Vanditha Rajkumar : ತಂದೆಯ ಆಸೆ ನೆರವೇರಿಸಿದ ವಂದಿತಾ: ದುಃಖದ ನಡುವೆಯೂ ಪರೀಕ್ಷೆಗೆ ಹಾಜರ್

ನಟ ಪುನೀತ್ ರಾಜ್ ಕುಮಾರ್ ಹೆಚ್ಚಿನ ಶಿಕ್ಷಣ ಪಡೆಯದಿದ್ದರೂ ಶಿಕ್ಷಣದ ಬಗ್ಗೆ ಅಪಾರ ಒಲವು,ಅಸಕ್ತಿ ಹೊಂದಿದ್ದರು.‌ಮಕ್ಕಳಿಗೂ ಇದೇ ಪಾಠ ಹೇಳುತ್ತಿದ್ದರೂ ಹೀಗಾಗಿ ಮಗಳು ಅಪ್ಪನ ಅಗಲಿಕೆ ನೋವಿನ ನಡುವೆಯೂ ಪರೀಕ್ಷೆಗೆ ಹಾಜರಾಗಿ ತಂದೆಗೆ ಗೌರವ ಸಲ್ಲಿಸಿದ್ದಾಳೆ.

ನಟ ಪುನೀತ್ ರಾಜ್ ಕುಮಾರ್ ಗೆ (Puneeth Raj kumar) ಇಬ್ಬರು ಹೆಣ್ಣು ಮಕ್ಕಳು. ಮೊದಲ ಮಗಳು ವಿದೇಶದಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದರೇ ಇನ್ನೊಬ್ಬ ಮಗಳು ವಂದಿತಾ (Vanditha) ನಗರದ ಸೋಪಿಯಾ ಹೈಸ್ಕೂಲ್ ನಲ್ಲಿ 10 ನೇ ತರಗತಿಯಲ್ಲಿ ಓದುತ್ತಿದ್ದಾಳೆ.

ಎಸ್ .ಎಸ್‌ಎಲ್‌ಸಿ ವಿದ್ಯಾರ್ಥಿನಿಯಾಗಿರುವ ವಂದಿತಾಗೆ ( Vanditha Puneeth Raj Kumar) ಇಂದಿನಿಂದ ಎಸ್ .ಎಸ್ ಎಲ್‌ಸಿ ಪೂರ್ವಭಾವಿ ಪರೀಕ್ಷೆ ನಡೆಯುತ್ತಿದೆ. ಆದರೆ ಕಳೆದ 10 ದಿನಗಳ ಹಿಂದೆ ಪುನೀತ್ ರಾಜ್ ಕುಮಾರ್ ಅಕಾಲಿಕವಾಗಿ ಅನಾರೋಗ್ಯದಿಂದ ನಿಧನರಾಗಿದ್ದಾರೆ. ಇಂದು ಪುನೀತ್ 11 ನೇ ದಿನದ ಕಾರ್ಯ ನಡೆಯುತ್ತಿದೆ.

ಆದರೆ ತಂದೆಯ ಶಿಕ್ಷಣ ಪ್ರೀತಿ ಹಾಗೂ ಗೌರವದ ಅರಿವಿರೋ ಪುನೀತ್ ದ್ವಿತೀಯ ಪುತ್ರಿ ಈ ದುಃಖದ ನಡುವೆಯೂ ಪರೀಕ್ಷೆ ಬರೆಯಲು ತೆರಳಿದ್ದಾಳೆ. ಮುಂಜಾನೆ ಪುನೀತ್ ಸಮಾಧಿ ಬಳಿ ಆಗಮಿಸಿ ಪೂಜೆ ಸಲ್ಲಿಸಿದ ಪುತ್ರಿ ವಂದಿತಾ ಬಳಿಕ ತಮ್ಮ ಸ್ಕೂಲ್ ಗೆ ತೆರಳಿದ್ದು ಪರೀಕ್ಷೆಗೆ ಹಾಜರಾಗಿದ್ದಾರೆ. ಈ ಸಂಗತಿ ಈಗ ಸೋಷಿಯಲ್ ಮೀಡಿಯಾ ದಲ್ಲಿ ವೈರಲ್ ಆಗಿದ್ದು ಜನರು ಪುನೀತ್ ಪುತ್ರಿಯ ಶಿಕ್ಷಣ ಪ್ರೇಮವನ್ನು ಶ್ಲಾಘಿಸಿದ್ದಾರೆ.

ಇದನ್ನೂ ಓದಿ : Puneeth Raj Kumar ನಿಧನದ ಐದೇ ದಿನಕ್ಕೆ ಅಪ್ಪು ಪುತ್ರಿ ಧೃತಿ ವಿದೇಶಕ್ಕೆ : ದಿಟ್ಟ ನಿರ್ಧಾರದ ಹಿಂದಿದೆ ಭಾವನಾತ್ಮಕ ವಿಚಾರ

ಇದನ್ನೂ ಓದಿ : ಸರ್ಕಾರದ ಸಹಕಾರಕ್ಕೆ ಧನ್ಯವಾದ: ಜಿಲ್ಲಾಧಿಕಾರಿಗಳಿಗೆ ಪುನೀತ್ ಪತ್ನಿ ಅಶ್ವಿನಿ ಪತ್ರ

(Puneeth Raj Kumar’s daughter Vandita attends sslc exams audition on the day of her death)

Comments are closed.