ಮಂಗಳವಾರ, ಏಪ್ರಿಲ್ 29, 2025
HomepoliticsBBMP Election 2022: ಸುಪ್ರೀಂ ಅಂಗಳದಲ್ಲಿ ಬಿಬಿಎಂಪಿ ಚುನಾವಣೆ ಭವಿಷ್ಯ: ಸರ್ಕಾರದ ವಿರುದ್ಧ ಮಾಜಿ ಕಾರ್ಪೋರೇಟರ್...

BBMP Election 2022: ಸುಪ್ರೀಂ ಅಂಗಳದಲ್ಲಿ ಬಿಬಿಎಂಪಿ ಚುನಾವಣೆ ಭವಿಷ್ಯ: ಸರ್ಕಾರದ ವಿರುದ್ಧ ಮಾಜಿ ಕಾರ್ಪೋರೇಟರ್ ಶಿವರಾಜ್ ದೂರು

- Advertisement -

ಬೆಂಗಳೂರು : ಒಂದೆಡೆ ಬಿಜೆಪಿ, ಕಾಂಗ್ರೆಸ್ ಹಾಗೂ ಜೆಡಿಎಸ್ ಬಿಬಿಎಂಪಿ ಗದ್ದುಗೆ ಹಿಡಿಯಲು ಸರ್ಕಸ್ ಆರಂಭಿಸಿದ್ದರೇ ಇತ್ತ ಬಿಬಿಎಂಪಿ ಚುನಾವಣೆ ( BBMP Election 2022 ) ನಡೆಸಲು ಸರ್ಕಾರದ ವಿಳಂಬ ಧೋರಣೆ ಪ್ರಶ್ನಿಸಿ ಮಾಜಿ ಕಾರ್ಪೋರೇಟರ್ ಒಬ್ಬರು ನ್ಯಾಯಾಲಯದ ಮೆಟ್ಟಿಲೇರಿದ್ದಾರೆ. ಬಿಬಿಎಂಪಿ ಚುನಾವಣೆಗೆ ಸಂಬಂಧಿಸಿದಂತೆ ಅವಧಿ ಮುಗಿದು ಒಂದು ವರ್ಷ ಕಳೆದರೂ ಚುನಾವಣೆ ನಡೆಸದ ಸರ್ಕಾರದ ನಡೆ ಪ್ರಶ್ನಿಸಿ ಮಾಜಿ‌ಕಾರ್ಪೋರೇಟರ್‌ ಶಿವರಾಜ್ ಸುಪ್ರೀಂ ಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದು ತುರ್ತು ವಿಚಾರಣೆಗೆ‌ಮನವಿ ಮಾಡಿದ್ದಾರೆ.

ಕಳೆದ ಒಂದು ವರ್ಷದಿಂದ ಬಿಜೆಪಿ‌ ನೇತೃತ್ವದ ಸರ್ಕಾರ ಅವಧಿ ಮುಗಿದರೂ ಬಿಬಿಎಂಪಿಗೆ ಚುನಾವಣೆ ನಡೆಸದೇ ಅಧಿಕಾರಿಗಳಿಂದಲೇ ಆಡಳಿತ ನಡೆಸಿಕೊಂಡು ಹೋಗುತ್ತಿದೆ.ಈ ಕ್ರಮ ಕಾಂಗ್ರೆಸ್ ಹಾಗೂ ಜೆಡಿಎಸ್ ಕೆಂಗಣ್ಣಿಗೆ ಗುರಿಯಾಗಿತ್ತು. ಆದರೆ ಬಿಬಿಎಂಪಿ ಗದ್ದುಗೆ ಹಿಡಿಯೋ ಲೆಕ್ಕಾಚಾರದಲ್ಲಿರೋ ಬಿಜೆಪಿ ಮಾತ್ರ ವಾರ್ಡ್ ವಿಂಗಡನೆ ಸೇರಿದಂತೆ ರಾಜಕೀಯ ಲೆಕ್ಕಾಚಾರಗಳನ್ನು ನಡೆಸುತ್ತಿದ್ದೆಯೇ ವಿನಃ ಚುನಾವಣೆ ನಡೆಸಲು ಸಿದ್ಧವಾಗಿರಲಿಲ್ಲ.

ಕೊರೋನಾ ಕಾರಣ ಮುಂದಿಟ್ಟಿದ್ದ ಸರ್ಕಾರದ ನಿಲುವಿಗೆ ಚುನಾವಣಾ ಆಯೋಗವೂ ಆಕ್ಷೇಪ ಎತ್ತಿರಲಿಲ್ಲ. ಹೀಗಾಗಿ ಕಳೆದ ಒಂದು ವರ್ಷದಿಂದ ಬಿಬಿಎಂಪಿ ಆಡಳಿತ ಅಧಿಕಾರಿಗಳ ಕೈಯಲ್ಲೇ ಇತ್ತು. ಹೀಗಾಗಿ ಮಾಜಿ ಕಾರ್ಪೋರೇಟರ್ ಸುಪ್ರೀಂ ಅಂಗಳಕ್ಕೆ ಅರ್ಜಿ ಸಲ್ಲಿಸಿದ್ದಾರೆ.ರಾಜ್ಯ ಹೈಕೋರ್ಟ್ ಚುನಾವಣೆ ನಡೆಸುವಂತೆ ಸೂಚಿಸಿದ್ದರು ಚುನಾವಣೆ ನಡೆದಿಲ್ಲ. ಸುಪ್ರೀಂ ಕೋರ್ಟ್ ಗೂ ಚುನಾವಣೆಗೆ ತಡೆಯಾಜ್ಞೆ ನೀಡುವಂತೆ ಸರ್ಕಾರ‌ಮನವಿ‌ಮಾಡಿತ್ತು.

ಹೀಗಾಗಿ ಸರ್ಕಾರದ ಮನವಿ ಹಿನ್ನೆಲೆಯನ್ನು ಸುಪ್ರೀಂ ಮನ್ನಿಸಿತ್ತು. ಹೀಗಾಗಿ ಈ ಚುನಾವಣೆ ನಡೆಸುವಂತೆ ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡುವಂತೆ ಹಾಗೂ ಪ್ರಕರಣದ ತುರ್ತು ವಿಚಾರಣೆ ನಡೆಸುವಂತೆ ಶಿವರಾಜ್ ತಮ್ಮ ಅರ್ಜಿಯಲ್ಲಿ ಉಲ್ಲೇಖಿಸಲಾಗಿದೆ. ಈ ಬಗ್ಗೆ ಮಾತನಾಡಿರುವ ಮಾಜಿ ಕಾರ್ಪೊರೇಟರ್ ಶಿವರಾಜ್, ಬಿಬಿಎಂಪಿ ಚುನಾವಣೆ ನಡೆಸಬೇಕು ಆದರೆ ಸರ್ಕಾರ ನಡೆಸುತ್ತಿಲ್ಲ. 2006 ರಿಂದ 2010 ರವರಗೆ ಬಿಬಿಎಂಪಿಬಿಜೆಪಿ ಆಡಳಿತದಲ್ಲಿತ್ತು. ಆಗಲೂ ಕೂಡಾ ಸರ್ಕಾರ ಬಿಬಿಎಂಪಿ ಚುನಾವಣೆ ನಡೆಸಿರಲಿಲ್ಲ.ಚುನಾವಣೆ ಬಗ್ಗೆ ಸರ್ಕಾರಕ್ಕೆ ವರದಿ ಕೊಡಲು 6 ತಿಂಗಳ ಕಾಲ ಸಮಯ ಕೇಳಿತ್ತು.ಆದ್ರೆ ಈಗ ಸಮಯ ಕೂಡಾ ಮುಗಿದಿದೆ. ಚುನಾವಣೆ ಮಾಡಲು ಹಿಂದೇಟು ಹಾಕ್ತಿದೆ. ವಿಚಾರಣೆ ಸುಪ್ರೀಂ ಹಂತದಲ್ಲಿದೆ.ವಿಚಾರಣೆ ಬೇಗ ಕೈಗೆತ್ತಿಕೊಳ್ಳಬೇಕು ಎಂದು ಮನವಿ ಮಾಡಿದ್ದೇವೆ.

ಕೋವಿಡ್ ಸಂದರ್ಭದಲ್ಲಿ ಸಮಸ್ಯೆಯಾಯ್ತು.ಆದ್ರೆ ಸ್ಥಳೀಯ ಸಂಸ್ಥೆಯಲ್ಲಿ ಜನಪ್ರತಿನಿಧಿಗಳು ಇದ್ದಿದ್ರೆ ಸಮಸ್ಯೆ ಕಡಿಮೆಯಾಗ್ತಿತ್ತು. ಜನರಿಗೆ ತಮ್ಮ ಸಮಸ್ಯೆ ಹೇಳಿಕೊಳ್ಳೋಕೆ ಅಧಿಕಾರಿಗಳು ಸಿಗ್ತಿಲ್ಲ. ಬಿಬಿಎಂಪಿ ಸಾಕಷ್ಟು ಸಾಲದ ಸುಳಿಯಲ್ಲಿ ಇದೆ. ಇರುವ ವಾಸ್ತವಾಂಶ ಹೇಳಲು ಸರ್ಕಾರ ಹಿಂದೇಟು ಹಾಕ್ತಿದೆ.ಸರ್ಕಾರ ಚುನಾವಣೆಗೆ ಹೋದ್ರೆ ಹಿನ್ನೆಡೆ ಆಗ್ತೀವಿ ಅಂತ ಹಿಂದೇಟು ಹಾಕ್ತಿದ್ದಾರೆ ಎಂದು ಆರೋಪಿಸಿದ್ದಾರೆ.

ಇದನ್ನೂ ಓದಿ : ಜಿಲ್ಲೆಗಳಿಗೆ ಉಸ್ತುವಾರಿ ಸಚಿವರ ನೇಮಕ : ಯಾವ ಸಚಿವರಿಗೆ ಯಾವ ಜಿಲ್ಲೆ, ಇಲ್ಲಿದೆ ಕಂಪ್ಲೀಟ್‌ ಡಿಟೇಲ್ಸ್‌

ಇದನ್ನೂ ಓದಿ : ಮತ್ತೆ ಸದ್ದು ಮಾಡ್ತಿದೆ ಬೆಳಗಾವಿ ಪಾಲಿಟಿಕ್ಸ್ : ಸಾಹುಕಾರ ಸಹೋದರರ ಬಿಟ್ಟು ನಡೀತು ಮೀಟಿಂಗ್

( Former corporator Shiva raj complaints against Karnataka government in BBMP Election 2022)

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular