New Guidelines for apartments : ಕೊರೋನಾ, ಓಮೈಕ್ರಾನ್ ಹಾಟ್ ಸ್ಪಾಟ್ : ಅಪಾರ್ಟ್ಮೆಂಟ್ ಗಳಿಗೆ ಪ್ರತ್ಯೇಕ ಮಾರ್ಗಸೂಚಿ

ಬೆಂಗಳೂರು : ನಗರದಲ್ಲಿ ದಿನದಿಂದ ದಿನಕ್ಕೆ ಕೊರೋನಾ ಪ್ರಕರಣಗಳು ಹೆಚ್ಚುತ್ತಲೇ ಇದ್ದು, ಬೆಂಗಳೂರಿನಲ್ಲಿ ಗುರುವಾರ ಒಂದೇ ದಿನ 18 ಸಾವಿರಕ್ಕೂ ಅಧಿಕ ಪ್ರಕರಣಗಳು ದಾಖಲಾಗಿವೆ. ಅದರಲ್ಲೂ ಅಪಾರ್ಟ್ಮೆಂಟ್ ಗಳು ಕೊರೋನಾ ಹಾಟ್ ಸ್ಪಾಟ್ ಗಳಾಗಿ ಬದಲಾಗಿದ್ದು ಪ್ರತಿನಿತ್ಯ ಅಪಾರ್ಟ್ಮೆಂಟ್ ಗಳಲ್ಲೇ ( New Guidelines for apartments) ಕೊರೋನಾ ಪ್ರಕರಣಗಳು ವರದಿ ಆಗಲು ಆರಂಭಿಸಿದೆ‌.

ಬೆಂಗಳೂರಿನ ಅಪಾರ್ಟ್ಮೆಂಟ್ ಹಾಗೂ ವಸತಿ ನಿಲಯಗಳು ಕೊರೋನಾ ಹಾಗೂ ಓಮೈಕ್ರಾನ್ ಹಾಟ್ ಸ್ಪಾಟ್ ಗಳಾಗಿ ಬದಲಾದ ಬೆನ್ನಲ್ಲೇ ಬಿಬಿಎಂಪಿ ಅಪಾರ್ಟ್ ಮೆಂಟ್ ಗಳಿಗಾಗಿ ವಿಶೇಷ ಮಾರ್ಗಸೂಚಿ ಬಿಡುಗಡೆ ಮಾಡಿದೆ. ಸರ್ಕಾರ ಬಿಡುಗಡೆ ಮಾಡಿದ ಮಾರ್ಗಸೂಚಿಯಲ್ಲಿ ಏನಿದೆ ಅನ್ನೋದನ್ನು ಗಮನಿಸೋದಾದರೇ,

  1. ನಗರದ ಎಲ್ಲಾ ಅಪಾರ್ಟ್‌ಮೆಂಟ್ ಗಳಲ್ಲಿ ಟೆಂಪ್ರೇಚರ್ ಚೆಕ್ ಮಾಡುವುದು ಕಡ್ಡಾಯ
  2. ಅಪಾರ್ಟ್‌ಮೆಂಟ್ ಗಳ ಕಾಮನ್ ಏರಿಯಾ ಅಗಾಗ್ಗೆ ಸ್ಯಾನಿಟೈಸ್ ಮಾಡಬೇಕು
  3. ಪಾರ್ಕ್ ಗಳಲ್ಲಿ ಓಡಾಡುವಾಗ CAB ಪಾಲನೆ
  4. ಲಸಿಕಾಕರಣ, ಟೆಸ್ಟಿಂಗ್ ಹಾಗೂ ಪಾಲಿಕೆ ಕೊಡುವ ಸೂಚನೆಗಳನ್ನು ನಿವಾಸಿಗಳಿಗೆ ತಿಳಿಸಲು ವ್ಯವಸ್ಥೆ ಮಾಡುವುದು.
  5. ಅಪಾರ್ಟ್‌ಮೆಂಟ್ ನ ಜಿಮ್, ಸ್ವಿಮ್ಮಿಂಗ್ ಪೂಲ್, ಕ್ರೀಡಾಂಗಣ ಬಂದ್ ಮಾಡುವುದು*
  6. ಅಪಾರ್ಟ್‌ಮೆಂಟ್ ನಲ್ಲಿರುವ ಮಕ್ಕಳ ಮೇಲೆ ಪೋಷಕರು ಹೆಚ್ಚು ನಿಗಾವಹಿಸಬೇಕು
  7. ಅಪಾರ್ಟ್‌ಮೆಂಟ್ ನಲ್ಲಿ ಕಾರ್ಯಕ್ರಮ ಹಮ್ಮಿಕೊಂಡರೆ 50 ಮಂದಿಗಷ್ಟೇ ಅವಕಾಶ*
  8. ಮನೆಗಳಲ್ಲಿನ ತ್ಯಾಜ್ಯಗಳನ್ನು ಶಿಸ್ತು ಬದ್ಧವಾಗಿ ವಿಲೇವಾರಿ ಮಾಡಬೇಕು*
  9. ಲಿಫ್ಟ್ ಗಳಲ್ಲಿನ ಬಟನ್ ಗಳನ್ನು ಬಳಕೆಗೆ ತಕ್ಕಂತೆ ಸ್ಯಾನಿಟೈಸ್ ಮಾಡಬೇಕು
  10. ಸತತವಾಗಿ ಹೊರಗಡೆ ಹೋಗಿ ಬರುವ ನಿವಾಸಿಗಳಿಗೆ ಆಗಾಗ್ಗೆ ಟೆಸ್ಟಿಂಗ್ ನಡೆಸಬೇಕು.
  11. ಫ್ಲಾಟ್ ಒಂದರಲ್ಲಿ ಮೂರಕ್ಕಿಂತ ಹೆಚ್ಚಿನ ಪ್ರಕರಣಗಳು ಪತ್ತೆಯಾದರೆ, ಇಡೀ ಮಹಡಿಯನ್ನು ಸೀಲ್ ಡೌನ್ ಮಾಡಬೇಕು
  12. ಒಂದು ಸೋಂಕು ಪತ್ತೆಯಾದರೆ ಸೋಂಕು ಪತ್ತೆಯಾದ 100 ಮೀಟರ್ ಸುತ್ತಳತೆಯಲ್ಲಿರುವ ಎಲ್ಲವನ್ನೂ ಸೀಲ್ ಡೌನ್ ಮಾಡಿ ಸ್ವಯಂ ಅಪಾರ್ಟ್‌ಮೆಂಟ್ ಅಸೋಸಿಯೇಷನ್ ಗಳೇ ಕಂಟೋನ್ಮೆಂಟ್ ಝೋನ್ ಘೋಷಿಸಬೇಕು
  13. ಹತ್ತು ಅಥವಾ ಅದಕ್ಕೂ ಅಧಿಕ ಕೇಸ್ ಪತ್ತೆಯಾದರೆ ಇಡೀ ಅಪಾರ್ಟ್‌ಮೆಂಟ್ ಸೀಲ್ ಡೌನ್*
  14. ಸೋಂಕು ಪತ್ತೆಯಾಗಿ ಕಂಟೋನ್ಮೆಂಟ್ ಝೋನ್ ಘೋಷಣೆಯಾದರೆ ಇಡೀ ಅಪಾರ್ಟ್‌ಮೆಂಟ್ ನಿವಾಸಿಗಳಿಗೆ ಕೊರೋನಾ ಟೆಸ್ಟ್*
  15. ಅಪಾರ್ಟ್‌ಮೆಂಟ್ ನಿವಾಸಿಗಳ ಸಂಬಂಧಿಕರು, ಗೆಳೆಯರು, ಡೆಲಿವರಿ ಬಾಯ್ & ಎಲ್ಲಾ ವಿಸಿಟರ್ಸ್ ಗೂ ಎರಡು ಡೋಸ್ ಆಗಿದ್ದರೆ ಮಾತ್ರ ಎಂಟ್ರಿ
  16. ಎಲ್ಲಾ ನಿವಾಸಿಗಳಿಗೂ ಎರಡು ಡೋಸ್ ಲಸಿಕೆ ಆಗುವಂತೆ ಅಪಾರ್ಟ್‌ಮೆಂಟ್ ಅಸೋಸಿಯೇಷನ್ ಗಳೇ ನೋಡಿಕೊಳ್ಳಬೇಕು ಎಂದು ಬಿಬಿಎಂಪಿ ಆದೇಶಿಸಿದೆ.

ಇದನ್ನೂ ಓದಿ : ಕರ್ನಾಟಕದಲ್ಲಿ 10 ದಿನಗಳ ಕಾಲ ಲಾಕ್‌ಡೌನ್‌ ಫಿಕ್ಸ್‌

ಇದನ್ನೂ ಓದಿ : ಪ್ರಧಾನಿ ನೇತೃತ್ವದಲ್ಲಿ ಸಿಎಂಗಳ ಸಭೆ : ಲಾಕ್​ಡೌನ್​ ಬಗ್ಗೆ ಮಹತ್ವದ ಮಾಹಿತಿ

( Karnataka Corona, Omicron hike, Separate New Guidelines for apartments )

Comments are closed.