ಬೆಂಗಳೂರು : ಅಡುಗೆ ಅನಿಲ್, ಪೆಟ್ರೋಲ್, ಡಿಸೇಲ್, ಹೊಟೇಲ್ ಫುಡ್ ಬಳಿಕ ಇದೀಗ ಅಟೋ ಪ್ರಯಾಣದರದಲ್ಲೂ ಏರಿಕೆಯಾಗಿದ್ದು ಇನ್ಮುಂದೆ ಅಟೋ ಏರುವ ಮುನ್ನ ಜೇಬು ತುಂಬ ಕಾಸು ಇಡಲೇ ಬೇಕು.ಅಟೋ ಚಾಲಕರ ಒತ್ತಾಯದ ಮೇರೆಗೆ ಸಾರಿಗೆ ಪ್ರಾಧಿಕಾರ ಅಟೋ ದರ (Auto Travel Rate ) ಪರಿಷ್ಕರಿಸಿ ಆದೇಶ ಹೊರಡಿಸಿದೆ.
ಹೊಸ ಆದೇಶ ಡಿಸೆಂಬರ್ 9 ರಿಂದ ಜಾರಿಗೆ ಬರಲಿದ್ದು, ಮೀಟರ್ ಬದಲಾಯಿಸಿಕೊಳ್ಳಲು 90 ದಿನಗಳ ಕಾಲಾವಕಾಶ ನೀಡಲಾಗಿದೆ. ಪರಿಷ್ಕೃತ ದರ ಜನಸಾಮಾನ್ಯರ ಜೇಬಿಗೆ ಕತ್ತರಿ ಹಾಕುವಂತಿದ್ದುಈಗಾಗಲೇ ದಿನಸಿ, ಅಡುಗೆ ಅನಿಲ್, ಪೆಟ್ರೋಲ್ ದರ ಏರಿಕೆಯಿಂದ ಕಂಗೆಟ್ಟ ಜನರು ಈಗ ಮಧ್ಯಮವರ್ಗದ ಓಡಾಟದ ಮಾಧ್ಯಮದಂತಿದ್ದ ಅಟೋ ಬೆಲೆ ಏರಿಕೆಯಿಂದ ಕಂಗಲಾಗುವ ಸ್ಥಿತಿ ಎದುರಾಗಿದೆ.

ಪರಿಷ್ಕೃತ ದರದಂತೆ ಮೊದಲ ಎರಡು ಕಿಲೋಮೀಟರ್ ಗೆ 30 ರೂಪಾಯಿ ದರ ನಿಗದಿಯಾಗಿದ್ದು, ಬಳಿಕ ಪ್ರತಿ ಕಿಲೋಮೀಟರ್ ಗೆ 15 ರೂಪಾಯಿ ದರವಿರಲಿದೆ. ಇನ್ನು ರಾತ್ರಿ ವೇಳೆ ಸಾಮಾನ್ಯ ದರದ ಒಂದೂವರೆ ಪಟ್ಟು ಅಂದ್ರೇ 30+15 ರೂಪಾಯಿ ನೀಡಬೇಕಾಗುತ್ತದೆ. ಇನ್ನುಳಿದಂತೆ ಮೊದಲ ಐದು ನಿಮಿಷದ ಕಾಯುವಿಕೆ ಉಚಿತವಾಗಿದ್ದು ಬಳಿಕ 5 ನಿಮಿಷಕ್ಕೆ ಪ್ರತಿ ನಿಮಿಷಕ್ಕೆ ಐದು ರೂಪಾಯಿ ದರ ನಿಗದಿಪಡಿಸಲಾಗಿದೆ.

20 ಕೆಜಿ ಲಗೇಜ್ ಸಾಗಾಣೆ ಉಚಿತ ವಾಗಿದ್ದು, ಬಳಿಕ 21 ಕೆಜಿಯಿಂದ 50 ಕೆಜಿಗೆ 5 ರೂಪಾಯಿ ದರ ನಿಗದಿ ಪಡಿಸಲಾಗಿದೆ. 2019 ರಲ್ಲಿ ದರ ಏರಿಸಿದ ಬಳಿಕ ಅಟೋ ಪ್ರಯಾಣ ದರದಲ್ಲಿ ಏರಿಕೆಯಾಗಿರಲಿಲ್ಲ. ಹೀಗಾಗಿ ಅಟೋ ಪ್ರಯಾಣ ದರ ಪರಿಷ್ಕರಿಸುವಂತೆ ಚಾಲಕರು ಮನವಿ ಮಾಡಿದ್ದರು.
ಇದನ್ನೂ ಓದಿ : ಅಡುಗೆ ಅನಿಲದ ಬಳಿಕ ಈಗ ಆಹಾರದ ಸರದಿ : ಇಂದಿನಿಂದ ಕೈಸುಡಲಿದೆ ಹೊಟೇಲ್ ತಿಂಡಿ
ಇದನ್ನೂ ಓದಿ : ಉಪನ್ಯಾಸಕರು ಜೀನ್ಸ್ ಪ್ಯಾಂಟ್, ಟೀ ಶರ್ಟ್ ಧರಿಸುವಂತಿಲ್ಲ: ಡಿಡಿಪಿಯು ಆದೇಶದ ಬಗ್ಗೆ DC ಹೇಳಿದ್ದೇನು ?
(Auto travel Rates have Hiked in Bengaluru)