ಬೆಂಗಳೂರು : ಉದ್ಯಾನ ನಗರಿ ಎಂದೇ ಕರೆಯಿಸಿಕೊಳ್ಳೋ ಬೆಂಗಳೂರಿನಲ್ಲಿ ಗಲ್ಲಿಗೊಂದು ಪಾರ್ಕ್ ಇದೆ. ಆದರೆ ನೀವು ವಾಯುವಿಹಾರ ಮಾಡಬೇಕು, ವಾಕ್ ಮಾಡಿ , ಓಡಾಡಿ ಹಗುರವಾಗಬೇಕು ಅಂತ ಯಾವಾಗ ಅಂದ್ರೇ ಅವಾಗ ಪಾರ್ಕ್ ಗೆ ಹೋದರೇ ಅಲ್ಲಿ ಮುಚ್ಚಿದ ಗೇಟ್ ನಿಮ್ಮನ್ನು ಸ್ವಾಗತಿಸುತ್ತಿತ್ತು. ಆದರೆ ಇನ್ಮುಂದೇ ಹೀಗಾಗಲ್ಲ. ಯಾಕೆಂದರೇ ನಗರದ ಪಾರ್ಕ್ ಗಳನ್ನು ದಿನವಿಡಿ ತೆರೆಯೋದಿಕ್ಕೆ (Good News for walkers) ಬಿಬಿಎಂಪಿ ಅನುಮತಿ ನೀಡಿದೆ.
ಈ ಬಗ್ಗೆ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಆದೇಶ ಹೊರಡಿಸಿದ್ದಾರೆ. ಬೆಳಗ್ಗೆ 5 ಗಂಟೆಯಿಂದ ರಾತ್ರಿ 8 ಗಂಟೆಯವರೆಗೂ ಪಾರ್ಕ್ ಗಳನ್ನು ತೆರೆದಿಡಲು ತುಷಾರ್ ಗಿರಿನಾಥ್ ಆದೇಶ ಹೊರಡಿಸಿದ್ದಾರೆ. ಇಷ್ಟು ದಿನಗಳ ಕಾಲ ಬೆಂಗಳೂರಿನಲ್ಲಿರೋ ಪಾರ್ಕ್ ಗಳು ಬೆಳಗ್ಗೆ 5 ರಿಂದ ಮಧ್ಯಾಹ್ನ 10 ಗಂಟೆ ಹಾಗೂ ಸಂಜೆ 4 ರಿಂದ 8 ಗಂಟೆಯವರೆಗೆ ಮಾತ್ರ ಅವಕಾಶವಿತ್ತು. ಇದರಿಂದ ಉದ್ಯೋಗಸ್ಥರು, ಮಹಿಳೆಯರು ವಾಯುವಿಹಾರ ಮಾಡಲು ಅವಕಾಶವಿಲ್ಲದೇ ಪರದಾಡುತ್ತಿದ್ದರು. 10 ಗಂಟೆಗೆ ಪಾರ್ಕ್ ಗಳು ಕ್ಲೋಸ್ ಆಗೋದರಿಂದ ಮಹಿಳೆಯರು ಮನೆಕೆಲಸ ಮುಗಿಸಿ ಪಾರ್ಕ್ ಗೆ ಬರೋದರಲ್ಲಿ ಪಾರ್ಕ್ ಬಾಗಿಲುಗಳು ಮುಚ್ಚಿರುತ್ತಿದ್ದವು.
ಅದರಲ್ಲೂ ಬಿಬಿಎಂಪಿ ಪಾರ್ಕ್ ಗಳಲ್ಲಿ ಇತ್ತೀಚಿನ ಕೆಲ ವರ್ಷಗಳಲ್ಲಿ ವ್ಯಾಯಾಮ ಕ್ಕೆ ಪೂರಕವಾದ ಇಕ್ಯುಪಮೆಂಟ್ ಗಳನ್ನು ಅವಳಡಿಸಲಾಗಿತ್ತು. ಇದರಿಂದ ಜನರು ಬಿಬಿಎಂಪಿ ಪಾರ್ಕ್ ಗಳಿಗೆ ಬರೋದು ಕೂಡ ಹೆಚ್ಚಿತ್ತು. ಕೊರೋನಾ,ಬಿಪಿ ಶುಗರ್ ನಂತಹ ಸಮಸ್ಯೆಗಳಿಂದ ಜನರಲ್ಲಿ ಇತ್ತೀಚಿಗೆ ಆರೋಗ್ಯದ ಬಗ್ಗೆ ಕಾಳಜಿ ಮೂಡಿದ್ದು ಹಿಂದೆಂದಿಗಿಂತಲೂ ಹೆಚ್ಚು ವಾಕ್ ಮತ್ತು ವ್ಯಾಯಾಮದ ಬಗ್ಗೆ ಕಾಳಜಿ ಮೂಡಿದೆ. ಹೀಗಾಗಿ ಜನರು ಹೆಚ್ಚು ಹೆಚ್ಚು ಪಾರ್ಕ್ ಗಳಿಗೆ ಬರಲಾರಂಭಿಸಿದ್ದಾರೆ. ಆದರೆ ಬಿಬಿಎಂಪಿ ನಿಯಮಗಳಿಂದಾಗಿ ವಾಯುವಿಹಾರಿಗಳಿಗೆ ನಿರಾಸೆ ಎದುರಾಗಿತ್ತು.
ಈಗ ಬಿಬಿಎಂಪಿಯ ಪರಿಷ್ಕೃತ ಆದೇಶ ನಗರದ ಜನತೆಗೆ ಖುಷಿಕೊಟ್ಟಿದೆ. ಆದರೆ ದಿನವೀಡಿ ಪಾರ್ಕ್ ಗಳು ಒಫನ್ ಇರೋದರಿಂದ ಪಾರ್ಕ್ ಗಳ ಸುತ್ತ ಜನದಟ್ಟಣೆ ನಿರ್ವಹಣೆ ಹಾಗೂ ಪೋಲಿಗಳ ಕಾಟ ನಿರ್ವಹಣೆ ಪೊಲೀಸರಿಗೆ ದೊಡ್ಡ ಸವಾಲಾಗಿದ್ದು, ಪೊಲೀಸ್ ಇಲಾಖೆ ಇನ್ನಷ್ಟು ಶ್ರಮವಹಿಸುವ ಸ್ಥಿತಿ ಎದುರಾಗಲಿದೆ.
ಇದನ್ನೂ ಓದಿ : Kickboxer Nikhil Suresh Dies : ಕಿಕ್ ಬಾಕ್ಸಿಂಗ್ ಪಂದ್ಯಾವಳಿ ಎಡವಟ್ಟು: ಎದುರಾಳಿ ಪಂಚ್ ಗೆ ಪ್ರಾಣಬಿಟ್ಟ ಬಾಕ್ಸರ್
ಇದನ್ನೂ ಓದಿ : ಒತ್ತಿನೆಣೆ ಕಾರು ಸುಟ್ಟ ಪ್ರಕರಣ : ಸಿನಿಮಾ ಸ್ಟೈಲ್‌ನಲ್ಲಿ ಸೂಸೈಡ್ ಹೈಡ್ರಾಮ, ಅಮಾಯಕನನ್ನು ಸುಟ್ಟ ಕೊಂದ ಪಾಪಿಗಳು
Good News for walkers, full day Open Parks in Bangalore