ಬೆಂಗಳೂರು : ಹೊಸ ವರ್ಷ ಹಾಗೂ ಯುಗಾದಿ ಹಬ್ಬದ ಸಂಭ್ರಮದಲ್ಲಿದ್ದ ಜನತೆಗೆ ಬೆಂಗಳೂರು ಸೇರಿದಂತೆ ರಾಜ್ಯದ ಹೊಟೇಲ್ ಗಳು (Hotel Food Price) ಶಾಕ್ ನೀಡಿವೆ. ಏಪ್ರಿಲ್ ಎರಡನೇ ವಾರದಿಂದ ಹೊಟೇಲ್ ಹಾಗೂ ರೆಸ್ಟೋರೆಂಟ್ ಗಳು ಊಟ ಉಪಹಾರದ ಬೆಲೆ ಏರಿಸಲು ನಿರ್ಧರಿಸಿದೆ. ಕಳೆದ ಕೆಲದಿನಗಳಿಂದ ನಡೆದಿರುವ ಬೆಲೆ ಏರಿಕೆ ಯಿಂದ ವ್ಯವಹಾರ ಹಾಗೂ ವ್ಯಾಪಾರವನ್ನು ಸರಿತೂಗಿಸುವ ನಿಟ್ಟಿನಲ್ಲಿ ಏಪ್ರಿಲ್ 2ನೇ ವಾರದಿಂದ ಹೋಟೆಲ್ ಉಪಹಾರ ಬೆಲೆ ಏರಿಸಲು ಹೊಟೇಲ್ ಮಾಲೀಕರು ನಿರ್ಧರಿಸಿದ್ದಾರೆ.

ಕಳೆದ ಎರಡೂವರೆ ತಿಂಗಳ ಹಿಂದಷ್ಟೇ ದರ ಏರಿಕೆ ಮಾಡಿದ್ದ ಹೊಟೇಲ್ ಮಾಲೀಕರ ಈಗ ಮತ್ತೆ ನಿರಂತರವಾಗಿ ಏರಿಕೆಯಾಗ್ತಿರೊ ಪೆಟ್ರೋಲ್, ಡೀಸೆಲ್, ಅಡುಗೆ ಎಣ್ಣೆ ಬೆಲೆ ಏರಿಕೆಯನ್ನು ಗಮನದಲ್ಲಿಟ್ಟುಕೊಂಡು ಮತ್ತೆ ಬೆಲೆ ಏರಿಸಲು ಸಿದ್ಧವಾಗಿದ್ದಾರೆ. ಸೋಮವಾರ ಈ ಬಗ್ಗೆ 100 ಕ್ಕೂ ಹೆಚ್ಚು ಹೊಟೇಲ್ ಮಾಲೀಕರಿಂದ ಸಭೆ ನಡೆಸಲಿದ್ದು, ಈ ಸಭೆಯಲ್ಲಿ ಬೆಂಗಳೂರು ಮತ್ತು ರಾಜ್ಯದ್ಯಾಂತ ದರ ಏರಿಕೆ ಬಗ್ಗೆ ಚರ್ಚೆ ನಡೆಯಲಿದೆ. ಈಗ ಹೋಟೆಲ್ ಮಾಲೀಕರಿಗೆ ಇತರೆ ಸಾಮಾಗ್ರಿಗಳ ಬೆಲೆ ಏರಿಕೆ ಬಿಸಿ ತಟ್ಟಿದೆ. ಹೀಗಾಗಿಬೆಲೆ ಏರಿಕೆಯಾಗಿದ್ದರೂ ಕಡಿಮೆ ದರಕ್ಕೆ ತಿಂಡಿ ಊಟ ವಿತರಣೆ ಮಾಡಲು ಸಾಧ್ಯವಾಗುತ್ತಿಲ್ಲ.

ಹೀಗಾಗಿ ಈಗ ವಿಧಿಯಿಲ್ಲದೇ ಬೆಲೆ ಏರಿಕೆ ಮಾಡಲು ಹೊಟೇಲ್ ಮಾಲೀಕರು ನಿರ್ಧರಿಸಿದ್ದಾರೆ. ಊಟ, ತಿಂಡಿ, ಕಾಫೀ, ಟೀ, ಚಾಟ್ಸ್ ಎಲ್ಲ ದರದಲ್ಲೂ ಏರಿಕೆ ಆಗಲಿದೆ ಆಹಾರ ತಿನಿಸಿನ ಮೇಲೆ ಶೇ.10 ರಷ್ಟು ದರ ಏರಿಕೆ ಚಿಂತನೆ ನಡೆದಿದೆ. ಈ ಬಗ್ಗೆ ಮಾಹಿತಿ ನೀಡಿರೋ, ಬೆಂಗಳೂರು ಹೋಟೆಲ್ ಮಾಲೀಕರ ಸಂಘ ಅಧ್ಯಕ್ಷ ಪಿ.ಸಿ ರಾವ್ ಆಹಾರ ಪದಾರ್ಥ ಹಾಗೂ ಇತರ ವಸ್ತುಗಳ ಬೆಲೆ ಇಳಿಕೆಯಾಗಬಹುದು ಎಂದು ಕಾಯುತ್ತಿದ್ದೇವು. ಆದರೆ ಬೆಲೆ ಇಳಿಕೆಯಾಗಿಲ್ಲ. ಹೀಗಾಗಿ ಅನಿವಾರ್ಯವಾಗಿ ದರ ಏರಿಸುತ್ತಿದ್ದೇವೆ ಎಂದಿದ್ದಾರೆ.

ಬೆಲೆ ಏರಿಕೆಗೆ (Hotel Food Price) ಕಾರಣಗಳೇನು ?
- ಕಮರ್ಷಿಯಲ್ ಗ್ಯಾಸ್ ಬೆಲೆ ನಿರಂತರ ಏರಿಕೆ.
- ಇಂದು ಕಮರ್ಷಿಯಲ್ ಗ್ಯಾಸ್ ಬೆಲೆ 260 ರೂ ಏರಿಕೆಯಾಗಿದೆ
- ಅಡುಗೆ ಎಣ್ಣೆ ಬೆಲೆ ಏರಿಕೆಯಾಗಿರುವುದು.
- ಅಗತ್ಯ ವಸ್ತುಗಳ ಬೆಲೆ ಏರಿಕೆ.
- ವಿದ್ಯುತ್ ದರ ಏರಿಕೆ.
- ಮುಂದಿನ ದಿನಗಳಲ್ಲಿ ಸರ್ಕಾರ ಹಾಲಿನ ದರ ಏರಿಕೆ ಮಾಡುವ ಸಾಧ್ಯತೆ ಇದೆ. ಹೀಗಾಗಿ ಕರೋನಾ ಬಳಿಕ ಜನರಿಗೆ ಬೆಲೆ ಏರಿಕೆಯೊಂದೇ ಮುಗಿಯದ ಸಮಸ್ಯೆಯಾಗಿದೆ.
ಇದನ್ನೂ ಓದಿ : ಅಧಿಕಾರಿಗಳ ದರ್ಬಾರ್ : ಸದ್ದಿಲ್ಲದೇ ಪಾಸಾಯ್ತು ಬಿಬಿಎಂಪಿ ಬಜೆಟ್
ಇದನ್ನೂ ಓದಿ : ತಡವಾಗಿ ಎಚ್ಚೆತ್ತ ಬೆಸ್ಕಾಂ : ಟ್ರಾನ್ಸ್‌ಫಾರ್ಮರ್‌ಗಳ ಕ್ಷಮತೆ, ಗುಣಮಟ್ಟ ಸರ್ವೇ ಆರಂಭ
Hotel Food Price Hike April 2nd week