Drug consumption case: ಗಂಗೊಳ್ಳಿ: ಮಾದಕ ವಸ್ತು ಸೇವನೆ ಪ್ರಕರಣ: ಮೂವರು ಅರೆಸ್ಟ್‌

ಗಂಗೊಳ್ಳಿ: (Drug consumption case) ಜಿಲ್ಲೆಯಲ್ಲಿ ಮಾದಕ ವಸ್ತು ಸೇವನೆ ಹಾಗೂ ಮಾರಾಟ ಪ್ರಕರಣಗಳು ದಿನೇ ದಿನೇ ಹೆಚ್ಚುತ್ತಿದ್ದು, ಹಲವರು ಮಾದಕ ವಸ್ತುಗಳ ಸೇವನೆಯಿಂದಾಗಿ ಜೈಲು ಪಾಲಾಗಿದ್ದಾರೆ. ಇದೀಗ ಗಂಗೊಳ್ಳಿಯಲ್ಲೂ ಕೂಡ ಮೂವರು ಗಾಂಜಾ ಸೇವನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರ ಕೈಸೆರೆಯಾಗಿದ್ದಾರೆ. ಅಮನ್‌ ಕಶಬ್‌, ಹಿಮಾನ್‌ ಶು ಚೈಲ್ಕೆ ಹಾಗೂ ಸಮೀರ್‌ ಮುಜಾವರ್‌ ಬಂಧನಕ್ಕೊಳಗಾದ ಯುವಕರು.

ಇತ್ತೀಚೆಗೆ ಗಾಂಜಾ ಸೇವನೆ ಪ್ರಕರಣದಲ್ಲಿ ಹಲವರು ಬಂಧನಕ್ಕೊಳಗಾಗಿದ್ದು, ಇದೀಗ ಗಂಗೊಳ್ಳಿಯಲ್ಲೂ ಕೂಡ ಮೂವರು ಬಂಧನಕ್ಕೊಳಗಾಗಿದ್ದಾರೆ. ಗಂಗೊಳ್ಳಿ ಠಾಣಾ ಪೊಲೀಸರು ಸಿಬ್ಬಂದಿಯೊಂದಿಗೆ ರೌಂಡ್ಸ್‌ ನಲ್ಲಿರುವಾಗ ತ್ರಾಸಿ ಬೀಚ್‌ ಪಾರ್ಕ್‌ ಬಳಿ ಇಬ್ಬರು ಹಾಗೂ ತ್ರಾಸಿ ಪ್ರವಾಸಿ ಮಂದಿರದ ಬಳಿ ಓರ್ವ ಕುಳಿತು ಗಾಂಜಾ ಸೇವಿಸುತ್ತಿರುವುದಾಗಿ ಮಾಹಿತಿ ದೊರೆತಿದೆ. ಮಾಹಿತಿಯ ಮೇರೆಗೆ ಪೊಲೀಸರು ಹಾಗೂ ಸಿಬ್ಬಂದಿಗಳು ಸ್ಥಳಕ್ಕೆ ಧಾವಿಸಿದ್ದು, ಮೂವರು ಗಾಂಜಾ ಸೇವಿಸುತ್ತಿರುವುದು ಕಂಡು ಬಂದಿದೆ.

ಯುವಕರು ಬಿಹಾರ, ಛತ್ತೀಸ್‌ ಗಢ್‌, ಹಾಗೂ ಬೆಳಗಾವಿ ಮೂಲದವರು ಎಂದು ತಿಳಿದುಬಂದಿದೆ. ಸದ್ಯ ಪೊಲೀಸರು ಆರೋಪಿಗಳನ್ನು ವಶಕ್ಕೆ ಪಡೆದುಕೊಂಡಿದ್ದು, ಮೂವರನ್ನು ಕುಂದಾಪುರದ ಮಾತಾ ಆಸ್ಪತ್ರೆಯಲ್ಲಿ ಪರೀಕ್ಚೆಗೊಳಪಡಿಸಿದ್ದಾರೆ. ಈ ವೇಳೆ ಮೂವರು ಯುವಕರು ಗಾಂಜಾ ಸೇವಿಸಿರುವುದು ದೃಢಪಟ್ಟಿದೆ. ಈ ಬಗ್ಗೆ ಗಂಗೊಳ್ಳಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮೂವರನ್ನು ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸುತ್ತಿದ್ದಾರೆ.

ಈ ಹಿಂದೆ ಉಡುಪಿ, ಮಣಿಪಾಲ, ಬೈಂದೂರು ಸೇರಿದಂತೆ ಹಲವು ಕಡೆ ಪೊಲೀಸರು ದಾಳಿ ನಡೆಸಿದ್ದು, ಈ ಪ್ರಕರಣದಲ್ಲಿ ಹಲವರು ಸಿಕ್ಕಿಬಿದ್ದಿದ್ದಾರೆ. ಅಲ್ಲದೇ ಈ ಪ್ರಕರಣದಲ್ಲಿ ಭಾಗಿಯಾಗಿದ್ದ ಹಲವರಲ್ಲಿ ಹಲವು ಮೌಲ್ಯಭರಿತ ವಸ್ತುಗಳನ್ನು ಕೂಡ ವಶಪಡಿಸಿಕೊಳ್ಳಲಾಗಿದೆ. ಸದ್ಯ ದಿನೇ ದಿನೇ ಗಾಂಜಾ ಪ್ರಕರಣಗಳು ಹೆಚ್ಚುತ್ತಿದ್ದು, ಒಂದೊಂದಾಗಿ ಬೆಳಕಿಗೆ ಬರುತ್ತಿದೆ.

ಇದನ್ನೂ ಓದಿ : Ambedkar derogatory visual display: ಅಂಬೆಡ್ಕರ್‌ ಅವಹೇಳನಕಾರಿ ದೃಶ್ಯ ಪ್ರದರ್ಶನ: ಪೊಲೀಸರಿಗೆ ದೂರು

ಇದನ್ನೂ ಓದಿ : Kambala racer committed suicide: ಕೆಲಸ ಕಳೆದುಕೊಂಡಿದ್ದಕ್ಕೆ ಮನನೊಂದು ಆತ್ಮಹತ್ಯೆಗೆ ಶರಣಾದ ಕಂಬಳ ಓಟಗಾರ

ಇದನ್ನೂ ಓದಿ : Bomb Threat Call : ಗೂಗಲ್‌ನ ಮುಂಬೈ ಕಚೇರಿಗೆ ಬಾಂಬ್ ಬೆದರಿಕೆ : ಕರೆ ಮಾಡಿದವರ ಬಂಧನ

Drug consumption case: Gangolli: Drug consumption case: Three arrested

Comments are closed.