ಮಂಗಳವಾರ, ಏಪ್ರಿಲ್ 29, 2025
HomekarnatakaBBMP Rules changes : ಬೆಂಗಳೂರಲ್ಲಿ ಫ್ಲೆಕ್ಸ್‌ಗೆ ಗ್ರೀನ್‌ ಸಿಗ್ನಲ್‌ : ಪ್ರಧಾನಿ ಮೋದಿ ಪ್ರವಾಸದ...

BBMP Rules changes : ಬೆಂಗಳೂರಲ್ಲಿ ಫ್ಲೆಕ್ಸ್‌ಗೆ ಗ್ರೀನ್‌ ಸಿಗ್ನಲ್‌ : ಪ್ರಧಾನಿ ಮೋದಿ ಪ್ರವಾಸದ ಬೆನ್ನಲ್ಲೇ ಬದಲಾಯ್ತು ಬಿಬಿಎಂಪಿ ರೂಲ್ಸ್

- Advertisement -

ಬೆಂಗಳೂರು : ಕೆಲವೊಮ್ಮೆ ಆಡಳಿತದಲ್ಲಿರೋ ಪಕ್ಷ‌ ತಮ್ಮ ಹಿತಕ್ಕಾಗಿ ನೊರೆಂಟು ನಿಯಮಗಳನ್ನು ಬದಲಾಯಿಸುತ್ತೆ. ಈಗ ಈ ಸಾಲಿಗೆ ರಾಜ್ಯ ಬಿಜೆಪಿ ಕೂಡ ಸೇರಿದೆ. ನಗರದ ಅಂದ ಕಾಪಾಡುವ ನಿಟ್ಟಿನಲ್ಲಿ ಬೆಂಗಳೂರಿನಲ್ಲಿ ಫ್ಲೆಕ್ಸ್ , ಬೋರ್ಡ್ ಹಾಕುವಂತಿಲ್ಲ ಎಂಬ ನಿಯಮ ಜಾರಿಯಲ್ಲಿದೆ. ಆದರೆ ಈಗ ಬಿಜೆಪಿ ಪ್ರಭಾವಕ್ಕೆ ಬಿಬಿಎಂಪಿ ತನ್ನ ನಿಯಮವನ್ನೇ (BBMP Rules changes )ಬದಲಾಯಿಸಿದ್ದು ಚರ್ಚೆಗೆ ಗ್ರಾಸವಾಗಿದೆ.

ನಗರದಲ್ಲಿ ಕಳೆದೊಂದು ವಾರದಿಂದ ಮೋದಿ ಹವಾ ಇತ್ತು. ರಾಜ್ಯ ಪ್ರವಾಸಕ್ಕೆ ಆಗಮಿಸೋ ಮೋದಿ ಸ್ವಾಗತಕ್ಕಾಗಿ ವಿಮಾನ ನಿಲ್ದಾಣದಿಂದ ಆರಂಭಿಸಿ ಬೆಂಗಳೂರು ನಗರದವರೆಗೂ ಬಗೆ ಬಗೆಯ ಫ್ಲೆಕ್ಸ್ ಅಳವಡಿಸಲಾಗಿತ್ತು. ಹಾಗಿದ್ದರೇ ರಾಜ್ಯದಲ್ಲಿ ಅದರಲ್ಲೂ ಬೆಂಗಳೂರಿನಲ್ಲಿ ಜಾರಿಯಲ್ಲಿದ್ದ ಫ್ಲೆಕ್ಸ್ ನಿಷೇಧ ಕಾನೂನು ಏನಾಯ್ತು ಅನ್ನೋದನ್ನು ಬಿಬಿಎಂಪಿ ಯವರಲ್ಲಿ ಪ್ರಶ್ನಿಸಿದರೇ ಅಚ್ಚರಿಯ ಉತ್ತರ ಎದುರಾಗಿದೆ. ಹೌದು ರಾಜ್ಯಕ್ಕೆ ಪ್ರಧಾನಿ ಮೋದಿ ಭೇಟಿ ಬೆನ್ನಲ್ಲೇ ಬಿಬಿಎಂಪಿ ನಿರ್ಧಾರ ಬದಲಾಗಿದೆ. ಈ ವಿಚಾರವನ್ನು ಸ್ವತಃ ಬಿಬಿಎಂಪಿ ಖಚಿತಪಡಿಸಿದೆ.

ಮೋದಿ ರಾಜ್ಯಕ್ಕೆ ಹಾಗೂ ಬೆಂಗಳೂರಿಗೆ ಭೇಟಿ ನೀಡುವ ಹಿನ್ನೆಲೆಯಲ್ಲಿ ನಗರದಾದ್ಯಂತ ಅಂದಾಜು 20 ಸಾವಿರಕ್ಕೂ ಅಧಿಕ ಫ್ಲೆಕ್ಸ್ ಅಳವಡಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ನಗರದಾದ್ಯಂತ ಬಿಬಿಎಂಪಿಗೆ ನೂರಾರು ದೂರು ಸಲ್ಲಿಕೆಯಾಗಿತ್ತು. ಕನ್ನಡ ಪರ ಸಂಘಟನೆಗಳು ಫ್ಲೆಕ್ಸ್ ಬಗ್ಗೆ ಬಿಬಿಎಂಪಿಗೆ ತರಾಟೆ ತೆಗೆದುಕೊಂಡಿದ್ದವು. ಅಲ್ಲದೇ ಹೈ ಕೋರ್ಟ್ ಆದೇಶದ ಪ್ರಕಾರ ನಗರದಲ್ಲಿ ಫ್ಲೆಕ್ಸ್ ಬ್ಯಾನರ್ ಅಳವಡಿಕೆ ಬ್ಯಾನ್ ಇದ್ರೂ ಅವಕಾಶ ನೀಡಿದ್ದು ಹೇಗೆ ಎಂದು ಪ್ರಶ್ನಿಸಿದ್ದವು. ದೂರು ಹಾಗೂ ಜನರ ಆಕ್ರೋಶದಿಂದ ಎಚ್ಚೆತ್ತ ಬಿಬಿಎಂಪಿ ಸರ್ಕಾರದ ಕೆಂಗಣ್ಣಿಗೂ ಗುರಿಯಾಗಬಾರದು ಹಾಗೂ ಜನರ ಆಕ್ರೋಶಕ್ಕೂ ತುತ್ತಾಗಬಾರದು ಎಂದು ಕಾರಣಕ್ಕೆ ತನ್ನ ಆದೇಶವನ್ನೇ ಬದಲಾಯಿಸಿರುವುದಾಗಿ ಹೇಳಿದೆ.

ಈ ಬಗ್ಗೆ ಮಾಹಿತಿ ನೀಡಿರೋ ಪಾಲಿಕೆಯ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್, ಫ್ಲೆಕ್ಸ್ ಅಳವಡಿಕೆಗೆ ಅವಕಾಶ ನೀಡಿದ್ದೇವೆ. ಈ ಹಿಂದೆ ಅಬಾಸ್ಟ್ರಕ್ಷನ್ ಆಫ್ ಪಬ್ಲಿಕ್ ಪ್ಲೇಸ್ ಅಡಿ ಯಲ್ಲಿ ನಗರದ ಅಂದ ಕಾಯಲು ಜಾಹೀರಾತು ನಿಷೇದಿಸಲಾಗಿತ್ತು. ಆದರೆ ಈಗ ನಿಯಮ ಬದಲಾಯಿಸಿದ್ದೇವೆ ಎಂದಿದ್ದಾರೆ. ಯಾರು ಬೇಕಾದರೂ ಫ್ಲೆಕ್ಸ್ ಹಾಕಬಹುದು. ಆದರೆ ಕಾರ್ಯಕ್ರಮ ಮುಗಿದ ಐದು ದಿನದಲ್ಲೇ ಫ್ಲೆಕ್ಸ್ ತೆಗೆಯಬೇಕು. ಈ ಬಗ್ಗೆ ಸದ್ಯದಲ್ಲೇ ಹೈಕೋರ್ಟ್ ಗೂ ಮನವರಿಕೆ ಮಾಡಿಕೊಡುತ್ತೇವೆ ಎಂದಿದ್ದಾರೆ. ಏನೇ ಆದರೂ ಬಿಬಿಎಂಪಿ ಮೋದಿ ಹಾಗೂ ಬಿಜೆಪಿ ಸರ್ಕಾರವನ್ನು ಒಲಿಸಿಕೊಳ್ಳಲು ಈ ಸರ್ಕಸ್ ಮಾಡಿದೆ ಎಂಬ ಅಂಶ ಈಗ‌ ಜನರು ಹಾಗೂ ವಿಪಕ್ಷಗಳ ಕಣ್ಣು ಕೆಂಪಾಗಿಸಿದೆ.

ಇದನ್ನೂ ಓದಿ : Draupadi Murmu : ರಾಷ್ಟ್ರಪತಿ ಸ್ಥಾನಕ್ಕೆ ಬುಡಕಟ್ಟು‌ಮಹಿಳೆ: ಬಿಜೆಪಿ ಅಭ್ಯರ್ಥಿಯಾಗಿ ದ್ರೌಪದಿ ಮುರ್ಮು ಆಯ್ಕೆ

ಇದನ್ನೂ ಓದಿ : 4 ಗಂಟೆಯ ಪ್ರಧಾನಿ ನರೇಂದ್ರ ಮೋದಿ ಕಾರ್ಯಕ್ರಮಕ್ಕೆ ಬಿಬಿಎಂಪಿ ಖರ್ಚು ಮಾಡಿದ್ದು 23 ಕೋಟಿ !

Green signal for Flex in Bengaluru : BBMP rules changes after PM Modi

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular