ಭೂಗಳ್ಳರಿಗೆ ಬ್ರೇಕ್ ಹಾಕೋಕೆ ಸಜ್ಜಾದ ಸಿದ್ದರಾಮಯ್ಯ ಸರ್ಕಾರ : ಒತ್ತುವರಿ ಮಾಹಿತಿಗೆ ಸಂಗ್ರಹಕ್ಕೆ ಹೊಸ ಆ್ಯಪ್

ಸರ್ಕಾರಿ ಜಾಗ ಕಬಳಿಸಿದವರ  (Land Encrochments) ವಿರುದ್ಧ ಸಿದ್ದು ಸರ್ಕಾರದ ಹದ್ದಿನಕಣ್ಣಿಟ್ಟಿದ್ದು ಭೂಮಿ ಕಳ್ಳರ ಪತ್ತೆಗೆ ಸಿಎಂ ಸಿದ್ದರಾಮಯ್ಯ (CM Siddaramaiah ) ನೇತೃತ್ವದ ಕಾಂಗ್ರೆಸ್ ಸರ್ಕಾರ‌ ಸರಕಾರ ರೆಡಿ ಮಾಡುತ್ತಿದೆ, ವಿಶೇಷ ಆಪ್ ( Special Land Encrochments App) ಸಿದ್ಧಪಡಿಸಲು ಮುಂದಾಗಿದೆ.

ಬೆಂಗಳೂರು : ರಾಜ್ಯ ಸರ್ಕಾರದ ಒಡೆತನಕ್ಕೆ ಸೇರಿದ ನೂರಾರು, ಸಾವಿರಾರು ಎಕರೆ ಜಾಗಗಳು ಅಧಿಕಾರಿಗಳ ನಿರ್ಲಕ್ಷ್ಯದಿಂದ ಭೂಗಳ್ಳರ ಪಾಲಾಗಿದೆ. ಹೀಗಾಗಿ ಸರ್ಕಾರಿ ಜಾಗ ಕಬಳಿಸಿದವರ  (Land Encrochments) ವಿರುದ್ಧ ಸಿದ್ದು ಸರ್ಕಾರದ ಹದ್ದಿನಕಣ್ಣಿಟ್ಟಿದ್ದು ಭೂಮಿ ಕಳ್ಳರ ಪತ್ತೆಗೆ ಸಿಎಂ ಸಿದ್ದರಾಮಯ್ಯ (CM Siddaramaiah ) ನೇತೃತ್ವದ ಕಾಂಗ್ರೆಸ್ ಸರ್ಕಾರ‌ ಸರಕಾರ ರೆಡಿ ಮಾಡುತ್ತಿದೆ, ವಿಶೇಷ ಆಪ್ ( Special Land Encrochments App) ಸಿದ್ಧಪಡಿಸಲು ಮುಂದಾಗಿದೆ.

ಈಗಾಗಲೇ ರಾಜ್ಯದಲ್ಲಿ ಕಂದಾಯ ಇಲಾಖೆ ಸಾಕಷ್ಟು ಅಪ್ ಗ್ರೇಡ್ ಆಗಿದೆ. ದಾಖಲೆಗಳ ಕಂಪ್ಯೂಟರೀಕರಣದಿಂದ ಜನರಿಗೆ ಸಾಕಷ್ಟು ಸಹಾಯವಾಗಿದೆ‌. ಆದರೂ ಇನ್ನೂ ಸಾವಿರಾರು ಎಕರೆ ಭೂಗಳ್ಳರ ಪಾಲಾಗೋದು ತಪ್ಪಿಲ್ಲ. ಯಾಕೆಂದರೆ ಸ್ಥಳೀಯವಾಗಿ ಅಧಿಕಾರಿಗಳು ಕಣ್ಮುಚ್ಚಿಕೊರೋದಲ್ಲದೇ ಕದ್ದುಮುಚ್ಚಿ ಭೂಕಬಳಿಕೆಗೆ ಸಪೋರ್ಟ್ ಕೂಡ ಮಾಡ್ತಿದ್ದಾರೆ.

Karnataka CM Siddaramaiah government ready to crack down on land grabbers New app for encroachment information
Image Credit To Original Source

ಆದರೇ ಈಗ ಈ ಕಳ್ಳಾಟಗಳಿಗೆ ಬ್ರೇಕರ ಬೀಳಲಿದೆ. ಇದಕ್ಕಾಗಿಯೇ ಕಂದಾಯ ಇಲಾಖೆ ವಿಶೇಷ ಆ್ಯಪ್ ಸಿದ್ಧಪಡಿಸಲು ಮುಂದಾಗಿದೆ. ಈ ಅ್ಯಪ್ ಗಳು ಕೇವಲ ಸರಕಾರಿ ಜಾಗಗಳ ಮಾಹಿತಿಯನ್ನು ಮಾತ್ರ ಸಂಗ್ರಹಿಸಲಿವೆ. ಈ ಆ್ಯಪ್ ನ್ನು ಅಧಿಕಾರಿಗಳ ಸಹಾಯದಿಂದ ಬಳಸಿಕೊಳ್ಳಲು ಸರ್ಕಾರ ಸಿದ್ಧತೆ ನಡೆಸಿದೆ.

ಇದನ್ನೂ ಓದಿ : ಪಡಿತರ ಚೀಟಿ ತಿದ್ದುಪಡಿಗೆ ಇನ್ಮುಂದೆ ಅವಕಾಶವೇ ಇಲ್ಲ ! ಜಾರಿಯಾಯ್ತು ಸರಕಾರದ ಹೊಸ ಆದೇಶ

ಗ್ರಾಮ ಮಟ್ಟದಿಂದ ಸರ್ಕಾರದ ಜಾಗ ಗುರುತಿಸುವ ಪ್ರತಿಕ್ರಿಯೆ ಆರಂಭವಾಗಲಿದ್ದು , ಗ್ರಾಮ ಮಟ್ಟದಲ್ಲಿ ಈ ಹೊಣೆಗಾರಿಕೆಯನ್ನು ಪಿಡಿಓಗಳಿಗೆ ನೀಡಲಾಗಿದೆ.  ಪಿಡಿಓಗಳು ಗ್ರಾಮ ಮಟ್ಟದಲ್ಲಿ ಸರ್ಕಾರದ ಜಾಗಗಳು ಎಲ್ಲಿವೆ ಎಂಬುದನ್ನು ಪತ್ತೆ ಹಚ್ಚಬೇಕು‌ ಅಷ್ಟೇ ಅಲ್ಲ ಮುಖ್ಯವಾಗಿ ಸರ್ಕಾರದ ಜಾಗಗಳು ಎಲ್ಲೆಲ್ಲಿ ಒತ್ತುವರಿಯಾಗಿದೆ ಎಂಬುದನ್ನು ಗುರುತಿಸಿ ಅಲ್ಲಲ್ಲಿ ಹೋಗಿ ಆ್ಯಪ್ ಗಳ ಮಾಹಿತಿಯನ್ನು ಸಂಗ್ರಹಿಸಿ ಅದನ್ನು ಈ ಅ್ಯಪ್ ನಲ್ಲಿ ಅಪ್ಲೋಡ್ ಮಾಡಬೇಕು.

ಸ್ಥಳಕ್ಕೆ ಹೋಗಿ ಸರ್ಕಾರಿ ಜಾಗ ಒತ್ತುವರಿ ಆಗಿದ್ಯಾ, ಖಾಲಿ ಇದ್ಯಾ ಅಂತ ಲೋಕೇಶನ್ ಸಮೇತ ಮಾಹಿತಿ ಅಪ್ ಲೋಡ್ ಮಾಡಬೇಕು. ಒಂದೊಮ್ಮೆ ಒತ್ತುವರಿ ಆಗಿದ್ರೆ, ಕಂದಾಯ ಇಲಾಖೆಯ ವಿಶೇಷ ಅಧಿಕಾರಿಗಳ ತಂಡ ಜಾಗವನ್ನ ವಶಕ್ಕೆ ಪಡೆಯುತ್ತೆ.ಒತ್ತುವರಿದಾರರ ವಿರುದ್ಧ ಕೇಸ್ ಕೂಡ ದಾಖಲು ಮಾಡಲಾಗುತ್ತೆ.

ಇದನ್ನೂ ಓದಿ : Chaitra Kundapura Case : ಚೈತ್ರಾ ಕುಂದಾಪುರ ವಂಚನೆ ಪ್ರಕರಣ : ಅಭಿನವ ಹಾಲಶ್ರೀ ಸ್ವಾಮೀಜಿ ಅರೆಸ್ಟ್‌

ಈ ವಿಚಾರವನ್ನು ಸ್ವತಃ ಕಂದಾಯ ಇಲಾಖೆ ಸಚಿವ ಕೃಷ್ಣ ಭೈರೇಗೌಡರು ಮಾಹಿತಿ ಸಮೇತ ಮಾಧ್ಯಮಗಳಿಗೆ ನೀಡಿದ್ದಾರೆ. ರಾಜ್ಯದಲ್ಲಿ ಹಲವೆಡೆ ಸರ್ಕಾರಿ ಭೂಮಿ ಅತಿಕ್ರಮಣವಾಗಿದೆ. ಹೀಗಾಗಿ ಸರ್ಕಾರಿ‌ ಕಚೇರಿಗಳು ಖಾಸಗಿ ಕಟ್ಟಡದಲ್ಲಿ ನಡೆಯುವಂತ ಸ್ಥಿತಿ ಇದೆ‌. ಇದರಿಂದ ಸರ್ಕಾರದ ಆದಾಯದ ಮೇಲೂ ಹೊಡೆತ ಬೀಳುತ್ತಿದೆ.

Karnataka CM Siddaramaiah government ready to crack down on land grabbers New app for encroachment information
Image Credit To Original Source

ಹೀಗಾಗಿ ಒತ್ತುವರಿ ಗುರುತಿಸುವ ಪ್ರಕ್ರಿಯೆಗೆ ವೇಗ ನೀಡಿದ್ದೇವೆ. ಎಂಥಹ ಪ್ರಭಾವಿ ವ್ಯಕ್ತಿಗಳಿಂದ ಒತ್ತುವರಿಯಾಗಿದ್ದರೂ ಒತ್ತುವರಿ ತೆರವಿಗೆ ಕ್ರಮ ಜರುಗಿಸಲಾಗುತ್ತದೆ ಎಂದು ಕೃಷ್ಣಭೈರೇಗೌಡರು ಭರವಸೆ ನೀಡಿದ್ದಾರೆ.

ಇದನ್ನೂ ಓದಿ : 16 ದಿನಕ್ಕೆ 1700 ಡೆಂಗ್ಯೂ ಪ್ರಕರಣ : ಬೆಂಗಳೂರಿನಲ್ಲಿ ಡೆಂಗ್ಯೂ ಜ್ವರದ ಆರ್ಭಟ

ಆದರೆ ಈ ಅ್ಯಪ್ ಯಾವ ರೀತಿ ಕಾರ್ಯನಿರ್ವಹಿಸಲಿದೆ? ಇದರಲ್ಲಿ ತಪ್ಪು ಮಾಹಿತಿ ದಾಖಲಾದರೇ ಸಾರ್ವಜನಿಕರಿಗೆ ಆಕ್ಷೇಪಣೆ ದಾಖಲಿಸಲು ಅವಕಾಶ ಇದ್ಯಾ ? ಒಂದೊಮ್ಮೆ ಪಿಡಿಓಗಳು ಸೂಕ್ತ ಮಾಹಿತಿ ಅಪ್ಲೋಡ್ ಮಾಡದೇ ಇದ್ದರೇ, ಅಥವಾ ಪ್ರಭಾವಕ್ಕೆ ಒಳಗಾಗದರೇ ಪತ್ತೆ ಹಚ್ಚುವ ವ್ಯವಸ್ಥೆ ಹೇಗೆ ಎಂಬುದರ ಬಗ್ಗೆ ಯಾವುದೇ ಮಾಹಿತಿ ಇನ್ನೂ ಸಿಕ್ಕಿಲ್ಲ.

Karnataka CM Siddaramaiah government ready to crack down on land grabbers New app for encroachment information

Comments are closed.