ಭಾನುವಾರ, ಏಪ್ರಿಲ್ 27, 2025
Homeನಮ್ಮ ಬೆಂಗಳೂರುHygiene Habits :ಸ್ವಚ್ಛತೆಯ ಭರದಲ್ಲಿ ಲ್ಯಾಪ್​ಟಾಪ್​​ನ್ನೂ ತೊಳೆದ ಪತ್ನಿ..! ಮಹಿಳೆಯ ಶುಚಿತ್ವದ ಕಾಯಿಲೆ ಕಂಡು ದಂಗಾದ...

Hygiene Habits :ಸ್ವಚ್ಛತೆಯ ಭರದಲ್ಲಿ ಲ್ಯಾಪ್​ಟಾಪ್​​ನ್ನೂ ತೊಳೆದ ಪತ್ನಿ..! ಮಹಿಳೆಯ ಶುಚಿತ್ವದ ಕಾಯಿಲೆ ಕಂಡು ದಂಗಾದ ಪತಿರಾಯ

- Advertisement -

ಮನೆ ಸ್ವಚ್ಛವಾಗಿ ಅಚ್ಚುಕಟ್ಟಾಗಿ ಇರಬೇಕು ಅಂದರೆ ಗೃಹಿಣಿ ಇರಬೇಕು ಅಂತಾ ಹಿರಿಯರು ಹೇಳುತ್ತಾರೆ. ಆದರೆ ಇಲ್ಲೊಂದು ಕುಟುಂಬಕ್ಕೆ ಸ್ವಚ್ಛತೆ ಅನ್ನೋದೇ ಶಾಪವಾಗಿ ಸಂಭವಿಸಿದೆ. ಕಂಡ ಕಂಡ ವಸ್ತುವನ್ನೆಲ್ಲ ಸ್ವಚ್ಛ(Hygiene Habits) ಮಾಡುವ ಕಾಯಿಲೆ ಹೊಂದಿರುವ ಪತ್ನಿಯ ಕಾಟದಿಂದ ಸೋತು ಸುಣ್ಣವಾದ ಪತಿ ಇದೀಗ ವಿಚ್ಛೇದನ ಪಡೆಯುವ ಬಗ್ಗೆ ಯೋಚನೆ ಮಾಡ್ತಿದ್ದಾರಂತೆ.

ಬೆಂಗಳೂರಿನ ಆರ್​ಟಿ ನಗರದಲ್ಲಿರುವ ಟೆಕ್ಕಿಯೊಬ್ಬರ ಪತ್ನಿಗೆ ಎಷ್ಟರ ಮಟ್ಟಿಗೆ ಶುಚಿತ್ವದ ಗೀಳಿದೆ ಅಂದರೆ ಆಕೆ ಡಿಟರ್ಜಂಟ್​ನಿಂದ ಪತಿಯ ಮೊಬೈಲ್​ ಹಾಗೂ ಲ್ಯಾಪ್​ಟಾಪ್​​ ಸ್ವಚ್ಛಗೊಳಿಸುತ್ತಾಳಂತೆ. ಶಾಲೆಯಿಂದ ಬಂದ ಮಕ್ಕಳು ಬಟ್ಟೆ, ಶೂ ತೊಳೆಯಲೇ ಬೇಕಂತೆ. ಆಫೀಸಿನಿಂದ ಮನೆಗೆ ಮರಳಿದ ಪತಿ ಬಟ್ಟೆ, ಚಪ್ಪಲಿ ತೊಳೆಯೋದು ಹಾಗಿರಲಿ. ಮೊಬೈಲ್​ ಕೂಡ ತೊಳೆಯಬೇಕು ಎಂಬುದು ಈಕೆಯ ವಾದವಂತೆ.

2009ರಲ್ಲಿ ಎಂಬಿಎ ಪದವಿಧರೆಯನ್ನು ಮದುವೆಯಾಗಿದ್ದ ಟೆಕ್ಕಿ ಆಕೆಯನ್ನು ತನ್ನೊಂದಿಗೆ ಇಂಗ್ಲೆಂಡಿಗೆ ಕರೆದೊಯ್ದಿದ್ದರು. ಆರಂಭದಲ್ಲಿ ಎಲ್ಲವೂ ಚೆನ್ನಾಗಿಯೇ ಇತ್ತು. ಮನೆ ಅಚ್ಚುಕಟ್ಟಾಗಿ ಇರ್ತಾ ಇದ್ದಿದ್ದರಿಂದ ಟೆಕ್ಕಿ ಪತಿ ಕೂಡ ಪತ್ನಿಯ ಬಗ್ಗೆ ಸಖತ್​ ಹೆಮ್ಮೆ ಹೊಂದಿದ್ದರು. ಆದರೆ ಮದುವೆಯಾಗಿ 2 ವರ್ಷ ಕಳೆದ ಬಳಿಕ ಮೊದಲ ಮಗು ಜನಿಸಿದ್ದೇ ದಾಂಪತ್ಯ ಜೀವನ ಕಲಸು ಮೇಲೋಗರವಾಗಿದೆ.

ಒಸಿಸಿ ಸಮಸ್ಯೆಯಿಂದ ಬಳಲುತ್ತಿದ್ದ ಪತ್ನಿಯು ಕಂಡ ಕಂಡ ವಸ್ತುಗಳನ್ನು ತೊಳೆಯಲು ಆರಂಭಿಸಿದಳು. ಯಾವಾಗ ಪತ್ನಿ ಮೊಬೈಲ್​ ಕೂಡ ತೊಳೆಯಲು ಆರಂಭಿಸಿದಳೋ ಆಗ ಟೆಕ್ಕಿ ಪತಿಗೆ ಸಹಿಸಲು ಸಾಧ್ಯವಾಗಿರಲಿಲ್ಲ. ಆತ ಡಿವೋರ್ಸ್​ ಪಡೆಯುವ ಬಗ್ಗೆ ಯೋಚಿಸಲು ಆರಂಭಿಸಿದ್ರು. ಆದರೆ ಇಂಗ್ಲೆಂಡ್​ನಿಂದ ಭಾರತಕ್ಕೆ ಮರಳಿದ್ದ ಈ ಜೋಡಿ ಕೌನ್ಸೆಲಿಂಗ್​​ಗೆ ಒಳಗಾದ ಬಳಿಕ ಎಲ್ಲವೂ ಸರಿಯಾಗಿತ್ತು. ಇವರಿಗೆ ಎರಡನೇ ಮಗು ಕೂಡ ಜನಿಸಿತ್ತು. ಆದರೆ ಸ್ವಚ್ಛತೆ ಕಾಯಿಲೆ ಮಾತ್ರ ವಾಸಿಯಾಗಿರಲಿಲ್ಲ. ಪತಿಯ ತಾಯಿ ನಿಧನರಾದ ಬಳಿಕ ಪತಿ ಹಾಗೂ ಮಕ್ಕಳನ್ನೇ ಒಂದು ತಿಂಗಳುಗಳ ಕಾಲ ಮನೆಯಿಂದ ಹೊರ ಹಾಕಿದ್ದ ಪತ್ನಿ ಮನೆಯ ಇಂಚಿಂಚನ್ನೂ ಸ್ವಚ್ಛಗೊಳಿಸಿದ್ದಳಂತೆ.

ಪತ್ನಿಯ ಕಾಟದಿಂದ ಬೇಸತ್ತ ಪತಿ ತನ್ನ ಮಕ್ಕಳೊಡನೆ ಪೋಷಕರ ಮನೆಗೆ ತೆರಳಿದ್ದಾರೆ. ಆದರೆ ಪತ್ನಿ ಪೊಲೀಸ್​ ಠಾಣೆ ಮೆಟ್ಟಿಲೇರಿದ್ದಾಳೆ. ವಿಚಾರಣೆ ವೇಳೆ ಮಹಿಳೆಗೆ ಒಸಿಡಿ ಸಮಸ್ಯೆ ಇರೋದು ತಿಳಿದು ಬಂದಿದೆ. ಪತಿಯು ಈಕೆಯ ಜೊತೆ ಸಂಸಾರ ನಡೆಸೋಕೆ ಸಾಧ್ಯವಿಲ್ಲ ಅಂತಿದ್ರೆ ಪತ್ನಿ ಮಾತ್ರ ನನಗೇನಾಗಿದೆ ಮನೆ ಸ್ವಚ್ಛವಾಗಿಟ್ಟುಕೊಳ್ಳೋದ್ರಲ್ಲಿ ತಪ್ಪೇನಿದೆ ಅಂತಿದ್ದಾಳೆ.

ಇದನ್ನು ಓದಿ : Omicron Karnataka : ಕರ್ನಾಟಕಕ್ಕೆ ಒಮಿಕ್ರಾನ್‌ ಭೀತಿ : ಬೆಂಗಳೂರಿಗೆ ಬಂದ ಇಬ್ಬರಿಗೆ ಕೊರೊನಾ ಸೋಂಕು ದೃಢ !

‘Gopi Bahu’ act gone wrong? Bengaluru techie wants divorce after wife washes his laptop with detergent

RELATED ARTICLES

Most Popular