶಾಕ್ ನೀಡಲು ಸಜ್ಜಾಗಿದೆ ಜಲಮಂಡಳಿ : ಸರ್ಕಾರಕ್ಕೆ ಸಲ್ಲಿಕೆಯಾಯ್ತು ಬೆಲೆ ಏರಿಕೆ ಪ್ರಸ್ತಾಪ

ಇದನ್ನೂ ಓದಿ : ಬೆಂಗಳೂರಲ್ಲಿ 2 ದಿನ ವಿದ್ಯುತ್‌ ಕಡಿತ : ಯಾವ ಭಾಗದಲ್ಲಿ ಯಾವ ದಿನ, ಇಲ್ಲಿದೆ ಮಾಹಿತಿ

Dengue anxiety after Corona, 2000 dengue cases crossing in Bengaluru

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular