Karaga festival : ಕೊರೋನಾ ಬಳಿಕ ಮೊದಲ ಕರಗ : ಉತ್ಸವಕ್ಕೆ ಭರದಿಂದ ನಡೆದಿದೆ ಸಿದ್ಧತೆ

ಬೆಂಗಳೂರು : ಸಿಲಿಕಾನ್ ಸಿಟಿ, ಉದ್ಯಾನನಗರಿ, ಬೆಂದಕಾಳೂರು ಎಂದೆಲ್ಲ ಕರೆಯಿಸಿಕೊಳ್ಳುವ ಬೆಂಗಳೂರಿನ ಸಾಂಸ್ಕೃತಿಕ ಶ್ರೀಮಂತಿಕೆಗೆ ಸಾಕ್ಷಿ ಕರಗ ಉತ್ಸವ. ಆದರೆ ಕಳೆದ ಎರಡು ವರ್ಷಗಳಿಂದ ಕರೋನಾ ಕಾರಣಕ್ಕೆ ಕಳೆಗುಂದಿದ್ದ ಈ ಉತ್ಸವಕ್ಕೆ ಈ ವರ್ಷ ಜೀವಕಳೆ ಬಂದಿದೆ. ಕರೋನಾದಿಂದ ಕಳೆಗುಂದಿದ್ದ ಕರಗ ಉತ್ಸವ ಈ ಬಾರಿ ಮತ್ತೆ ತನ್ನ ಗತ ವೈಭವಕ್ಕೆ ಮರಳಲಿದೆ. ಮೂರನೇ ಅಲೆ ಕಡಿಮೆಯಾದ ಬೆನ್ನಲ್ಲೇ ಬೆಂಗಳೂರಿನಲ್ಲಿ ಈ ಬಾರಿ ಅದ್ದೂರಿ ಕರಗ ಮಹೋತ್ಸವಕ್ಕೆ (Karaga festival ) ಉತ್ಸವ ಸಮಿತಿ ತೀರ್ಮಾನ ಮಾಡಿದೆ. ದ್ರೌಪದಿ ದೇವಿಯ ಆರಾಧನೆಗೆ ಭರದ ಸಿದ್ಧತೆಯೂ ಆರಂಭವಾಗಿದೆ.

ಕೊರೋನಾ‌‌ ಕಾರಣಕ್ಕೆ ಕರಗ ಶಕ್ತ್ಯೋತ್ಸವ ಕಳೆದ ಎರಡು ವರ್ಷದಿಂದ ನಿಂತು ಹೋಗಿತ್ತು. ಕೊರೋನಾ ಮಹಾಮಾರಿ ಆರ್ಭಟಕ್ಕೆ ಹೆದರಿ ದ್ರೌಪದಿ ದೇವಿಯ ಕರಗ ಮಹೋತ್ಸವಕ್ಕೆ (Karaga festival ) ಪಾಲಿಕೆ ಬ್ರೇಕ್ ಹಾಕಿತ್ತು. ಸರ್ಕಾರ ಅನುಮತಿ ನೀಡದೇ ಇರೋದರಿಂದ ಸರಳವಾಗಿ ದೇವರ ಪೂಜೆ‌ ಮಾಡಿ ಉತ್ಸವ ಕೈಬಿಡಲಾಗಿತ್ತು. ಆದರೆ ಈಗ ಕೊರೋನಾ ಮೂರನೇ ಅಲೆಯೂ ತಗ್ಗಿರೋದರಿಂದ ಮತ್ತೆ ಗತವೈಭವದೊಂದಿಗೆ ಕರಗ ಆಚರಿಸಲು ಸಿದ್ಧತೆ ನಡೆದಿದೆ. ನಗರದ ಧರ್ಮರಾಯ ಸ್ವಾಮಿ ದೇವಾಲಯ ಕರಗ ಉತ್ಸವಕ್ಕೆ ಸಿದ್ಧವಾಗ್ತಿದೆ.

ಏಪ್ರಿಲ್ 8 ರಂದು ಕರಗ ಶಕ್ತ್ಯೋತ್ಸವ ನಗರದಲ್ಲಿ ಆರಂಭಗೊಳ್ತಿದೆ. ಏಪ್ರಿಲ್ 14ರಂದು ಹಸಿ ಕರಗ ನಡೆಯಲಿದೆ. ಹಾಗೇ ಚೈತ್ರ ಮಾಸದ ಪೂರ್ಣಿಮೆಯಾದ ಏಪ್ರಿಲ್ 16 ರಂದು ದ್ರೌಪದಿ ದೇವಿಯ ಹೂವಿನ ಕಗರ ಶಕ್ತ್ಯೋತ್ಸವ ಜರುಗಲಿದೆ. ಸದ್ಯ ಕೊರೋನಾ ಕಡಿಮೆಯಾಗಿರೋ ಹಿನ್ನೆಲೆ ಸರ್ಕಾರ ಜಾತ್ರೆ, ಮಹೋತ್ಸವಕ್ಕೆ ಅವಕಾಶ ಕಲ್ಪಿಸಿದೆ. ಈ ಕಾರಣದಿಂದ ವಿಜೃಂಭಣೆಯಿಂದ ಕರಗ ಶಕ್ತ್ಯೋತ್ಸವ ನಡೆಸಲು ಕರಗ ಉತ್ಸವ (Karaga festival ) ಸಮಿತಿ ತೀರ್ಮಾನಿಸಿದೆ.ಇನ್ನು ಕರಗದ ಆಹ್ವಾನ ಪತ್ರಿಕೆ ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಅದು ಅಧಿಕೃತ ಆಹ್ವಾನ ಪತ್ರಿಕೆಯಲ್ಲ. ಯುಗಾದಿ ಹಬ್ಬದಂದು ಅಧಿಕೃತ ಆಹ್ವಾನ ಪತ್ರಿಕೆ ಬಿಡುಗಡೆ ಮಾಡಲಾಗುತ್ತದೆ ಅಂತ ಕರಗ ಸಮಿತಿ ತಿಳಿಸಿದೆ.

ಇನ್ನು 7 ಬಾರಿ ಕರಗ ಹೊತ್ತ ಖ್ಯಾತಿ ಹೊಂದಿರೋ ಜ್ಞಾನೇಂದ್ರ ಈ ಬಾರಿಯೂ ಕರಗ (Karaga festival )ಹೊರಲಿದ್ದಾರೆ. ಒಟ್ಟಿನಲ್ಲಿ ಕಳೆದ ಎರಡು ವರ್ಷಗಳಿಂದ ಕಳೆಗುಂದಿದ್ದ ಕರಗ ಶಕ್ತ್ಯೋತ್ಸವ ಈ ಬಾರಿ ಅದ್ದೂರಿ ಯಾಗಿ ನಡೆಯಲಿದೆ. ಹೀಗಾಗಿ ವಹ್ನೀ ಕುಲ ಕ್ಷತ್ರೀಯರ ಮನೆಗಳಲ್ಲಿ ಸಂತಸ ಮನೆ ಮಾಡಿದೆ. ಸರ್ಕಾರ ಅನುಮತಿ ನೀಡಿರೋದರಿಂದ ಜನರು ಕೂಡ ಸಂಭ್ರಮದಿಂದ ಉತ್ಸವದಲ್ಲಿ ಪಾಲ್ಗೊಳ್ಳುವ ಸಿದ್ಧತೆಮಾಡಿಕೊಳ್ತಿದ್ದಾರೆ.

ಇದನ್ನೂ ಓದಿ : ಟ್ರಾಫಿಕ್ ಪೊಲೀಸರಿಗೆ ಬಂತು ಕಡ್ಡಾಯ ಬಾಡಿ ವೋರ್ನ್ ಕ್ಯಾಮರಾ

ಇದನ್ನೂ ಓದಿ : ಕೊರೊನಾ ಸಂಕಷ್ಟದಲ್ಲಿ ನೆರವಾದ ವೈದ್ಯರಿಗೆ ಅನ್ಯಾಯ : ಗುತ್ತಿಗೆ ವೈದ್ಯರನ್ನು ಕೈಬಿಡಲು ಬಿಬಿಎಂಪಿ ಸಿದ್ಧತೆ

( Grand preparations for the first Karaga festival after the Corona pandemic )

Comments are closed.