Omicron Found In Karnataka : ಕರ್ನಾಟಕಕ್ಕೆ ಕಾಲಿಟ್ಟ ಓಮಿಕ್ರಾನ್‌ ವೈರಸ್‌ : ಇಬ್ಬರಲ್ಲಿ ಸೋಂಕು ದೃಢ

ಬೆಂಗಳೂರು : ವಿಶ್ವವನ್ನೇ ತಲ್ಲಣಗೊಳಿಸಿರುವ ಕೊರೊನಾ ರೂಪಾಂತರ ಓಮಿಕ್ರಾನ್‌ ವೈರಸ್‌ ಇದೀಗ ಕರ್ನಾಟಕಕ್ಕೂ ( Omicron Found In Karnataka ) ಕಾಲಿಟ್ಟಿದೆ. ದಕ್ಷಿಣ ಆಫ್ರಿಕಾದಿಂದ ವಾಪಾಸಾಗಿದ್ದ ಇಬ್ಬರಲ್ಲಿ ಓಮಿಕ್ರಾನ್‌ ಸೋಂಕು ಪತ್ತೆಯಾಗಿದೆ ಎಂದು ಕೇಂದ್ರ ಆರೋಗ್ಯ ಇಲಾಖೆ ಮಾಹಿತಿಯನ್ನು ನೀಡಿದೆ.

೪೪ ವರ್ಷ ವ್ಯಕ್ತಿ ಹಾಗೂ 66 ವರ್ಷದ ವೃದ್ದ ಸೇರಿದಂತೆ ಇಬ್ಬರಿಗೆ ಇದೀಗ ಓಮಿಕ್ರಾನ್‌ ವೈರಸ್‌ ಇರುವುದು ದೃಢಪಟ್ಟಿದೆ. ಭಾರತದಲ್ಲಿ ಇದುವರೆಗೂ ಒಟ್ಟು ಎರಡು ಓಮಿಕ್ರಾನ್‌ ಪ್ರಕರಣ ಪತ್ತೆಯಾಗಿದ್ದು, ಎರಡೂ ಪ್ರಕರಣಗಳು ಕೂಡ ಕರ್ನಾಟಕದ್ದೇ ಆಗಿದೆ. ಆದರೆ ವ್ಯಕ್ತಿಗಳ ಕುರಿತ ಮಾಹಿತಿಯನ್ನು ಆರೋಗ್ಯ ಇಲಾಖೆ ಬಹಿರಂಗ ಪಡಿಸಿಲ್ಲ.

ಕರ್ನಾಟಕದ ಮೂಲಕ ಇದೀಗ ಭಾರತಕ್ಕೆ ಓಮಿಕ್ರಾನ್‌ ಎಂಟ್ರಿ ಕೊಟ್ಟಿದೆ. ನವೆಂಬರ್ 29 ರಂದು ಒಟ್ಟು 45 ಮಂದಿ ದಕ್ಷಿಣ ಆಫ್ರಿಕಾದಿಂದ ವಾಪಾಸಾಗಿದ್ದರು. ಈ ವೇಳೆಯಲ್ಲಿ ಅವರನ್ನು ಟೆಸ್ಟ್‌ಗೆ ಒಳಪಡಿಸಲಾಗಿದ್ದು, ಇದೀಗ ಇಬ್ಬರ ಲ್ಯಾಬ್‌ ರಿಪೋರ್ಟ್‌ನಲ್ಲಿ ಓಮಿಕ್ರಾನ್‌ ಸೋಂಕು ಇರುವುದು ದೃಢಪಟ್ಟಿದೆ.

ವಿಮಾನದಲ್ಲಿ ಬಂದಿರುವ ಇತರ ಪ್ರಯಾಣಿಕರನ್ನು ಈಗಾಗಲೇ ಕ್ವಾರಂಟೈನ್‌ನಲ್ಲಿ ಇರಿಸಲಾಗಿದ್ದು, ಅವರನ್ನು ಪತ್ತೆ ಪರೀಕ್ಷೆಗೆ ಒಳಪಡಿಸುವ ಸಾಧ್ಯತೆಯಿದೆ. ಜೊತೆಗೆ ಈಗಾಗಲೇ ಇಬ್ಬರೂ ಸೋಂಕಿತರ ಪ್ರಾಥಮಿಕ ಹಾಗೂ ದ್ವಿತೀಯ ಸಂಪರ್ಕಿತರ ಪಟ್ಟಿಯನ್ನು ಈಗಾಗಲೇ ಸಿದ್ದಪಡಿಸಲಾಗಿದೆ ಎನ್ನಲಾಗುತ್ತಿದೆ.

ದಕ್ಷಿಣ ಆಫ್ರಿಕಾದಿಂದ ಬಂದು ಉಳಿದುಕೊಂಡಿರುವ ಹೋಟೆಲ್‌ ಸಿಬ್ಬಂದಿಗಳನ್ನು ಕೂಡ ಪರೀಕ್ಷೆಗೆ ಒಳಪಡಿಸುವ ಸಾಧ್ಯತೆಯಿದೆ. ಓಮಿಕ್ರಾನ್‌ ದೃಢಪಟ್ಟಿರುವ ಇಬ್ಬರ ಪೈಕಿ ಓರ್ವ ಉದ್ಯಮಿಯಾಗಿದ್ದು, ಭಾರತದಿಂದ ದಕ್ಷಿಣ ಆಫ್ರಿಕಾಕ್ಕೆ ವಾಪಾಸಾಗಿದ್ದಾರೆ ಎನ್ನಲಾಗುತ್ತಿದೆ. ಆದರೆ ಮತ್ತೋರ್ವರು ಬೊಮ್ಮನಹಳ್ಳಿಯ ನಿವಾಸಿ ಎಂದು ಹೇಳಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಬಿಬಿಎಂಪಿ ಮಾಹಿತಿಯನ್ನು ಕಲೆ ಹಾಕುವ ಕಾರ್ಯವನ್ನು ಮಾಡುತ್ತಿದೆ.

ಇದನ್ನೂ ಓದಿ : School Close : ರಾಜ್ಯದಲ್ಲಿ ಶಾಲೆ, ಕಾಲೇಜುಗಳು ಬಂದ್‌ : ಸುಳಿವು ಕೊಟ್ಟ ಸಿಎಂ ಬೊಮ್ಮಾಯಿ

ಇದನ್ನೂ ಓದಿ : 23 ನರ್ಸಿಂಗ್‌ ವಿದ್ಯಾರ್ಥಿಗಳಿಗೆ ಕೊರೊನಾ : ನಂಜಪ್ಪ ಆಸ್ಪತ್ರೆ, ಕಾಲೇಜು ಸೀಲ್‌ ಡೌನ್‌

ಇದನ್ನೂ ಓದಿ : Omicron Vs Delta : ಡೆಲ್ಟಾ ಫ್ಲಸ್‌ಗಿಂತ 6 ಪಟ್ಟು ಹೆಚ್ಚು ಅಪಾಯಕಾರಿಯಂತೆ ಓಮಿಕ್ರಾನ್‌

(Omicron Found In Karnataka )

Comments are closed.