ಸೋಮವಾರ, ಏಪ್ರಿಲ್ 28, 2025
HomekarnatakaGanesh Chaturthi 2022 : 8 ವಲಯದಿಂದ 37 ಕಲ್ಯಾಣಿ, 421 ಮೊಬೈಲ್ ಟ್ಯಾಂಕ್ :...

Ganesh Chaturthi 2022 : 8 ವಲಯದಿಂದ 37 ಕಲ್ಯಾಣಿ, 421 ಮೊಬೈಲ್ ಟ್ಯಾಂಕ್ : ಗಣೇಶ ವಿಸರ್ಜನೆಗೆ ಪಾಲಿಕೆ ಭರ್ಜರಿ ಸಿದ್ಧತೆ

- Advertisement -

ಬೆಂಗಳೂರು : (Ganesh Chaturthi 2022) ಕಳೆದ ಎರಡು ವರ್ಷಗಳ ಕೊರೋನಾ ಸಂಘರ್ಷದ ಬಳಿಕ ರಾಜ್ಯದಲ್ಲಿ ಈ ಭಾರಿ ಅದ್ದೂರಿ ಗಣೇಶೋತ್ಸವಕ್ಕೆ ಸಿದ್ಧತೆ ನಡೆಸಿದೆ. ರಾಜ್ಯ ರಾಜಧಾನಿ ಬೆಂಗಳೂರಿನಲ್ಲೂ ಸಾರ್ವಜನಿಕ ಗಣೇಶೋತ್ಸವಕ್ಕೆ ಜನರು ಉತ್ಸಾಹದಿಂದ ಸಜ್ಜಾಗ್ತಿದ್ದಾರೆ. ಆದರೆ ಬಿಬಿಎಂಪಿ (BBMP) ಪಾಲಿಗೆ ಗಣೇಶೋತ್ಸವ ಸಂಭ್ರಮ ಕ್ಕಿಂತ ಗಣೇಶ ವಿಸರ್ಜನೆಯೇ ದೊಡ್ಡ ಸವಾಲು. ಹಿಂದಿನ ವರ್ಷ ಜನರು ಗಣೇಶ ವಿಸರ್ಜನೆಗೆ (Ganesh discharge) ಕಲ್ಯಾಣಿ ಸಿಗದೇ ರಸ್ತೆ ಬದಿಗಳಲ್ಲೇ ಎಸೆದು ಹೋಗಿದ್ದರು. ಈ ವರ್ಷ ಇಂಥ ಸಮಸ್ಯೆ ತಪ್ಪಿಸಲು ಪಾಲಿಕೆ ಭರ್ಜರಿ ಪ್ಲ್ಯಾನ್ ಮಾಡಿದೆ‌‌

ಬೆಂಗಳೂರಿನ ಮನೆ ಮನೆಗಳಲ್ಲಿ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಸಾವಿರಾರು ಗಣೇಶ ಮೂರ್ತಿಗಳನ್ನು ಸ್ಥಾಪಿಸಲಾಗುತ್ತದೆ. ಆದರೆ ಈ ಗಣೇಶ ಮೂರ್ತಿ ವಿಸರ್ಜನೆಗೆ ಸೂಕ್ತ ವ್ಯವಸ್ಥೆ ಇಲ್ಲ. ಇದರಿಂದ ಜನರಿಗೆ ಸಮಸ್ಯೆ ಎದುರಾಗುತ್ತಿತ್ತು. ಈ ಭಾರಿ ಬಿಬಿಎಂಪಿ ಈ ಸಮಸ್ಯೆ ತಪ್ಪಿಸಲು ಮಾಸ್ಟರ್ ಪ್ಲ್ಯಾನ್ ಮಾಡಿದೆ. ಬಿಬಿಎಂಪಿ ವ್ಯಾಪ್ತಿಯ 8 ವಲಯಗಳಲ್ಲಿ 37 ಕಲ್ಯಾಣಿಗಳು ಹಾಗೂ 421 ಮೊಬೈಲ್ ಟ್ಯಾಂಕರ್ ಗಳ ಸ್ಥಾಪನೆಗೆ ಬಿಬಿಎಂಪಿ ಅಧಿಕಾರಿಗಳು ಸಿದ್ಧತೆ ನಡೆಸಿದ್ದಾರೆ.

ಕಲ್ಯಾಣಿಗಳ ಹೊರತಾಗಿ ಈ ಬಾರಿ ಮೊಬೈಲ್ ಟ್ಯಾಂಕರ್ ಗಳ ಸಂಖ್ಯೆಯನ್ನು ಹೆಚ್ಚಿಸಿದೆ. ಬಿಬಿಎಂಪಿ, ಕಳೆದ ಬಾರಿ 37 ಕಲ್ಯಾಣಿಗಳ ಜೊತೆಗೆ ಕೇವಲ 200 ಮೊಬೈಲ್ ಟ್ಯಾಂಕರ್ ಗಳನ್ನು ಸ್ಥಾಪಿಸಿತ್ತು. ಇದು ಗಣೇಶ ಮೂರ್ತಿ ವಿಸರ್ಜನೆಗೆ ಸಾಕಾಗಿರಲಿಲ್ಲ. ಹೀಗಾಗಿ ಜನರು ಗಣೇಶನ ಮೂರ್ತಿಗಳನ್ನು ಸಮರ್ಪಕವಾಗಿ ವಿಸರ್ಜನೆ ಮಾಡದೆ ಅಲ್ಲಲ್ಲೇ ಎಸೆದು ಅವಾಂತರ ಸೃಷ್ಟಿಸಿದ್ದರು. ಈ ಬಾರಿ ಇದನ್ನು ತಡೆಗಟ್ಟಲು ಎರಡರಷ್ಟು ಮೊಬೈಲ್ ಟ್ಯಾಂಕರ್ ಗಳನ್ನು ಸ್ಥಾಪಿಸಲು ಪಾಲಿಕ ಸಿದ್ಧತೆ ನಡೆಸಿದೆ. ಮನೆ, ವಾರ್ಡ್, ಇತರೆ ಗಣೇಶನ ಮೂರ್ತಿಗಳು ಮೊಬೈಲ್ ಟ್ಯಾಂಕರ್ ಗಳಲ್ಲೇ ವಿಸರ್ಜಿಸಲು ಸೂಚನೆ ನೀಡಲಾಗಿದೆ.

Ganesh Chaturthi 2022 : ಗಣೇಶ ಮೂರ್ತಿ ವಿಸರ್ಜನೆಗೆ ವಲಯವಾರು ವಿವರ

  • ಪೂರ್ವ ವಲಯ : 107 : 01
  • ದಕ್ಷಿಣ ವಲಯ : 51 : 02
  • ಪಶ್ಚಿಮ ವಲಯ : 48 : 01
  • ಮಹಾದೇವಪುರ : 21 : 11
  • ದಾಸರಹಳ್ಳಿ : 18 : 01
  • ಬೊಮ್ಮನಹಳ್ಳಿ : 59 : 03
  • ಆರ್ ಆರ್ ನಗರ : 113 : 07
  • ಯಲಹಂಕ : 04 : 11

ಒಟ್ಟು : 421 : 37

ಹಿಂದಿನ ವರ್ಷ ಗಣೇಶ ಮೂರ್ತಿಗಳನ್ನು ಸರಿಯಾಗಿ‌ ನಿರ್ವಹಿಸಲು ಸಾಧ್ಯವಾಗದ ಕಾರಣಕ್ಕೆ ಬಿಬಿಎಂಪಿ ಹೈಕೋರ್ಟ್ ನಿಂದ ಛೀಮಾರಿ ಹಾಕಿಸಿಕೊಂಡಿತ್ತು. ಇವುಗಳಿಂದ ಪಾಠ ಕಲಿತ ಪಾಲಿಕೆ ಮೊಬೈಲ್ ಟ್ಯಾಂಕ್ ಗಳ ಮೊರೆ ಹೋಗಿದೆ.

ಇದನ್ನೂ ಓದಿ : Kerala NEET exam : ಒಳ ಉಡುಪು ತೆಗೆದು ಪರೀಕ್ಷೆ ಬರೆದವ್ರಿಗೆ, ಮತ್ತೊಂದು ಚಾನ್ಸ್

ಇದನ್ನೂ ಓದಿ : Twin towers’ demolition:1.2.3.4.5.7.8.9 ಕಟ್ಟಡ ಢಮಾರ್ ಗೆ ಕೌಂಟ್ ಡೌನ್

Ganesh Chaturthi 2022 37 Kalyanis from 8 zones 421 mobile tanks BBMP is making preparations for Ganesh discharge

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular