ಸೋಮವಾರ, ಏಪ್ರಿಲ್ 28, 2025
HomekarnatakaHigh Court : ರಸ್ತೆ ಗುಂಡಿ ಮುಚ್ಚದ ಬಿಬಿಎಂಪಿ ಗೆ ಹೈಕೋರ್ಟ್ ತರಾಟೆ

High Court : ರಸ್ತೆ ಗುಂಡಿ ಮುಚ್ಚದ ಬಿಬಿಎಂಪಿ ಗೆ ಹೈಕೋರ್ಟ್ ತರಾಟೆ

- Advertisement -

ಬೆಂಗಳೂರು : ಸಿಲಿಕಾನ್‌ಸಿಟಿ ಬೆಂಗಳೂರಲ್ಲಿ ರಸ್ತೆ ಮಧ್ಯೆ ಗುಂಡಿಯೋ ಗುಂಡಿ ಮಧ್ಯೆ ರಸ್ತೆಯೋ ಎನ್ನುವ ಸ್ಥಿತಿ ಇದ್ದು, ಈಗಾಗಲೇ‌ ಹಲವಾರು ಜನರು ರಸ್ತೆಯಿಂದಾಗಿ ಪ್ರಾಣ ಕಳೆದುಕೊಂಡಿದ್ದಾರೆ. ಹಲವಾರು ಭಾರಿ ಆಕ್ರೋಶ ವ್ಯಕ್ತವಾಗಿದ್ದರೂ ಬಿಬಿಎಂಪಿ ಎಚ್ಚೆತ್ತುಕೊಂಡಿಲ್ಲ. ಈ ಮಧ್ಯೆ ಬಿಬಿಎಂಪಿ (BBMP ) ವ್ಯಾಪ್ತಿಯಲ್ಲಿ ರಸ್ತೆಗುಂಡಿಗಳನ್ನು ಮುಚ್ಚುವ ವಿಚಾರಕ್ಕೆ ಹೈಕೋರ್ಟ್ (High Court ) ಮತ್ತೊಮ್ಮೆ ಗರಂ ಆಗಿದೆ.

ಹೈಕೋರ್ಟ್ (High Court) ವಿಭಾಗೀಯ ಪೀಠದಲ್ಲಿ ರಸ್ತೆ ಗುಂಡಿಗೆ ಸಂಬಂಧಿಸಿದ ಪಿಐಎಲ್ ವಿಚಾರಣೆ ಹಂತದಲ್ಲಿದ್ದು, ಈ ವಿಚಾರಣೆ ವೇಳೆ ಬಿಬಿಎಂಪಿ ಇಂಜಿನಿಯರ್ ಗಳ ವಿರುದ್ಧ ಹೈಕೋರ್ಟ್ ಗರಂಆಗಿದೆ. ರಸ್ತೆ ಗುಂಡಿಗಳಿಂದಾಗಿ ಜನ ಸಾಯುತ್ತಿದ್ದಾರೆ.ಬಿಬಿಎಂಪಿ ಏಕೆ ರಸ್ತೆ ಗುಂಡಿ ಸಮಸ್ಯೆ ಬಗೆಹರಿಸಿಲ್ಲ.ಉದ್ದೇಶಪೂರ್ವಕವಾಗಿ ಬಿಬಿಎಂಪಿ ಇಂಜಿನಿಯರ್ ಗಳು ಹೀಗೆ ಮಾಡುತ್ತಿದ್ದಾರೆ.ಸಾವಿರಾರು ಕೋಟಿ ನೀಡಿದರೂ ರಸ್ತೆ ಸರಿಯಾಗುತ್ತಿಲ್ಲ‌. ಬಿಬಿಎಂಪಿ ಇಂಜಿನಿಯರ್ ಗಳನ್ನೇ ಬದಲಿಸಲು ಸರ್ಕಾರಕ್ಕೆ ಸೂಚಿಸುತ್ತೇವೆ ಎಂದು ಹೈಕೋರ್ಟ್ ಎಚ್ಚರಿಸಿದೆ.

ಇನ್ನು ಹೈಕೋರ್ಟ್ (High Court) ಗರಂ ಆಗಿರೋದರಿಂದ ಎಚ್ಚೆತ್ತುಕೊಂಡಿರೋ ಬಿಬಿಎಂಪಿ, ರಸ್ತೆ ಗುಣಮಟ್ಟದಲ್ಲಿ ರಾಜಿ‌ ಮಾಡಿಕೊಳ್ಳುವುದಿಲ‌್ಲ.ಹೈಕೋರ್ಟ್ ಆದೇಶ ಪಾಲಿಸಿ ರಸ್ತೆ ಗುಂಡಿ ಮುಚ್ಚುತ್ತೇವೆ. 182 ರಸ್ತೆಗಳನ್ನು ಪೈಥಾನ್ ಯಂತ್ರ ಬಳಸಿ ರಿಪೇರಿ ಮಾಡಲಾಗ್ತಿದೆ.ಸಂಚಾರ ದಟ್ಟಣೆ ಹೆಚ್ಚಿರುವೆಡೆ ಪೈಥಾನ್ ಬಳಸುತ್ತಿದ್ದೇವೆ ಎಂದು ವಿವರಣೆ ನೀಡಿದೆ. ಅಲ್ಲದೇ ರಸ್ತೆ ಮರು ನಿರ್ಮಾಣಕ್ಕೆ ಹೊಸ ಟೆಂಡರ್ ಗೆ ಯಾರೂ ಬಿಡ್ ಸಲ್ಲಿಸಿಲ್ಲ‌. ಹೀಗಾಗಿ ಪೈಥಾನ್ ಯಂತ್ರಕ್ಕಾಗಿ ಮತ್ತೆ ಟೆಂಡರ್ ಕರೆಯುತ್ತೇವೆ ಎಂದು ಹೈಕೋರ್ಟ್ ಗೆ ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತ ಹೇಳಿಕೆ‌‌.

ಆದರೆ ಬಿಬಿಎಂಪಿಗೆ ರಸ್ತೆ ಗುಂಡಿ ಮುಚ್ಚುವ ವಿಚಾರದಲ್ಲಿ ಮತ್ತಷ್ಟು ಕಾಳಜಿ ವಹಿಸುವಂತೆ ಸೂಚಿಸಿರುವ ಹೈಕೋರ್ಟ್ (High Court) , ರಸ್ತೆ ಗುಂಡಿ ಮುಚ್ಚಲು ಉತ್ತಮ ತಂತ್ರಜ್ಞಾನ ಬಳಸಿ. ಬರೀ ಕಣ್ಣೊರೆಸುವ ತಂತ್ರ ಇಲ್ಲಿ‌ ನಡೆಯುವುದಿಲ್ಲ. ರಸ್ತೆಗುಂಡಿ ಸಮಸ್ಯೆಗೆ ಪರಿಹಾರ‌ ಬೇಕು.ಪೈಥಾನ್ ಯಂತ್ರ ಬಳಕೆಗೆ ಕ್ರಿಯಾ ಯೋಜನೆ ಸಲ್ಲಿಸಿ.ಮಾ.15 ರೊಳಗೆ ವರದಿ ಸಲ್ಲಿಸಲು ಹೈಕೋರ್ಟ್ ಸೂಚಿಸಿದೆ.

ಕಳೆದ ಹಲವು ವರ್ಷಗಳಿಂದ ಬೆಂಗಳೂರಿನ ರಸ್ತೆ ಗುಂಡಿಗೆ ಹಲವರು ಬಲಿಯಾಗಿದ್ದು, ಕೆಲ‌ದಿನಗಳ ಹಿಂದೆಯಷ್ಟೇ ಶಾಲಾ ಶಿಕ್ಷಕಿಯೊಬ್ಬರು ಪತಿಯ ಜೊತೆ ದ್ವಿಚಕ್ರ ವಾಹನದಲ್ಲಿ ತೆರಳುತ್ತಿದ್ದಾಗ ಅಪಘಾತಕ್ಕೆ ಬಲಿಯಾಗಿದ್ದರು. ಈ ಹಿನ್ನೆಲೆಯಲ್ಲಿ ಹಲವರು ಬೆಂಗಳೂರಿನ ರಸ್ತೆಗಳನ್ನು ಸರಿಪಡಿಸಲು ಸೂಚನೆ ನೀಡುವಂತೆ ಹೈಕೋರ್ಟ್ ಗೆ (High Court) ಮನವಿ ಮಾಡಿದ್ದರು. ಇದರಿಂದ ಎಚ್ಚೆತ್ತುಕೊಂಡ ಬಿಬಿಎಂಪಿ ಈಗಾಗಲೇ ರಸ್ತೆ ಅಗೆಯುವವರ ವಿರುದ್ಧ ಸಮರ ಸಾರಿದ್ದು ರಸ್ತೆ ಅಗೆದರೇ ಎಫ್‌ಐಆರ್‌ ದಾ ಖಲಿಸುವಂತೆ ಪೊಲೀಸ್ ಇಲಾಖೆಗೆ ಸೂಚನೆ ಕೂಡಾ ನೀಡಿದೆ.

ಇದನ್ನೂ ಓದಿ : Namma metro : ಮೆಟ್ರೋದಿಂದ ಕಡಿಮೆಯಾಯ್ತು ಬೆಂಗಳೂರು ನಗರದ ವಾಯುಮಾಲಿನ್ಯ

ಇದನ್ನೂ ಓದಿ : ಬಿಎಂಟಿಸಿ ಬಸ್ ನಲ್ಲಿ ಬೆಂಕಿ ಪ್ರಕರಣ : ತನಿಖೆಯಲ್ಲಿ ಬಯಲಾಯ್ತು ಅಸಲಿ ಕಾರಣ

High Court Tarate to BBMP that Potholes In Bengaluru Roads

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular