IT Ride: ತೆರಿಗೆ ವಂಚನೆ ಆರೋಪದಲ್ಲಿ ಬೆಂಗಳೂರಿನ ಹಲವೆಡೆ ಐಟಿ ದಾಳಿ

ಬೆಂಗಳೂರು: (IT Ride) ತೆರಿಗೆ ವಂಚನೆ ಆರೋಪದಲ್ಲಿ ಬೆಂಗಳೂರಿನ ಹಲವೆಡೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಶುಕ್ರವಾರ ಬೆಳಿಗ್ಗೆ ದಾಳಿ ನಡೆದಿದ್ದಾರೆ. ಹಲವು ಕಾರ್ಪೊರೇಟ್​​ ಕಂಪನಿಗಳ ಕಚೇರಿಗಳಿಗೆ ದಾಳಿ ನಡೆಸಿರುವ ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ.

ಇಂದು ನಗರದ ಮಣಿಪಾಲ್ ಸಂಸ್ಥೆಗಳ ಮೇಲೆ ಏಕಕಾಲಕ್ಕೆ ಐಟಿ ಅಧಿಕಾರಿಗಳು ದಾಳಿ (IT Ride) ನಡೆಸಿದ್ದಾರೆ. ನಾಲ್ಕು ಇನ್ನೋವಾ ವಾಹನದಲ್ಲಿ ಆಗಮಿಸಿರುವ ಅಧಿಕಾರಿಗಳು ಹೈಗ್ರೌಂಡ್ಸ್ ಪೊಲೀಸ್ ಠಾಣೆ ಬಳಿ ಇರುವ ಮಣಿಪಾಲ್ ಆಸ್ಪತ್ರೆಗೆ ಬೆಳಗಿನ ಜಾವ 6 ಗಂಟೆಗೆ ಐಟಿಅಧಿಕಾರಿಗಳು ದಾಳಿ ನಡೆಸಿದ್ದಾರೆ. ದಾಳಿ ನಡೆಸಿದ ಅಧಿಕಾರಿಗಳು ದಾಖಲೆಗಳನ್ನು ಪರಿಶೀಲನೆ ನಡೆಸುತ್ತಿದ್ದಾರೆ. 200 ಕ್ಕೂ ಹೆಚ್ಚು ಐಟಿ ಅಧಿಕಾರಿಗಳಿಂದ ಒಟ್ಟು 20 ಕಡೆಗಳಲ್ಲಿ ದಾಳಿ ನಡೆದಿದ್ದು, ದಾಖಲೆಗಳನ್ನು ಪರಿಶೀಲಿಸುತ್ತಿದ್ದಾರೆ. ಓಲ್ಡ್ ಏರ್‌ ಪೋರ್ಟ್ ರೋಡ್, ಕನ್ನಿಂಗ್ ಹ್ಯಾಮ್ ರೋಡ್, ಯಶವಂತಪುರ, ಏರ್‌ ಪೋರ್ಟ್ ರೋಡ್ ಸೇರಿದಂತೆ 20 ಕಡೆ ದಾಳಿ ನಡೆದಿದೆ. ಐಟಿ ಅಧಿಕಾರಿಗಳು ಬೆಳಗ್ಗೆಯಿಂದಲೇ ಕಾರ್ಯಾಚರಣೆ ಆರಂಭಿದ್ದಾರೆ.

ಹಲವು ಕಾರ್ಪೊರೇಟ್​​ ಕಂಪನಿಗಳ ಕಚೇರಿಗಳಿಗೆ ಐಟಿ ಅದಿಕಾರಿಗಳು ದಾಳಿ ನಡೆಸಿದ್ದು, ಕಂಪನಿಗಳ ಮಾಲೀಕರ ಮನೆಗಳ ಮೇಲೂ ದಾಳಿ ನಡೆಸಿ ಪರಿಶೀಲನೆ ನಡೆಸುತ್ತಿದ್ದಾರೆ. ಬೆಂಗಳೂರಿನ ಸಂಜಯನಗರ, ಹೆಬ್ಬಾಳ, ಕೊಡಿಗೇಹಳ್ಳಿ, ಬಿಡದಿ, ಚಿಕ್ಕಬಳ್ಳಾಪುರ, ರಾಮನಗರದ ಮನೆಗಳಲ್ಲಿ ದಾಖಲೆ ಪರಿಶೀಲನೆ ನಡೆಯುತ್ತಿದೆ. ಕೊಡಿಗೇಹಳ್ಳಿಯ ಬ್ರಿಗೇಡ್ ಓಪಸ್ ನಲ್ಲಿರುವ ಕಂಪನಿಯೊಂದರ ಮೇಲೂ ದಾಳಿ ನಡೆದಿದೆ.

ಕರ್ನಾಟಕದ ಹಲವೆಡೆ ಕೆಲವು ದಿನಗಳ ಹಿಂದೆಯೂ ಸರಣಿ ಐಟಿ ದಾಳಿ ನಡೆದಿತ್ತು. ಚಿಕ್ಕಮಗಳೂರಿನ ಹೂವಿನ ಮಾರ್ಕೆಟ್ ರಸ್ತೆಯಲ್ಲಿರುವ ಕಾಂಗ್ರೆಸ್ ನಾಯಕಿ ಗಾಯತ್ರಿ ಶಾಂತೇಗೌಡ ಅವರ ಮನೆ ಮೇಲೆ ನವೆಂಬರ್ 17ರಂದು ಐಟಿ ದಾಳಿ ನಡೆದಿತ್ತು. ಗಾಯತ್ರಿ ಅವರ ಪತಿ ಶಾಂತೇಗೌಡ ಮಾಲೀಕತ್ವದ ಕ್ರಷರ್ ಮೇಲೆಯೂ ದಾಳಿ ನಡೆಸಿದ್ದ ಅಧಿಕಾರಿಗಳು ಪರಿಶೀಲನೆ ನಡೆಸಿದ್ದರು. ಅದಕ್ಕೂ ಕೆಲವು ದಿನಗಳ ಮುನ್ನ ಪೌರಾಡಳಿತ ಸಚಿವ ಎಂ.ಟಿ.ಬಿ.ನಾಗರಾಜ್ ಬಾಮೈದನ ನಿವಾಸದ ಮೇಲೆಯೂ ಅಧಿಕಾರಿಗಳು ದಾಳಿ ನಡೆಸಿ ಶೋಧ ಕೈಗೊಂಡಿದ್ದರು.

ಇದನ್ನೂ ಓದಿ : Metro ticket booking: ಇನ್ಮುಂದೆ ಪೇಟಿಎಂ, ಯಾತ್ರಾ ಆಪ್ ಗಳಲ್ಲೂ ಮೆಟ್ರೋ ಟಿಕೆಟ್ ಲಭ್ಯ; ಬಳಸುವ ವಿಧಾನ ಹೇಗೆ..?

(IT Ride) Income Tax Department officials raided many places in Bangalore on Friday morning on charges of tax evasion. The officials who have raided the offices of many corporate companies are investigating.

Comments are closed.