ಬೆಂಗಳೂರು : ಸಾರ್ವಜನಿಕರಿಂದ ಸಾಲು ಸಾಲು ದೂರುಗಳು ಹಾಗೂ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡಿದ ವಿಡಿಯೋಗಳಿಂದಾಗಿ ಬೆಂಗಳೂರಿನಲ್ಲಿ ಟೋಯಿಂಗ್ (vehicle towing )ಸ್ಥಗಿತಗೊಂಡಿದೆ. ಟೋಯಿಂಗ್ ಸ್ಥಗಿತಗೊಳಿಸುವಾಗ ಕೆಲವೇ ಕೆಲವು ದಿನಗಳಲ್ಲಿ ಸೂಕ್ತ ಮಾರ್ಗಸೂಚಿ ಬಿಡುಗಡೆ ಮಾಡೋದಾಗಿ ಹೇಳಿದ್ದ ಸರ್ಕಾರ ಈಗ ಟೋಯಿಂಗ್ (Towing Guidelines) ತಂಟೆಗೆ ಹೋಗ್ತಿಲ್ಲ. ಹೀಗಾಗಿ ನಗರದಲ್ಲಿ ಟೋಯಿಂಗ್ ವಾಹನದವರಿಗೆ ಹಾಗೂ ಸರ್ಕಾರಕ್ಕೆ ನಷ್ಟ ಎದುರಾಗಿದೆ.
ಹೌದು ಸಿಲಿಕಾನ್ ಸಿಟಿಯಲ್ಲಿ ಟೋಯಿಂಗ್ ನಿಲ್ಲಿಸಿ ಎರಡು ತಿಂಗಳೇ ಕಳೆದುಹೋಗಿದೆ. ಟೋಯಿಂಗ್ ನಿಲ್ಲಿಸುವಾಗ 15 ದಿನದಲ್ಲಿ ಸ್ಪಷ್ಟ ಮಾರ್ಗಸೂಚಿ ಬಿಡುಗಡೆಗೊಳಿಸುವುದಾಗಿ ಭರವಸೆ ನೀಡಿತ್ತು. ಆದರೆ ಇನ್ನೂ ಟೋಯಿಂಗ್ ಬಗ್ಗೆ ಆಗಲಿ, SOP ಬಗ್ಗೆಯಾಗಲಿ ಪೊಲೀಸ್ ಇಲಾಖೆ ಇನ್ನೂ ಸ್ಪಷ್ಟ ನಿರ್ಧಾರಕ್ಕೆ ಬಂದಿಲ್ಲ. ಸರ್ಕಾರಕ್ಕೆ ಮನವಿ ಮಾಡಿದ್ರು ಇನ್ನೂ ಎಸ್ಓಪಿ ರಚನೆಗೆ ಸಿಕ್ಕಿಲ್ಲ ಅನುಮತಿ ಎನ್ನಲಾಗ್ತಿದೆ. ಇನ್ನೊಂದೆಡೆ ಪೊಲೀಸರು ಇತ್ತ ಸರ್ಕಾರದ ಅನುಮತಿಯೂ ಸಿಗದೆ,ಅತ್ತ ಟೋಯಿಂಗ್ ವಾಹನ ಏಜೆನ್ಸಿಗೆ ಕಾಟವೂ ತಡೆಯಲಾರದೇ ಬೇಸತ್ತು ಹೋಗಿದ್ದಾರಂತೆ.
ಇನ್ನೂ ನಗರದಲ್ಲಿ ಪ್ರತಿನಿತ್ಯ ನಡೆಯುತ್ತಿದ್ದ ಟೋಯಿಂಗ್ ನಿಂದ ಸರ್ಕಾರಕ್ಕೆ ಆದಾಯವಿತ್ತು. ಎರಡು ತಿಂಗಳಿಂದ ಟೋಯಿಂಗ್ ನಿಲ್ಲಿಸಿದ್ದರಿಂದ ಸರ್ಕಾರದ ಬೊಕ್ಕಸಕ್ಕೆ 12 ಕೋಟಿ ನಷ್ಟವಾಗಿದೆ ಎಂದು ಅಂದಾಜಿಸಲಾಗುತ್ತಿದೆ. ನಗರದಲ್ಲಿ ಒಟ್ಟು 44 ಸಂಚಾರಿ ಠಾಣೆಗಳು ಇದ್ದು 97 ಟೋಯಿಂಗ್ ವಾಹನಗಳಿದ್ದು, ಒಂದು ಟೋಯಿಂಗ್ ವಾಹನ ದಿನಕ್ಕೆ 35-40 ವಾಹನಗಳು ಟೋ ಮಾಡುತ್ತಿದ್ದವು. ಈ 97 ಟೋಯಿಂಗ್ ವಾಹನಗಳಿಂದ ಸರ್ಕಾರಕ್ಕೆ ದಿನವೊಂದಕ್ಕೆ ಅಂದಾಜು 15-18 ಲಕ್ಷ ರೂಪಾಯಿ ಬರ್ತಿತ್ತು.
ಆದರೆ ಈಗ ಎರಡು ತಿಂಗಳಿಗೆ ಟೋಯಿಂಗ್ ನಿಲ್ಲಿಸಿರೋದರಿಂದ ಬರೋಬ್ಬರಿ 12 ಕೋಟಿ ನಷ್ಟವಾಗಿದೆ. ಈ ಮಧ್ಯೆ ಟೋಯಿಂಗ್ ನಿಲ್ಲಿಸೋದರಿಂದ ಟೋಯಿಂಗ್ ವಾಹನದ ಏಜೆನ್ಸಿಗಳಿಗೆ ನಷ್ಟವಾಗುತ್ತಿದೆ. ಹೀಗಾಗಿ ಟೋಯಿಂಗ್ ವಾಹನ ಏಜೆನ್ಸಿಗಳು ಪೊಲೀಸರ ಮೇಲೆ ಒತ್ತಡ ಹಾಕುತ್ತಿದ್ದು, ಸಿಬ್ಬಂದಿಗೆ ಸಂಬಳ ಕೊಡಬೇಕು,ವಾಹನಗಳ ಸಾಲ ಕಟ್ಟಬೇಕು. ಈಗಾಗಲೇ ಎರಡು ತಿಂಗಳಾಗಿದೆ. ಇನ್ನೂ ಟೋಯಿಂಗ್ ಆರಂಭವಾಗೋ ಲಕ್ಷಣವಿಲ್ಲ ಎಂದು ಅಸಮಧಾನ ವ್ಯಕ್ತಪಡಿಸುತ್ತಿದ್ದಾರೆ.
ಇದರ ಮಧ್ಯೆ ಟೋಯಿಂಗ್ ನಿಲ್ಲಿಸೋದರಿಂದ ಟ್ರಾಫಿಕ್ ನಿಯಮಗಳಿಗೆ ಕ್ಯಾರೇ ಇಲ್ಲದಂತಾಗಿದ್ದು, ನೋ ಪಾರ್ಕಿಂಗ್ ಬೋರ್ಡ್ ಗಳ ಮುಂದೆಯೇ ವಾಹನ ಸವಾರರು ವಾಹನ ಪಾರ್ಕ್ ಮಾಡಿ ತೆರಳುತ್ತಿದ್ದಾರೆ. ಇನ್ನೂ ಶಾಪಿಂಗ್ ಪ್ಲೇಸ್ ಗಳಲ್ಲಿ ಎಲ್ಲೆಂದರಲ್ಲಿ ಗಾಡಿ ಪಾರ್ಕ್ ಆಗ್ತಿರೋದರಿಂದ ಅಂಗಡಿಕಾರರು ತೊಂದರೆಗೊಳಗಾಗುತ್ತಿದ್ದಾರೆ. ಹೀಗಾಗಿ ಎಲ್ಲರೂ ಟೋಯಿಂಗ್ ಗಾಗಿಕಾದಿದ್ದಾರೆ.
ಇದನ್ನೂ ಓದಿ : BMTC Digital Bus Pass : ಪೇಪರ್ ಲೆಸ್ ಪಾಸ್ : ಬಿಎಂಟಿಸಿಯಲ್ಲಿ ಮೊಬೈಲ್ ತೋರಿಸಿ ಪ್ರಯಾಣಿಸಿ
ಇದನ್ನೂ ಓದಿ : Bangalore police : ಪೊಲೀಸರ ಮೇಲೆ ಹಲ್ಲೆಗೆ ಯತ್ನ : ಉಡುಪಿ ಮೂಲದ ರೌಡಿಶೀಟರ್ ಗಳ ಮೇಲೆ ಫೈರಿಂಗ್
Government of Karnataka not published Towing Guidelines