Bangalore Karaga : ಕರಗಕ್ಕೂ ಧರ್ಮ ಸಂಘರ್ಷದ ಕರಿನೆರಳು : ಕರಗ ಸಮಿತಿ ಭೇಟಿ ಮಾಡಿದ ಮೌಲ್ವಿಗಳು

ಬೆಂಗಳೂರು : ಸಿಲಿಕಾನ್ ಸಿಟಿ ಬೆಂಗಳೂರಿನ ಜಾತ್ರೆಯಂತೆ ನಡೆಯೋ ಬೆಂಗಳೂರು ಕರಗ ಒಂದು ರೀತಿಯ ಸಾಂಪ್ರದಾಯಿಕ,ಐತಿಹಾಸಿಕ ಹಾಗೂ ಬೆಂದಕಾಳೂರಿನ ಸಾಂಸ್ಕೃತಿಕ ಪರಂಪರೆಯ ದ್ಯೋತಕ. ಆದರೆ ಈಗ ಈ ಸಾಂಸ್ಕೃತಿಕ ಹಾಗೂ ಧಾರ್ಮಿಕ ಆಚರಣೆಗೂ ಧರ್ಮದ ಕರಿ ನೆರಳು ಬೀಳಲು ಸಿದ್ಧವಾಗಿದೆ. ಇದೇ ಕಾರಣಕ್ಕೆ ಧರ್ಮಗುರುಗಳು ಕರಗ ಸಮಿತಿಯನ್ನು (Bangalore Karaga) ಭೇಟಿ ಮಾಡಿ ಮನವಿ ಮಾಡಿಕೊಂಡಿದ್ದಾರೆ.

ಬೆಂಗಳೂರಿನ ಕರಗ ಉತ್ಸವ ಮೊದಲಿನಿಂದಲೂ ಹಿಂದೂ ಮುಸ್ಲಿಂ ಸಾಮರಸ್ಯಕ್ಕೆ ಸಾಕ್ಷಿಯಾಗಿದೆ. ಪ್ರತಿವರ್ಷ ಕರಗ ಉತ್ಸವ ಮಸ್ತಾನ್ ಸಾಬ್ ದರ್ಗಾಕ್ಕೆ ಭೇಟಿ‌ ನೀಡುತ್ತದೆ. ಆದರೆ ಈ ವರ್ಷ ಹಿಜಾಬ್, ಹಲಾಲ್ ಸಂಘರ್ಷ ಹಿನ್ನೆಲೆಯಲ್ಲಿ ಕರಗ ಉತ್ಸವ ದರ್ಗಾಗೆ ಭೇಟಿ ನೀಡುತ್ತಾ ಇಲ್ಲವಾ ಅನ್ನೋ ಅನುಮಾನ ಸೃಷ್ಟಿಯಾಗಿತ್ತು. ಆದರೆ ಈ ಎಲ್ಲ ಅನುಮಾನಗಳಿಗೆ ತೆರೆ ಎಳೆಯುವಂತೆ ಮಸ್ತಾನ್ ಸಾಬ್ ದರ್ಗಾದ ಧರ್ಮಗುರುಗಳು ಶ್ರೀಧರ್ಮರಾಯಸ್ವಾಮಿ ದೇವಾಲಯಕ್ಕೆ ಭೇಟಿ ನೀಡಿದ್ದಾರೆ. ಮಾತ್ರವಲ್ಲ ಕರಗ ಉತ್ಸವ ಸಮಿತಿ ಸದಸ್ಯರನ್ನು ಭೇಟಿ ಮಾಡಿ ಕರಗ ಉತ್ಸವ ತಾಯಿಯ ಮೆರವಣಿಗೆ ಪ್ರತಿ ವರುಷದಂತೆ ನಡೆಯಲಿ ಎಂದು ಮನವಿ ಮಾಡಿದ್ದಾರೆ.

ನಗರದ ಬಳೇಪೇಟೆ ಬಳಿ ಇರುವ ಮಸ್ತಾನ್ ಸಾಬ್ ದರ್ಗಾದ ಮುಂದೆ ಮೆರವಣಿಗೆ ಬರಲಿದೆ. ಈ ಸಂಪ್ರದಾಯ ಹಾಗೇ ನಡೆಯಲಿ ಮುಸ್ಲಿಂ ಸಮುದಾಯದ ಸಹಕಾರ, ಪ್ರೀತಿ ಇರುತ್ತೆ
ನಮ್ಮ ಪೂರ್ವಿಕರ ಕಾಲದಿಂದ ನಡೆದು ಬಂದ ರೀತಿ ಹೀಗೆಯೇ ಜರುಗಲಿ ಎಂದು ಮನವಿ ಮಾಡಿಕೊಂಡಿದ್ದಾರಂತೆ. ಈಗಾಗಲೇ ಮುಸ್ಲಿಂ ವಿರುದ್ಧ ಬಾಯ್ಕಾಟ್ ಹೋರಾಟಗಳು ರಾಜ್ಯದಲ್ಲಿ ಜೋರಾಗಿದ್ದು, ಹಿಂದೂ ದೇವಾಲಯದ ಬಳಿ ಮುಸ್ಲಿಂ ವ್ಯಾಪಾರಸ್ಥರು ವ್ಯಾಪಾರ ಮಾಡೋದು ಬೇಡ ಎಂಬ ಹೋರಾಟ ಜೋರಾಗಿದೆ. ಹೀಗಾಗಿ ಬೆಂಗಳೂರಿನ ಕರಗಾ ವೇಳೆಯೂ ಕರಗ ಉತ್ಸವ ಮುಸ್ಲಿಂ ಮಸೀದಿಗೆ ಭೇಟಿ ನೀಡೋದು ಬೇಡ ಎಂಬ ಆಗ್ರಹವೂ ವ್ಯಕ್ತವಾಗಲಾರಂಭಿಸಿತ್ತು. ಹೀಗಾಗಿ ಬೆಂಗಳೂರಿನ ಕರಗಕ್ಕೂ ಜಾತಿಯತೆಯ ಬಣ್ಣ ತಗುಲುವ ಭಯ ಎದುರಾಗಿತ್ತು.

ಆದರೆ ಇಂತಹ ಬೆಳವಣಿಗೆ ಗೆ ಆಸ್ಪದ ನೀಡದಂತೆ ಧರ್ಮರಾಯನ ದೇವಸ್ಥಾನಕ್ಕೆ ಮಸ್ತಾನ್ ಸಾಬ್ ದರ್ಗಾ ಮೌಲ್ವಿಗಳು ಆಗಮಿಸಿ ಮಾತಾಡಿದ್ದಾರೆ. ಹೀಗಾಗಿ ಪ್ರತಿ ವರುಷದಂತೆ ಈ ಬಾರಿ ಕರಗ ಉತ್ಸವ ಮೆರವಣಿಗೆ ಜರುಗುತ್ತೆ ಎಂದು ಕರಗ ಉತ್ಸವ ಸಮಿತಿ ವ್ಯವಸ್ಥಾಪಕ ಸಮಿತಿಯ ಅಧ್ಯಕ್ಷ ಸತೀಶ್‌ ಹೇಳಿಕೆ ನೀಡಿದ್ದಾರೆ. ಹೀಗಾಗಿ ಆರಂಭದಲ್ಲೇ ವಿಘ್ನವೊಂದು ಪರಿಹಾರವಾದಂತಾಗಿದೆ.

ಇದನ್ನೂ ಓದಿ : ಕಬ್ಬನ್ ಪಾರ್ಕ್ ಪ್ರಿಯರಿಗೆ ಶಬ್ದಮಾಲಿನ್ಯವೇ ಶತ್ರು: ಸದ್ಯದಲ್ಲೇ ಜಾರಿಯಾಗಲಿದೆ ನೋ ಹಾಂಕಿಂಗ್ ರೂಲ್ಸ್

ಇದನ್ನೂ ಓದಿ : ಹಿಜಾಬ್ ಬಿಚ್ಚಿಟ್ಟು ಪರೀಕ್ಷೆಗೆ ಬನ್ನಿ: ವಿದ್ಯಾರ್ಥಿಗಳಿಗೆ ಸರ್ಕಾರದ ಸ್ಪಷ್ಟ ಸೂಚನೆ

Bangalore Karaga : Muslim Leaders Request to Karaga Committee

Comments are closed.