IPS Bhaskar Rao : ಐಪಿಎಸ್ ಗೆ ಗುಡ್ ಬೈ ಎಂದ ಭಾಸ್ಕರ್ ರಾವ್ : ಸದ್ಯದಲ್ಲೇ ಬಿಜೆಪಿ ಸೇರ್ತಾರಾ ಖಡಕ್ ಖಾಕಿ

ಬೆಂಗಳೂರು : ಕರ್ನಾಟಕದಲ್ಲಿ ಐಪಿಎಸ್ ಗೆ ಗುಡ್ ಬೈ ಹೇಳಿ ರಾಜಕೀಯಕ್ಕೆ ಧುಮುಕುವ ಹೊಸ ಪರಂಪರೆಯೊಂದು ಆರಂಭವಾದಂತಿದೆ. ಕೆಲ ವರ್ಷಗಳ ಹಿಂದೆಯಷ್ಟೇ ಖಡಕ್ ಖಾಕಿ ಖ್ಯಾತಿಯ ಅಣ್ಣಾಮಲೈ ಐಪಿಎಸ್ ಗೆ ಗುಡ್ ಬೈ ಹೇಳಿದ್ದರು. ಇದರ ಬೆನ್ನಲ್ಲೇ ಈಗ ಮತ್ತೊಬ್ಬ ಐಪಿಎಸ್ ( IPS Bhaskar Rao ) ಸೇವೆಗೆ ಗುಡ್ ಬೈ ಹೇಳಿದ್ದು ಸದ್ಯದಲ್ಲೇ ರಾಜಕೀಯ ಸೇರೋದು ಖಚಿತ ಎನ್ನಲಾಗ್ತಿದೆ.

ಐಪಿಎಸ್ ಸೇವೆಗೆ ಗುಡ್ ಬೈ ಹೇಳಿದ ಭಾಸ್ಕರ್ ರಾವ್‌ (Bhaskar Rao) ಸರಕಾರದ ಮುಖ್ಯ ಕಾರ್ಯದರ್ಶಿ ಮತ್ತು ಡಿಜಿ/ಐಜಿಪಿಗೆ ಮಾಹಿತಿ ನೀಡಿ ಅಧಿಕಾರ ಹಸ್ತಾಂತರ ಮಾಡಿದ್ದಾರೆ. ಪ್ರಸ್ತುತ ರೈಲ್ವೇ ಇಲಾಖೆಯ ಎಡಿಜಿಪಿಯಾಗಿದ್ದ ಭಾಸ್ಕರ್ ರಾವ್, ಸ್ವಯಂ ನಿವೃತ್ತಿ ಕೋರಿ 16 ಸೆಪ್ಟೆಂಬರ್ 2021ರಲ್ಲಿ ಅರ್ಜಿ ಸಲ್ಲಿಸಿದ್ದರು. ಆದರೆ ನಿರ್ಧಾರ ಪುನರ್ಪರಿಶೀಲನೆಗೆ ಕೇಂದ್ರ ಗೃಹ ಸಚಿವಾಲಯ ಅವಕಾಶ ನೀಡಿತ್ತು.ಹೀಗೆ ಪುನರ್ ಪರಿಶೀಲನೆಗೆ ಅವಕಾಶ ನೀಡಿದ 3 ತಿಂಗಳೊಳಗೆ ನಿವೃತ್ತಿ ಕೋರಿ ಅರ್ಜಿ ಸಲ್ಲಿಸಿದ ಅಧಿಕಾರಿ ಮರಳಿ ಗೃಹ ಸಚಿವಾಲಯ ಸಂಬಂಧಿಸಿದ ಅಧಿಕಾರಿಯನ್ನ ಸಂಪರ್ಕಿಸಬೇಕು. ಆದರೆ 6 ತಿಂಗಳುಗಳೇ ಕಳೆದರೂ ಗೃಹ ಸಚಿವಾಲಯದ ಉತ್ತರ ಬಾರದ ಹಿನ್ನೆಲೆಯಲ್ಲಿ ಆಲ್ ಇಂಡಿಯಾ ಸರ್ವಿಸ್ ಆ್ಯಕ್ಟ್ 16(2)ನಡಿ ಸೇವೆಗೆ ಭಾಸ್ಕರ್ ರಾವ್ ವಿದಾಯ ಹೇಳಿದ್ದಾರೆ.

ಇನ್ನೂ ಹೀಗೆ ಅಧಿಕಾರಿ ಸ್ವಯಂ ನಿವೃತ್ತಿ ಪಡೆಯಲು ಇರಬೇಕಾದ ಅರ್ಹತೆಗಳೇನು ಅನ್ನೋದನ್ನು ಗಮನಿಸೋದಾದರೇ, AIS ಆ್ಯಕ್ಟ್ 16(2) ಪ್ರಕಾರ ಸಂಬಂಧಿಸಿದ ಅಧಿಕಾರಿ 50 ವರ್ಷ ವಯಸ್ಸು ದಾಟಿರಬೇಕು. 20 ವರ್ಷ ಸೇವೆ ಪೂರ್ಣಗೊಳಿಸಿರಬೇಕು‌. ಇಲ್ಲ ನಿವೃತ್ತಿಗೆ ಮನವಿ ಸಲ್ಲಿಸುವಾಗ ಅಮಾನತ್ತಿನಲ್ಲಿ ಇರಬಾರದು. AIS ಆ್ಯಕ್ಟ್ 16(2)ನಡಿ ನಿವೃತ್ತಿಗೆ ಅರ್ಹರಿರುವ ಕಾರಣ ಅಧಿಕೃತವಾಗಿ ಭಾಸ್ಕರ್ ರಾವ್ ವಿದಾಯ ಹೇಳಿದ್ದಾರೆ. ಈ ಹಿಂದೆಯೇ ಭಾಸ್ಕರ ರಾವ್ (Bhaskar Rao) ಖಾಕಿ ತೊರೆದು ಖಾದಿ ತೊಟ್ಟು ರಾಜಕೀಯಕ್ಕೆ ಬರ್ತಾರೆ ಎಂಬ ಸುದ್ದಿ ಕೇಳಿಬಂದಿತ್ತು.

ಬೆಂಗಳೂರಿನಲ್ಲೇ ಹುಟ್ಟಿ ಬೆಳೆದಿರೋ ಭಾಸ್ಕರ್ ರಾವ್ ಬೆಂಗಳೂರು ಸೌತ್ ನಿಂದ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿತಾರೇ ಎನ್ನಲಾಗಿತ್ತು. ಈಗ ಈ ಎಲ್ಲ ವಿಚಾರಗಳಿಗೆ ಮತ್ತೆ ಜೀವ ಬಂದಿದೆ. 2023 ರ ವಿಧಾನಸಭಾ ಚುನಾವಣೆಯಲ್ಲೇ ಭಾಸ್ಕರ್ ರಾವ್ ಕಣಕ್ಕಿಳಿಯಲಿದ್ದು ಇದಕ್ಕಾಗಿಯೇ ಭಾಸ್ಕರ್ ರಾವ್ (Bhaskar Rao) ಈಗಾಗಲೇ ಅಧಿಕಾರ ಬಿಟ್ಟು ಹೊರಬಂದಿದ್ದಾರೆ. ಸದ್ಯದಲ್ಲೇ ಭಾಸ್ಕರ್ ರಾವ್ ಬಿಜೆಪಿ ಸೇರ್ಪಡೆಗೊಳ್ಳಲಿದ್ದಾರೆ ಎನ್ನಲಾಗ್ತಿದೆ.

ಇದನ್ನೂ ಓದಿ : ನಿಯಮ ಮೀರಿ ಭೂಮಿ ಮಂಜೂರು : ಬಿಜೆಪಿಯನ್ನು ಇಕ್ಕಟ್ಟಿಗೆ ಸಿಲುಕಿಸಿದ ಬಿ.ಎಸ್.ಯಡಿಯೂರಪ್ಪ

ಇದನ್ನೂ ಓದಿ : ಸ್ವಾಮೀಜಿಗಳು ತಲೆಗೆ ಬಟ್ಟೆ ಹಾಕಲ್ವಾ, ಹೊಸ ವಿವಾದಕ್ಕೆ ನಾಂದಿ ಹಾಡಿದ ಸಿದ್ಧರಾಮಯ್ಯ

IPS Bhaskar Rao Resign Post And Joining Politics

Comments are closed.