K.Satyanarayana: ಹಿರಿಯ ಪತ್ರಕರ್ತ ಕೆ.ಸತ್ಯನಾರಾಯಣ ವಿಧಿವಶ

ಬೆಂಗಳೂರು: (K.Satyanarayana) ರಾಜ್ಯದ ಹಿರಿಯ ಪತ್ರಕರ್ತರಾದ ಕೆ. ಸತ್ಯನಾರಾಯಣ ಅವರು ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದು, ಭಾನುವಾರ ತಮ್ಮ ನಿವಾಸದಲ್ಲೇ ನಿಧನ ಹೊಂದಿದ್ದಾರೆ. ಕನ್ನಡಪ್ರಭ ಪತ್ರಿಕೆಯ ಸಂಪಾದಕರಾಗಿ ಸೇವೆ ಸಲ್ಲಿಸಿದ್ದು, ಜಯನಗರದ ಎಲ್‌ ಐ ಸಿ ಕಾಲೋನಿಯ ತಮ್ಮ ನಿವಾಸದಲ್ಲಿ ಮೃತಪಟ್ಟಿದ್ದಾರೆ.

ಪತ್ರಕರ್ತರ ವಲಯದಲ್ಲಿ ಕೆ. ಸತ್ಯನಾರಾಯಣ (K.Satyanarayana) ಅವರು ಕೆ. ಸತ್ಯ ಎಂದೇ ಚಿರಪರಿಚಿತರಾಗಿದ್ದರು. ಅಲ್ಲದೇ ಕನ್ನಡಪ್ರಭ ಪತ್ರಿಕೆಯ ಸಂಪಾದಕರಾಗಿ ಸೇವೆ ಸಲ್ಲಿಸಿದ್ದಾರೆ. ವ್ಯಕ್ತಿ ವಿಚಾರ, ಸಮಕಾಲೀನ ರಾಜಕೀಯ ವಿಶ್ಲೇಷಣೆ, ಷೇರುಪೇಟೆ ಸಮಾಚಾರ ಅಂಕಣದ ಮೂಲಕ ನಾಡಿನ ಜನರ ಗಮನ ಸೆಳೆದಿದ್ದರು. ಅಲ್ಲದೇ ಪ್ರಸ್ತುತ ಟಿವಿ ಮತ್ತು ಮುದ್ರಣ ಮಾದ್ಯಮದಲ್ಲಿ ಹೆಸರು ಪಡೆದ ಅದೆಷ್ಟೋ ಪತ್ರಕರ್ತರಿಗೆ ಗುರುಗಳಾಗಿ ಜ್ಞಾನಾರ್ಜನೆ ಮಾಡಿದ್ದಾರೆ.

ತಾಯ್ನಡು ಪತ್ರಿಕೆಯ ಮೂಲಕ ಪತ್ರಿಕೋದ್ಯಮಕ್ಕೆ ಕಾಲಿಟ್ಟಿದ್ದ ಇವರು ಕನ್ನಡಪ್ರಭ ಪತ್ರಿಕೆಯಲ್ಲಿ ಮೂರು ದಶಕಗಳಿಗೂ ಹೆಚ್ಚಿನ ಕಾಲ ಕಾರ್ಯ ನಿರ್ವಹಿಸಿದ್ದರು. ಇಳಿವಯಸ್ಸಿನಲ್ಲೂ ಅಂಕಣ ಬರೆಯುತ್ತಿದ್ದ ಇವರು(K.Satyanarayana) ತಮ್ಮೊಳಗಿನ ಪತ್ರಕರ್ತರನ್ನು ಜಾಗೃತವಾಗಿಟ್ಟುಕೊಂಡಿದ್ದರು. ಕನ್ನಡ ಪ್ರಭದಲ್ಲಿ ಅವರ ಜನಪ್ರಿಯ ಅಂಕಣಗಳಾದ ನಗರಪ್ರದಕ್ಷಿಣೆ ಮತ್ತು ವ್ಯಕ್ತಿವಿಚಾರ ಮೂಲಕ ಸಾಕಷ್ಟು ಗಮನ ಮತ್ತು ಜನಪ್ರಿಯತೆಯನ್ನು ಗಳಿಸಿದರು. ಅವರು ಹಣಕಾಸು, ವ್ಯವಹಾರ ಮತ್ತು ಬಜೆಟ್‌ ವರದಿಗಾರಿಕೆಯಲ್ಲಿ ಪರಿಣಿತರಾದ ಇವರು ಕನ್ನಡದ ಜೊತೆಗೆ ಇಂಗ್ಲಿಷ್‌ ನಲ್ಲಿ ಸರಳ ಶೈಲಿಯಲ್ಲಿ ಬರೆಯುತ್ತಿದ್ದರು.

ಇದನ್ನೂ ಓದಿ : Triple riding murder: ಪ್ರಿಯಕರನ ಕತ್ತು ಹಿಸುಕಿ ಕೊಲೆ: ಹೆಣದ ಜೊತೆ ದಂಪತಿ ತ್ರಿಬಲ್‌ ರೈಡ್

ಇದನ್ನೂ ಓದಿ : E-mail Bomb threat: ಬೆಂಗಳೂರಿನ ಖಾಸಗಿ ಶಾಲೆಯೊಂದಕ್ಕೆ‌ ಹುಸಿ ಬಾಂಬ್ ಬೆದರಿಕೆ: ಸುರಕ್ಷಿತ ಸ್ಥಳಕ್ಕೆ ವಿದ್ಯಾರ್ಥಿಗಳು ಶಿಫ್ಟ್

ಇದನ್ನೂ ಓದಿ : Quarantine cancels: ವಿದೇಶಿ ಪ್ರಯಾಣಿಕರಿಗೆ ಕ್ವಾರಂಟೈನ್ ಕಡ್ಡಾಯ ಆದೇಶ ಹಿಂಪಡೆದ ಆರೋಗ್ಯ ಇಲಾಖೆ

ಇವರಿಗೆ ಖಾದ್ರಿ ಶಾಮಣ್ಣ ಸೇರಿದಂತೆ ಕೆಲವು ಪ್ರಶಸ್ತಿಗಳು ಕೂಡ ಲಭಿಸಿವೆ. ಇವರಿಗೆ 90 ವರ್ಷವಾಗಿದ್ದು, ವಯೋಸಹಜ ಕಾಯಿಲೆಯಿಂದ ನಿಧನರಾಗಿದ್ದಾರೆ. ಇದೀಗ ಅವರ ಅಂತಿಮ ಸಂಸ್ಕಾರಕ್ಕೆ ಅವರ ನಿವಾಸದಲ್ಲಿ ಸಕಲ ಸಿದ್ದತೆಗಳನ್ನು ಮಾಡಲಾಗಿದೆ.

Senior journalist of the state K. Satyanarayan passed away at his residence on Sunday after suffering from age-related ailments.

Comments are closed.