ಬೆಂಗಳೂರು : ಇನ್ಮುಂದೆ ದೂರದ ಅಮೇರಿಕಾ ಹಾಗೂ ಬೆಂಗಳೂರು ನಡುವಿನ ಅಂತರ ಕಡಿಮೆಯಾಗಲಿದೆ. ದೇಶದ ವಿಮಾನಯಾನ ಸಂಸ್ಥೆಯಾಗಿರುವ ಅಮೇರಿಕಾದ ಸ್ಯಾನ್ ಫ್ರಾನ್ಸಿಸ್ಕೋ ಹಾಗೂ ಬೆಂಗಳೂರು ನಡುವೆ ತಡೆ ರಹಿತ ವಿಮಾನಯಾನ ಸೇವೆ ಆರಂಭಿಸಲು ಮುಂದಾಗಿದೆ.
ಬೆಂಗಳೂರು ಹಾಗೂ ಸ್ಯಾನ್ ಪ್ರಾನ್ಸಿಸ್ಕೋ ನಡುವೆ ವಾರಕ್ಕೆ ಎರಡು ಬಾರಿ ನೇರ ವಿಮಾನ ಸಂಪರ್ಕ ಇರಲಿದೆ. ಏರ್ ಇಂಡಿಯಾವು 228 ಆಸನ ಸಾಮರ್ಥ್ಯದ ಬೋಯಿಂಗ್ 777-200 ಎಲ್ಆರ್ ವಿಮಾನವನ್ನು ಈ ಸೇವೆಗೆ ಬಳಸಿಕೊಳ್ಳಲಿದೆ.

ನೇರ ತಡೆ ರಹಿತ ವಿಮಾನ ಸೇವೆಯನ್ನು 2021ರ ಜನವರಿ 11ರಿಂದ ಪ್ರಾರಂಭಿಸಲಿದೆ. ವಿಮಾನದ ಟಿಕೆಟ್ ಕಾಯ್ದಿರಿಸಲು ಈಗಿನಿಂದಲೇ ಅವಕಾಶ ಕಲ್ಪಿಸಲಾಗಿದೆ.

ಎರಡು ನಗರಗಳ ನಡುವಿನ ಪ್ರಯಾಣದ ಅವಧಿ 16 ಗಂಟೆಗಿಂತಲೂ ಹೆಚ್ಚಿರಲಿದ್ದು, ಇದು ಏರ್ ಇಂಡಿಯಾದ ಅತೀ ದೀರ್ಘ ಮತ್ತು ಅತಿ ದೂರದ ಸೇವೆ ಎಂಬ ದಾಖಲೆ ನಿರ್ಮಿಸಲಿದೆ.