Water Shortage alert : ಬೆಂಗಳೂರಿಗರಿಗೆ ಕಾದಿದೆ ಶಾಕ್ : ಜಲಗಂಡಾಂತರದ ಎಚ್ಚರಿಕೆ ಕೊಟ್ಟ ತಜ್ಞರು

ಬೆಂಗಳೂರು : ರಾಜ್ಯ ರಾಜಧಾನಿ, ಸಿಲಿಕಾನ್ ಸಿಟಿ, ಉದ್ಯಾನನಗರಿ ಎಂದೆಲ್ಲ ಕರೆಸಿಕೊಳ್ಳೋ ಬೆಂಗಳೂರಿನಲ್ಲಿ ಸಮಸ್ಯೆಗಳು ಬೆಟ್ಟದಷ್ಟಿವೆ.‌ಪ್ರತಿನಿತ್ಯ ತನ್ನ ವ್ಯಾಪ್ತಿ ವಿಸ್ತರಿಸಿಕೊಳ್ಳುತ್ತ ಸಾಗುತ್ತಿರೋ ಬೆಂಗಳೂರಿನಲ್ಲಿ ಮೂಲಭೂತ ಸೌಲಭ್ಯ,ಕುಡಿಯುವ ನೀರು ಒದಗಿಸೋದರ ಜೊತೆಗೆ ಕಸ,ರಸ್ತೆ ಗುಂಡಿ ಸೇರಿದಂತೆ ಎಲ್ಲವನ್ನು ನಿಭಾಯಿಸೋದು ಸವಾಲಾಗಿದೆ.‌ಇದರ ಮಧ್ಯೆ ಮುಂದಿನ ವರ್ಷದ ವೇಳೆಗೆ ನಗರದ ಜನತೆಗೆ ಮುಂದಿನ ವರ್ಷದ ವೇಳೆಗೆ ದೊಡ್ಡ ಆತಂಕವೊಂದು (Water Shortage alert) ಎದುರಾಗೋ ಸಾದ್ಯತೆ ಇದೆ ಎಂದು ತಜ್ಞರು ಅಂದಾಜಿಸಿದ್ದಾರೆ.

ಹೌದು ತಜ್ಞರ‌ಮಾಹಿತಿ ಪ್ರಕಾತ ಮುಂದಿನ ವರ್ಷಗಳಲ್ಲಿ ಬೆಂಗಳೂರಿಗೆ ಕುಡಿಯುವ ನೀರಿನ ಸಮಸ್ಯೆ ಕಾಡಲಿದೆಯಂತೆ. 2030ರ ಹೊತ್ತಿಗೆ ಬೆಂಗಳೂರಿಗೆ ಕುಡಿಯುವ ನೀರಿನ ಸಮಸ್ಯೆ ಕಾಡುವ ಸಂಭವಿದೆ ಎಂದು ತಜ್ಞರು ಅಂದಾಜಿಸಿದ್ದಾರೆ. 110 ಹಳ್ಳಿಗಳಿಗೆ ನೀರು ಪೂರೈಕೆಗೆ ಐದನೇ ಹಂತದ ಯೋಜನೆಯಿಂದ ಸಿದ್ಧತೆಯಲ್ಲಿದೆ. ಆದರೆ ಕಾವೇರಿ ಜಲಾನಯನದಲ್ಲಿ ನಿಧಾನಗತಿಯಲ್ಲಿ ನೀರು ಖಾಲಿ ಹಿನ್ನೆಲೆ. ಕಾವೇರಿ 5ನೇ ಹಂತದ ಕುಡಿಯುವ ನೀರಿನ ಯೋಜನೆಯಿಂದ 2030 ರವರೆಗೆ ಮಾತ್ರ ನೀರು ಒದಗಿಸಲು ಸಾಧ್ಯ ಎನ್ನಲಾಗ್ತಿದೆ.

2011ರ ಜನಗಣತಿಯಂತೆ ನಗರದಲ್ಲಿದ್ದ 85 ಲಕ್ಷ ಜನರಿಗೆ, ಪ್ರಸ್ತುತ ನಿತ್ಯ ಸರಬರಾಜು ಮಾಡುತ್ತಿರುವ 1,450 ದಶಲಕ್ಷ ಲೀಟರ್ ಕುಡಿಯುವ ನೀರು ಬೇಕಿತ್ತು. ಆದರೆ ಇದು ಹಳೆ ಲೆಕ್ಕಾಚಾರ. ಸದ್ಯ ಅಂದಾಜು ಬೆಂಗಳೂರಿನ ಜನ ಸಂಖ್ಯೆ 1 ಕೋಟಿ 30 ಲಕ್ಷ ದಾಟಿರುವ ಸಾಧ್ಯತೆ ಇದೆ. ಹೀಗಾಗಿ ನೀರಿನ ಅಗತ್ಯ ದಶಲಕ್ಷ ಲೀಟರ್ ಗಳನ್ನು ಮೀರಿದೆ. ಈಗಿರುವ ಮಾಹಿತಿ ಪ್ರಕಾರ ಮೇಕೆದಾಟು, ಶರಾವತಿ ಹಿನ್ನೀರು, ಕೃಷ್ಣಾ ಹಾಗೂ ಎತ್ತಿನಹೊಳೆ ಯೋಜನೆಗಳ ಪೈಕಿ ಒಂದು ಯೋಜನೆ ಜಾರಿಯಾದರೆ 2040ರ ವರೆಗೆ ನೀರು ಸರಬರಾಜು ಸಾಧ್ಯವಿದೆ ಎನ್ನಲಾಗ್ತಿದೆ. ಆದರೆ ಈಗ ಕಾವೇರಿ ನೀರು ಸರಬರಾಜು ಯೋಜನೆಯ 5ನೇ ಹಂತದ ಕಾಮಗಾರಿ ವಿಳಂಬವಾಗ್ತಿದೆ.

ಒಂದೊಮ್ಮೆ ಸದ್ಯ ಪೂರ್ಣಗೊಳ್ಳಬೇಕಿರುವ ಯೋಜನೆಗಳು ಪೂರ್ಣಗೊಂಡಲ್ಲಿ ಎತ್ತಿನಹೊಳೆ ಯೋಜನೆ : 250 ದಶಲಕ್ಷ ಲೀ., ಮೇಕೆದಾಟು ಯೋಜನೆ : 450 ದಶಲಕ್ಷ ಲೀ. ಶರಾವತಿ ಹಿನ್ನೀರು ಯೋಜನೆ : 775 ದಶಲಕ್ಷ ಲೀ.ಕೃಷ್ಣಾ ಯೋಜನೆ : 1,550 ದಶಲಕ್ಷ ಲೀ. ನೀರು ಪೊರೈಸಲಿದೆ. ಇದರಿಂದ ಬೆಂಗಳೂರಿನ ನೀರಿನ ಅಗತ್ಯ ಕೊಂಚ ಕಡಿಮೆ ಆಗ ಬಹುದೇನೋ. ಆದರೂ ಇಂದಲ್ಲ ನಾಳೆ ಬೆಂಗಳೂರಿನ ಮಂದಿ ನೀರಿಗಾಗಿ ಹಾಹಾಕಾರ ಪಡೋದು ತಪ್ಪಲ್ಲ ಅನ್ನೋದು ತಜ್ಞರ ಅಭಿಪ್ರಾಯ.

ಇದನ್ನೂ ಓದಿ : ಮುಂದಿನ ಮೂರು ದಿನ ಬಾರೀ ಮಳೆ : ರೆಡ್ ಅಲರ್ಟ್ ಘೋಷಣೆ

ಇದನ್ನೂ ಓದಿ : ಕೊರೋನಾ ಬಳಿಕ ಡೆಂಗ್ಯೂ ಆತಂಕ : ರಾಜಧಾನಿಯಲ್ಲಿ 2 ಸಾವಿರ ದಾಟಿದ ಪ್ರಕರಣ

Water Shortage alert experts for Bengaluru

Comments are closed.