Twin towers’ demolition:1.2.3.4.5.7.8.9 ಕಟ್ಟಡ ಢಮಾರ್ ಗೆ ಕೌಂಟ್ ಡೌನ್

ನೋಯ್ಡಾ: ದೇಶಾದ್ಯಾಂತ ಭಾರಿ ಕುತೂಹಲ ಕೆರಳಿಸಿರುವ ಉತ್ತರ ಪ್ರದೇಶದ ನೋಯ್ಡಾದ ಅವಳಿ ಕಟ್ಟಡಗಳ Twin towers’ demolition ನೆಲಸಮ ಕಾರ್ಯಾಚರಣೆಗೆ ಕ್ಷಣಗಣನೆ ಶುರುವಾಗಿದೆ. ಇಂದು ಮಧ್ಯಾಹ್ನ 2.30ಕ್ಕೆ ಎರಡು ಮುಗಿಲೆತ್ತರದ ಕಟ್ಟಡಗಳನ್ನ ಬ್ಲಾಸ್ಟ್ ಮಾಡಿ (Supertech Twin Towers) ಧರೆಗುರುಳಿಸಲಾಗ್ತಿದೆ.

ಉತ್ತರ ಪ್ರದೇಶದ ನೋಯ್ದಾಡದ ಸೆಕ್ಟರ್ ನಂಬರ್ 93A ಪ್ರದೇಶದಲ್ಲಿ ಈ ಎರಡು ಕಟ್ಟಡಗಳಿವೆ. 103 ಮೀಟರ್ ಎತ್ತರ ಇರುವ  ಈ ಎರಡು ಕಟ್ಟಡಗಳನ್ನ ನಿಯಮಬಾಹಿರವಾಗಿ ನಿರ್ಮಿಸಲಾಗಿತ್ತು. ಹೀಗಾಗಿ ಈ ಎರಡು ಕಟ್ಟಡಗಳನ್ನ ನೆಲಮಸ ಮಾಡುವಂತೆ ಸುಪ್ರೀಂಕೋರ್ಟ್ ಆದೇಶ ನೀಡಿತ್ತು. ಹೀಗಾಗಿ ಇಂದು ಮಧ್ಯಾಹ್ನ 2.30ಕ್ಕೆ ಕಟ್ಟಡ ನೆಲಸಮ ಕಾರ್ಯಾಚರಣೆ ನಡೆಯಲಿದೆ. ವಿಶೇಷ ಸಂಗತಿ ಏನಂದ್ರೆ, ಕೇವಲ 9 ಸೆಕೆಂಡ್ ಗಳಲ್ಲಿ ಈ ಎರಡು ಕಟ್ಟಡಗಳು ಸಂಪೂರ್ಣಾವಾಗಿ ನೆಲಕ್ಕುರುಳಲಿವೆ. ಆ ಮಟ್ಟಿಗಿನ ತಂತ್ರಜ್ಞಾನ ಬಳಸಿ ಈ ಕಟ್ಟಡವನ್ನ ಕೆಡವಲಾಗ್ತಿದೆ. ಈಗಾಗಲೇ ಉತ್ತರ ಪ್ರದೇಶ ಪೊಲೀಸರು ಸ್ಥಳದಲ್ಲೇ ಬೀಡು ಬಿಟ್ಟಿದ್ದು, ಅವಳಿ ಕಟ್ಟಡದ ಸುತ್ತಲಿನ ಜನರನ್ನ ತೆರವುಗೊಳಿಸೋ ಕೆಲಸ ಮಾಡ್ತಿದ್ದಾರೆ.

ವಾಟರ್ ಫಾಲ್ ಟೆಕ್ನಿಕ್ : 103 ಮೀಟರ್ ಎತ್ತರ ಇರೋ ಎರಡು ಕಟ್ಟಡಗಳನ್ನ ಮುಂಬೈ ಮೂಲದ ಕಂಪನಿಗೆ ನೀಡಲಾಗಿದೆ. ಆ ಕಂಪನಿ  ಎರಡು ಕಟ್ಟಡ ಕೆಡವಲು ದಕ್ಷಿಣ ಆಫ್ರಿಕಾದ ತಜ್ಞರ ನೆರವನ್ನ ಪಡೆದುಕೊಂಡಿದೆ. ಅವಳಿ ಕಟ್ಟಡಗಳ ಪೈಕಿ ಅಪೆಕ್ಸ್ ಅನ್ನೋ ಹೆಸರಿನ ಕಟ್ಟಡ 32 ಫ್ಲೋರ್ ಗಳನ್ನ ಹೊಂದಿದೆ. ಇನ್ನೊಂದು ಸಯಾನಿ 29 ಫ್ಲೋರ್ ಗಳನ್ನ ಹೊಂದಿದೆ. ಈ ಕಟ್ಟಡ ಕೆಡವಲು 3700 ಕೆ.ಜಿ ಸ್ಫೋಟಕಗಳನ್ನ ಬಳಸಲಾಗ್ತಿದೆ. ಕಟ್ಟಡದ ಕಂಬಗಳಲ್ಲಿ ಸುಮಾರು 7000 ರಂಧ್ರಗಳನ್ನ ಕೊರೆದು ಸ್ಫೋಟಕಗಳನ್ನ ಅಳವಡಿಸಲಾಗಿದೆ. 7000 ರಂಧ್ರಗಳಲ್ಲಿ ಇಟ್ಟಿರೋ ಸ್ಫೋಟಕಗಳನ್ನ 20 ಸಾವಿರಕ್ಕೂ ಹೆಚ್ಚು ಸರ್ಕ್ಯೂಟ್ ಗಳ ಮೂಲಕ ಕನೆಕ್ಟ್ ಮಾಡಲಾಗಿದೆ. ಒಂದು ಬಟನ್ ಒತ್ತುತ್ತಿದ್ದಂತೆ, ಕಟ್ಟಡ ಸಂಪೂರ್ಣವಾಗಿ ಪುಡಿ ಪುಡಿಯಾಗಿ ಜಲಪಾತದಂತೆ ಕುಸಿದು ಬೀಳಲಿದೆ. ಹೀಗಾಗಿ ಇದನ್ನ ವಾಟರ್ ಫಾಲ್ ಇಂಪ್ಲೋಷನ್ ಟೆಕ್ನಿಕ್ ಅಂತಾ ಕರೆಯಲಾಗುತ್ತದೆ. ಕಟ್ಟಡವನ್ನ ಬ್ಲಾಸ್ಟ್ ಮಾಡುವ ವೇಳೆ ಭೂ ಕಂಪನದ ಅನುಭವವೂ ಆಗಲಿದೆ ಅಂತಾ ಕಟ್ಟಡ ನೆಲಸಮ ಮಾಡ್ತಿರೋ ಅಧಿಕಾರಿಗಳು ತಿಳಿಸಿದ್ದಾರೆ.

12 ನಿಮಿಷ ಆವರಿಸಲಿದೆ ಹೊಗೆ: ಕಟ್ಟಡ ನೆಲಸಮವಾಗ್ತಿದ್ದಂತೆ ಸುಮಾರು 12 ನಿಮಿಷ ಸ್ಥಳದಲ್ಲಿ ದಟ್ಟ ಹೊಗೆ ಆವರಿಸಲಿದೆ. ಬಳಿಕ ಧೂಳು ಮಿಶ್ರಿತ ಹೊಗೆ ನಿಧಾನವಾಗಿ ಮಾಯವಾಗಲಿದೆ. ಈ ಕಟ್ಟ ನೆಲಸಮ ಮಾಡೋದ್ರಿಂದ ಬರೋಬ್ಬರಿ 55 ಸಾವಿರ ಟನ್ ನಷ್ಟು ಅವಶೇಷಗಳು ಸಿಗಲಿದೆ ಅಂತಾ ಅಂದಾಜಿಸಲಾಗಿದೆ. ಈ ಎರಡು ಕಟ್ಟಡದ ಸುತ್ತ ವಾಸವಿದ್ದ ಸುಮಾರು ಐದು ಸಾವಿರ ನಿವಾಸಿಗಳನ್ನ ಬೇರೆಡೆ ಸ್ಥಳಾಂತರ ಮಾಡಲಾಗಿದೆ. ಕಟ್ಟಡದ ಸಮೀಪದಲ್ಲಿರುವ ನೋಯ್ಡಾ-ಗ್ರೇಟರ್ ಎಕ್ಸ್ ಪ್ರೆಸ್ ವೇನಲ್ಲಿ ಮಧ್ಯಾಹ್ನ 2.15ರಿಂದ 2.45ರವರೆಗೆ ಸಂಚಾರ ಬಂದ್ ಮಾಡಿ ಆದೇಶ ಹೊರಡಿಸಲಾಗಿದೆ.

ಈ ಅವಳಿ ಕಟ್ಟಡದ ಕೇವಲ 9 ಮೀಟರ್ ದೂರದಲ್ಲಿ ಇನ್ನೆರಡು ಬಹುಮಹಡಿ ಕಟ್ಟಡಗಳಿವೆ. ಆ ಎರಡು ಕಟ್ಟಡಗಳಿಗೆ ಹಾನಿಯಾಗದಂತೆ ನೆಲಸಮ ಕಾರ್ಯಾಚರಣೆ ನಡೆಯಲಿದೆ. ವಿಶೇಷ ಏನಂದ್ರೆ, ಭಾರತದಲ್ಲಿ ನೆಲಸಮವಾಗ್ತಿರೋ ಅತಿ ಎತ್ತರದ ಕಟ್ಟಡಗಳು ಆಗಿವೆ. ಅಲ್ದೆ, ವಿಶ್ವದಲ್ಲಿ ಅನೇಕ ರಾಷ್ಟ್ರಗಳಲ್ಲಿ ಇಂತಹ ಕಟ್ಟಡಗಳನ್ನ ಅಭಿವೃದ್ಧಿಗಾಗಿ, ನವೀಕರಣಕ್ಕಾಗಿ ಕೆಡವಲಾಗಿದೆ. ಆದ್ರೆ ಭಾರತದಲ್ಲಿ ಮಾತ್ರ ಅಕ್ರಮ ಕಟ್ಟಡ ಅನ್ನೋ ಕಾರಣಕ್ಕೆ ಕಟ್ಟಡಗಳನ್ನ ನೆಲಸಮ ಮಾಡಲಾಗುತ್ತಿದೆ.

ಇದನ್ನೂ ಓದಿ : BPL card holder good news: ಬಿಪಿಎಲ್ ಕಾರ್ಡ್‌ದಾರರಿಗೆ ಸಂತಸದ ಸುದ್ದಿ: ಸಾಲಕ್ಕಾಗಿ ಸರ್ಕಾರದಿಂದ ಅರ್ಜಿ ಆಹ್ವಾನ

ಇದನ್ನೂ ಓದಿ : Kerala NEET exam : ಒಳ ಉಡುಪು ತೆಗೆದು ಪರೀಕ್ಷೆ ಬರೆದವ್ರಿಗೆ, ಮತ್ತೊಂದು ಚಾನ್ಸ್

Twin towers demolition-Demolition Blast-massive explosion- Supertech Twin Towers in Sector 93A

Comments are closed.