ಭಾನುವಾರ, ಏಪ್ರಿಲ್ 27, 2025
HomekarnatakaKarnataka Minister Sunil Kumar: ವಿದ್ಯುತ್ ದರ ಏರಿಕೆ ಮಾಡಲ್ಲ, ಬೇಸಿಗೆಯಲ್ಲಿ ವಿದ್ಯುತ್ ಕಡಿತವೂ ಇಲ್ಲ...

Karnataka Minister Sunil Kumar: ವಿದ್ಯುತ್ ದರ ಏರಿಕೆ ಮಾಡಲ್ಲ, ಬೇಸಿಗೆಯಲ್ಲಿ ವಿದ್ಯುತ್ ಕಡಿತವೂ ಇಲ್ಲ : ಸಚಿವ ಸುನೀಲ್ ಕುಮಾರ್

- Advertisement -

ಬೆಂಗಳೂರು : (Karnataka Minister Sunil Kumar) ರಾಜ್ಯದಲ್ಲಿ ವಿದ್ಯುತ್ ದರ ಏರಿಕೆ ಮಾಡುವುದಿಲ್ಲ, ಬದಲಾಗಿ ವಿದ್ಯುತ್ ಕಡಿತವೂ ಇಲ್ಲ ಎನ್ನುವ ಮೂಲಕ ರಾಜ್ಯದ ಜನತೆಗೆ ಇಂಧನ ಸಚಿವ ಸುನಿಲ್ ಕುಮಾರ್ ಗುಡ್ ನ್ಯೂಸ್ ಕೊಟ್ಟಿದ್ದಾರೆ. ವಿಧಾನಸಭೆಯಲ್ಲಿ ನಡೆಯುತ್ತಿರುವ ಬಜೆಟ್ ಅಧಿವೇಶನದ ಪ್ರಶ್ನೋತ್ತರ ಅವಧಿಯಲ್ಲಿ ಹಾಗೂ ಶೂನ್ಯ ವೇಳೆಯಲ್ಲಿ ಅವರು ಮಾತನಾಡಿದ್ದಾರೆ.

ರಾಜ್ಯದಲ್ಲಿನ ವಿದ್ಯುತ್ ಪರಿಸ್ಥಿತಿಯನ್ನು ನಿಭಾಯಿಸಲು ಆಡಳಿತಾರೂಢ ಬಿಜೆಪಿ ಸರ್ಕಾರ ಸಿದ್ಧವಾಗಿದೆ. ರೈತರ ಬೆಳೆಗಳಿಗೆ ಹಾಗೂ ವಿದ್ಯಾರ್ಥಿಗಳಿಗೆ ತೊಂದರೆಯಾಗದಂತೆ ಬೇಸಿಗೆಯಲ್ಲಿ ನಿರಂತರ ವಿದ್ಯುತ್ ಸರಬರಾಜು ಮಾಡಲಾಗುವುದು ಎಂದು ಇಂಧನ ಸಚಿವ ಸುನೀಲ್ ಕುಮಾರ್ ಹೇಳಿದ್ದಾರೆ.

ಪಿಎಂ ಕುಸುಮ್-ಬಿ ಯೋಜನೆಯಡಿ, ಕೇಂದ್ರ ಸರ್ಕಾರವು 7.5 ಎಚ್‌ಪಿ ಸಾಮರ್ಥ್ಯದ ಸೋಲಾರ್ ಪಂಪ್ ಸೆಟ್‌ಗಳಿಗೆ 30% ಸಬ್ಸಿಡಿ ನೀಡುತ್ತದೆ. ರಾಜ್ಯ ಸರ್ಕಾರವು ಸಾಮಾನ್ಯ ವರ್ಗದ ರೈತರ ಫಲಾನುಭವಿಗಳಿಗೆ 30% ಮತ್ತು SC/ST ರೈತರಿಗೆ 50% ಸಹಾಯಧನವನ್ನು ನೀಡುತ್ತದೆ. ಉಳಿದ ಮೊತ್ತವನ್ನು ರೈತ ಫಲಾನುಭವಿಗಳಿಂದ ಸಂಗ್ರಹಿಸಲಾಗುತ್ತದೆ. ಅಲ್ಲದೇ ಈ ಯೋಜನೆಯನ್ನು ಕ್ರೆಡೆಲ್ ಮೂಲಕ ಜಾರಿಗೊಳಿಸಲಾಗುತ್ತದೆ ಎಂದಿದ್ದಾರೆ.

ರಾಜ್ಯದಲ್ಲಿನ ಈಗಾಗಲೇ ಎಸ್ಕಾಂಗಳು 72000 ಕೋಟಿ ರೂಪಾಯಿ ಸಾಲವನ್ನು ಹೊಂದಿವೆ. 200 ಯೂನಿಟ್‌ ವಿದ್ಯುತ್ ನ್ನು ಉಚಿತ ನೀಡಲಾಗತ್ತದೆ. ನೀಡಲಾಗುವುದು. ಎಸ್ಕಾಮ್‌ಗಳ ಆರ್ಥಿಕ ಸ್ಥಿತಿ ಏನಾಗಬಹುದು ? 200 ಯೂನಿಟ್‌ ಉಚಿತ ವಿದ್ಯುತ್‌ ಎಂಬ ಕಾಂಗ್ರೆಸ್‌ ಘೋಷಣೆಯನ್ನು ಪರೋಕ್ಷವಾಗಿ ಲೇವಡಿ ಮಾಡಿ ಎಂದು ಬಿಜೆಪಿ ಸದಸ್ಯ ಡಿಎಸ್‌ ಅರುಣ್‌ ಪ್ರಶ್ನಿಸಿದರು.

ಇದನ್ನೂ ಓದಿ : ಗುಡ್ ನ್ಯೂಸ್ : ಶೇ.50% ಸಂಚಾರ ದಂಡ ಡಿಸ್ಕೌಂಟ್ ಅವಧಿ 2 ವಾರ ವಿಸ್ತರಣೆ

ಇದನ್ನೂ ಓದಿ : Aero India Show 2023: ನಾಳೆಯಿಂದ ಬೆಂಗಳೂರಿನಲ್ಲಿ ಏರೋ ಇಂಡಿಯಾ ಶೋ : ವಾಹನ ಸಂಚಾರದಲ್ಲಿ ಬದಲಾವಣೆ

ಇದನ್ನೂ ಓದಿ : God’s invocation on student: ಕಾಂತಾರ ವರಾಹ ರೂಪಂ ಹಾಡಿಗೆ ನೃತ್ಯ: ವಿದ್ಯಾರ್ಥಿ ಮೇಲೆ ಆವಾಹನೆಯಾಯ್ತು ದೈವ

ಅರುಣ್ ಅವರ ಪ್ರಶ್ನೆಗೆ ಉತ್ತರಿಸಿದ ಸುನೀಲ್, ರಾಜ್ಯದಲ್ಲಿ ಈಗಾಗಲೇ ಭಾಗ್ಯಜ್ಯೋತಿ ಮತ್ತು ಕುಟೀರಜ್ಯೋತಿಯಂತಹ ಯೋಜನೆಗಳು ಜಾರಿಯಲ್ಲಿವೆ. ಎಸ್‌ಸಿ/ಎಸ್‌ಟಿ ಕುಟುಂಬಗಳಿಗೆ 75 ಯೂನಿಟ್‌ ಉಚಿತ ವಿದ್ಯುತ್‌ ಘೋಷಿಸಲಾಗಿದೆ. ಸುಮಾರು 24 ಲಕ್ಷ ಫಲಾನುಭವಿಗಳು ಈ ಯೋಜನೆಯ ಪ್ರಯೋಜನವನ್ನು ಪಡೆಯುತ್ತಾರೆ. ಈ ಉಚಿತಗಳ ಕಾರಣದಿಂದಾಗಿ, ESCOMಗಳ ಸಾಲವು ಚಿಮ್ಮಿ ಮತ್ತು ಮಿತಿಯಿಂದ ಹೆಚ್ಚುತ್ತಿದೆ. ಉಚಿತಗಳನ್ನು ಘೋಷಿಸುವ ತೀವ್ರ ಪೈಪೋಟಿಯಲ್ಲಿ ಎಸ್ಕಾಂಗಳನ್ನು ಬಡವರನ್ನಾಗಿ ಮಾಡಲು ಸರ್ಕಾರ ಸಿದ್ಧವಿಲ್ಲ ಎಂದಿದ್ದಾರೆ.

Karnataka Minister Sunil Kumar: No hike in electricity rates, no power cut in summer: Minister Sunil Kumar

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular