Delhi Model Travel Rules : ಬೆಂಗಳೂರಿನಲ್ಲಿ ಹೆಚ್ಚುತ್ತಿದೆ ವಾಹನಗಳ ಸಂಖ್ಯೆ : ಜಾರಿಯಾಗುತ್ತಾ ದೆಹಲಿ ಮಾದರಿ ಸಂಚಾರಿ ರೂಲ್ಸ್

ಬೆಂಗಳೂರು : ರಾಜ್ಯ ರಾಜಧಾನಿ ಬೆಂಗಳೂರು ಪ್ರತಿನಿತ್ಯ ತನ್ನ ವ್ಯಾಪ್ತಿ ವಿಸ್ತರಿಸಿಕೊಳ್ಳುತ್ತಲೇ ಸಾಗುತ್ತಿದೆ. ಐಟಿಸಿಟಿ, ಸಿಲಿಕಾನ್ ವ್ಯಾಲಿ ಎಂದೆಲ್ಲ ಪ್ರಸಿದ್ಧಿಯಾಗಿರೋ ಬೆಂಗಳೂರಿನಲ್ಲಿ ಈಗಾಗಲೇ ಸಮಸ್ಯೆಗಳು ಬೇಕಷ್ಟಿವೆ. ಇದರ ಮಧ್ಯೆ ಏರುತ್ತಿರುವ ಜನಸಂಖ್ಯೆ ಜೊತೆ ಏರುತ್ತಿರುವ ವಾಹನಗಳ ಸಂಖ್ಯೆಯೂ ಸಿಲಿಕಾನ್ ಸಿಟಿಗೆ ತಲೆನೋವಾಗಿ ಪರಿಣಮಿಸುವ ಸಾಧ್ಯತೆ ಇದೆ. ಹೀಗಾಗಿ ದೆಹಲಿ ಮಾದರಿ ಸಂಚಾರಿ ನಿಯಮ ( Delhi Model Travel Rules) ಜಾರಿಯಾಗುವ ಸಾಧ್ಯತೆಯಿದೆ.

ಹೌದು ಬರ ಬರುತ್ತ ಹೆಚ್ಚುತ್ತಲೇ ಇರುವ ವಾಹನ ಸಂಖ್ಯೆ ಮುಂದೇ ಸಿಲಿಕಾನ್ ಸಿಟಿಗೆ ಗಂಡಾಂತರ ತಂದೊಡ್ಡಲಿದೆ ಎಂಬ ಆತಂಕ ಮೂಡಿಸುತ್ತಿದೆ. ಈಗಾಗಲೇ ಬೆಂಗಳೂರಿನ ರಸ್ತೆಗಳು ಗುಂಡಿಗಳಿಂದ ತುಂಬಿ ಹೋಗಿದ್ದರೇ ಸ್ವಚ್ಛವಾಯು ಎಂಬುದು ಕನಸಾಗಿ ವಾಯುಮಾಲಿನ್ಯ ಎಲ್ಲೆ ಮೀರಿದೆ. ಇದರ ಬೆನ್ನಲ್ಲೇ ಈಗ ಬಹಿರಂಗವಾಗ್ತಿರೋ ಅಂಕಿಅಂಶಗಳ ಪ್ರಕಾರ ನಗರದಲ್ಲಿ ವಾಹನಗಳ ಸಂಖ್ಯೆ ಕೋಟಿ ಸಮೀಪಿಸುತ್ತಿದೆ.

ಬಿಬಿಎಂಪಿ ವ್ಯಾಪ್ತಿಯಲ್ಲಿ 1,940 km ನಷ್ಟು ಉದ್ದ ಆರ್ಟಿರಿಯಲ್ ಹಾಗೂ ಸಬ್ ಆರ್ಟಿರಿಯಲ್ ರಸ್ತೆಗಳಿವೆ. ಈ ರಸ್ತೆಗಳು ಹೆಚ್ಚು ಕಮ್ಮಿ 60 ಲಕ್ಷ ವಾಹನಗಳನ್ನು ಮಾತ್ರ ಕೆಪಾಸಿಟಿ ಮಾತ್ರ ಹೊಂದಿದೆ. ಆದರೆ ಸದ್ಯಕ್ಕೆ ನಗರದಲ್ಲಿ ಲೆಕ್ಕದ ಪ್ರಕಾರ 1 ಕೋಟಿಗೂ ಅಧಿಕ ವಾಹನಗಳಿವೆ. ಇದರಿಂದ ರಸ್ತೆ ಗುಣಮಟ್ಟಕ್ಕೆ ಹೊಡೆತ ಬೀಳಲಿದ್ದು ಜೊತೆಗೆ ಮಿತಿ ಮೀರಿದ ವಾಹನಗಳಿಂದ ವಾಯು ಮಾಲಿನ್ಯ ಕೂಡ ಹೆಚ್ಚಲಿದೆ. ಇನ್ನೂ 2022 ರ ಮೇ ತಿಂಗಳ ವರೆಗೆಗಿನ ವಾಹನಗಳ ನೋಂದಣಿ ಅಂಕಿ ಅಂಶವನ್ನು ಗಮನಿಸೋದಾದರೇ ನಗರದಲ್ಲಿ

ದ್ವಿಚಕ್ರ ವಾಹನಗಳು : 68,72,763
ನಾಲ್ಕು ಚಕ್ರ ವಾಹನ : 21,74,830
ಟ್ರಕ್, ಲಾರಿಗಳ ಸಂಖ್ಯೆ : 1,15,000
ಟ್ಯಾಕ್ಸಿ, ಆಟೋ ಗಳ ಸಂಖ್ಯೆ : 3,50,000 ಲಕ್ಷ
ಇತರೆ ವಾಹನಗಳು : 8,08,990 ಗಳಿದ್ದು, ಸದ್ಯ ನಗರದಲ್ಲಿ ಓಡಾಡುತ್ತಿರುವ ಒಟ್ಟು ವಾಹನಗಳ ಸಂಖ್ಯೆ 1,03,21,583.

ಇದರಿಂದ ನಗರದಲ್ಲಿ ವಾಹನಗಳ ಒತ್ತಡ ಹೆಚ್ಚಿದಂತಾಗಿದ್ದು, ಉದ್ಯೋಗಿಗಳು, ವಿದ್ಯಾರ್ಥಿಗಳು ಸೇರಿದಂತೆ ಎಲ್ಲರೂ ಓಡಾಟಕ್ಕಾಗಿ ಸ್ವಂತ ವಾಹನವನ್ನೇ ಬಳಸುತ್ತಿರೋದು ಈ ಏರಿಕೆಗೆ ಕಾರಣವಾಗಿದೆ ಎಂದು ವಿಶ್ಲೇಷಿಸಲಾಗುತ್ತಿದೆ. ಇದರೊಂದಿಗೆ ಕೊರೋನಾದಂತಹ ಸಾಂಕ್ರಾಮಿಕ ರೋಗ ಹೊತ್ತಿನಲ್ಲಿ ಜನರು ಸಂಪೂರ್ಣವಾಗಿ ಸಾರ್ವಜನಿಕ ವಾಹನ ಬಳಕೆಯನ್ನು ತ್ಯಜಿಸಿದ್ದು, ಈಗ ಕೊರೋನಾ ಪ್ರಭಾವ ಕಡಿಮೆಯಾಗಿದ್ದರೂ ಸ್ವಂತ ವಾಹನ ಬಿಟ್ಟು ಸಾರ್ವಜನಿಕ ವಾಹನ ಬಳಕೆಗೆ ಮನಸ್ಸು ಮಾಡುತ್ತಿಲ್ಲ. ಈ ಎಲ್ಲ ಕಾರಣದಿಂದ ನಗರದಲ್ಲಿ ವಾಹನ ಸಂಖ್ಯೆ ಏರಿಕೆಯಾಗಿದ್ದು, ಸದ್ಯದಲ್ಲೇ ದೆಹಲಿ ಮಾದರಿಯಲ್ಲಿ ಸಮ ಮತ್ತು ಬೆಸ ಸಂಖ್ಯೆಯ ವಾಹನ ವ್ಯವಸ್ಥೆ ಜಾರಿಗೆ ಬಂದರೂ ಅಚ್ಚರಿಯೇನಿಲ್ಲ ಅಂತಿದ್ದಾರೆ ತಜ್ಞರು.

ಇದನ್ನೂ ಓದಿ : ಬಿಬಿಎಂಪಿಯ 51 ಆಸ್ಪತ್ರೆಗಳು ಆರೋಗ್ಯ ಇಲಾಖೆ ಸುಪರ್ದಿಗೆ

ಇದನ್ನೂ ಓದಿ : ವಿದ್ಯುತ್ ಮೀಟರ್ ಭದ್ರತಾ ಶುಲ್ಕ ಹೆಚ್ಚಳ : ಬೆಸ್ಕಾಂ ನಿರ್ಧಾರಕ್ಕೆ ಬೆಂಗಳೂರಿಗರ ಆಕ್ರೋಶ

Increasing number of vehicles in Bangalore, Implementing Delhi Model Travel Rules

Comments are closed.