ಮಂಗಳವಾರ, ಏಪ್ರಿಲ್ 29, 2025
HomekarnatakaKSRTC EV Power Plus: ಕೆಎಸ್‌ಆರ್‌ಟಿಸಿ ಎಲೆಕ್ಟ್ರಿಕಲ್‌ ಬಸ್‌ : ಇಂದಿನಿಂದ ಸಂಚಾರ ಆರಂಭ

KSRTC EV Power Plus: ಕೆಎಸ್‌ಆರ್‌ಟಿಸಿ ಎಲೆಕ್ಟ್ರಿಕಲ್‌ ಬಸ್‌ : ಇಂದಿನಿಂದ ಸಂಚಾರ ಆರಂಭ

- Advertisement -

ಬೆಂಗಳೂರು: (KSRTC EV Power Plus) ಮೊದಲ ಎಲೆಕ್ಟ್ರಿಕಲ್‌ ಕೆಎಸ್‌ಆರ್‌ಟಿಸಿ ಬಸ್‌ ರಸ್ತೆಗಿಳಿದಿದ್ದು, ಇಂದಿನಿಂದ ಸಂಚಾರ ಆರಂಭವಾಗಲಿದೆ. ಇಂದು ಮೊದಲ ಇಲೆಕ್ಟ್ರಿಕಲ್‌ ಕೆಎಸ್‌ಆರ್‌ಟಿಸಿ ಬಸ್‌ಗೆ ಪ್ರಾಯೋಗಿಕವಾಗಿ ಚಾಲನೆ ನೀಡಿದ್ದು ಬೆಂಗಳೂರಿನಿಂದ ರಾಮನಗರಕ್ಕೆ ಸಂಚಾರ ಪ್ರಾರಂಭವಾಗಿದೆ.

ಬಿಎಂಟಿಸಿ ಬಳಿಕ ಕೆಎಸ್‌ಆರ್‌ಟಿಸಿ (KSRTC EV Power Plus) ಮೊದಲ ಬಸ್‌ ರಸ್ತೆಗಿಳಿದಿದ್ದು, ಇಂದು ಬೆಳಿಗ್ಗೆ ಕೆಎಸ್‌ಆರ್‌ಟಿಸಿ ಕೇಂದ್ರ ಕಚೇರಿಯಿಂದ ಇವಿ ಪವರ್‌ ಪ್ಲಸ್‌ ಬಸ್‌ ರಾಮನಗರಕ್ಕೆ ಹೊರಟಿದೆ. ಸಾರಿಗೆ ಸಚಿವ ಶ್ರೀ ರಾಮುಲು ಅವರು ಡಿಸೆಂಬರ್‌ 31 ರಂದು ಲೋಕಾರ್ಪಣೆ ಮಾಡಿದ್ದು, ಹೊಸ ಬಸ್‌ ಗೆ ಇವಿ ಪ್ಲಸ್‌ ಎಂದು ಹೆಸರಿಡಲಾಗಿದೆ. ಎಮ್‌ ಇ ಐಎಲ್‌ ಹಾಗೂ ಕೆಎಸ್‌ಆರ್‌ಟಿಸಿ ಜಂಟಿಯಾಗಿ ಪರಿಸರ ಸ್ನೇಹಿ ಬಸ್‌ ಗಳು ರಸ್ತೆಗಿಳಿದಿದ್ದು, ಕೆಎಸ್‌ಆರ್‌ಟಿಸಿ ಇವಿ ಪವರ್‌ ಪ್ಲಸ್‌ ಬಸ್ ನ ವಿಶೇಷತೆ ಏನೆಂಬುದು ಈ ಕೆಳಗೆ ತಿಳಿಸಲಾಗಿದೆ.

ಕೆಎಸ್‌ಆರ್‌ಟಿಸಿ ಇವಿ ಪವರ್‌ ಪ್ಲಸ್‌ ವಿಶೇಷತೆಗಳು;

  • ಇದಕ್ಕೆ ಎರಡೂವರೆ ಗಂಟೆಗಳ ಹೊತ್ತು ಚಾರ್ಜ್‌ ಮಾಡಿದರೆ ಮುನ್ನೂರು ಕಿ.ಮೀ. ಕ್ರಮಿಸುವಷ್ಟು ಸಾಮರ್ಥ್ಯವಿದೆ.
  • ಬಸ್‌ ಸಂಪೂರ್ಣವಾಗಿ ಹವಾನಿಂತ್ರಣ ವ್ಯವಸ್ಥೆಯನ್ನು ಮಾಡಲಾಗಿದೆ.
  • ನೂತನ ತಂತ್ರಜ್ಞಾನವಾದ ರೀ ಜೆನರೇಷನ್‌ ಸಿಸ್ಟಮ್‌ ಅಳವಡಿಸಲಾಗಿದೆ.
  • ಬಸ್‌ ಒಳಗೆ ಪ್ರಯಾಣಿಕರ ಅನುಕೂಲಕ್ಕೆ ಮೊಬೈಲ್‌ ಚಾರ್ಜಿಂಗ್‌ ಸ್ಪಾಟ್ಸ್‌
    *ಮನರಂಜನೆಗಾಗಿ ಬಸ್‌ ನಲ್ಲಿ ಎರಡು ಟಿವಿಯನ್ನು ಅಳವಡಿಸಲಾಗಿದೆ.
  • ಬಸ್‌ ನಲ್ಲಿ 42 ಸೀಟಿಂಗ್‌ ಸಾಮರ್ಥ್ಯವಿದೆ.
    *ಬಸ್‌ ಸಂಪೂರ್ಣವಾಗಿ ಸೆನ್ಸಾರ್‌ ಹಿಡಿತದಲ್ಲಿ ಇರಲಿದೆ.
    *ಫ್ರಂಟ್‌ ಲಾಗ್‌ ಮತ್ತು ಬ್ಯಾಕ್‌ ಲಾಗ್‌ ಕ್ಯಾಮೆರಾ ವ್ವಯಸ್ಥೆ ಇದರಲ್ಲಿದೆ.
    *ಡ್ರೈವರ್‌ ಎಂಡ್‌ ಸಂಪೂರ್ಣವಾಗಿ ಡಿಜಿಟಲೈಸ್ಡ್‌ ಸಿಸ್ಟಮ್‌ ನಿಂದ ಕೂಡಿದೆ.

ಎಕ್ಸ್‌ ಪ್ರೆಸ್‌ ವೇ ನಲ್ಲಿ ಎಲೆಕ್ಟ್ರಿಕಲ್‌ ಬಸ್‌ ಸಂಚರಿಸಲಿದ್ದು, ಬೆಂಗಳೂರು ಮೈಸೂರು ನಡುವೆ ವೇಗದ ಸಂಚಾರಕ್ಕೆ ಕೆಎಸ್‌ಆರ್‌ಟಿಸಿ ಆದ್ಯತೆ ನೀಡಿದೆ . ಹೀಗಾಗಿ ಮೈಸೂರು ಬೆಂಗಳೂರು ನಡುವೆ ನಾನ್‌ ಸ್ಟಾಪ್‌ ಅಗಿ ಎಲೆಕ್ಟ್ರಿಕ್‌ ಬಸ್‌ ಸೇವೆ ಆರಂಭವಾಗಲಿದೆ. ಈ ಬಸ್‌ ನ ಪ್ರಯಾಣದ ಬೆಲೆ ಸಾಮಾನ್ಯ ಸಾರಿಗೆಗಿಂತ ಹೆಚ್ಚು ಮಾಗೂ ಮಲ್ಟಿ ಆಕ್ಸಲ್‌ ದರಕ್ಕಿಂದ ಕಡಿಮೆ ದರ ನಿಗದಿ ಮಾಡಲಾಗಿದೆ. ಮುಂದಿನ ಮೂರು ತಿಂಗಳಲ್ಲಿ ಹೆಚ್ಚು ಕಡಿಮೆ ಐವತ್ತು ಬಸ್‌ ಸಂಚಾರ ಪ್ರಾರಂಭವಾಗಲಿದ್ದು, ಬೆಂಗಳೂರಿನ ಹತ್ತಿರದ ಜಿಲ್ಲೆಗಳ್ಲಲಿ ಸಂಚಾರ ಪ್ರಾರಂಭಿಸುವ ಆಲೋಚನೆ ನಡೆಸಲಾಗಿದೆ.

ಇದನ್ನೂ ಓದಿ : Bengaluru road collapse : ಬೆಂಗಳೂರಿನಲ್ಲಿ ಮತ್ತೊಂದು ಅವಾಂತರ: ರಸ್ತೆ ಕುಸಿದು ಬಿದ್ದು ಯುವಕ ಗಂಭೀರ ಗಾಯ

ಇದನ್ನೂ ಓದಿ : LLB student suicide: ಪ್ರಿನ್ಸಿಪಾಲ್‌ ಬುದ್ದಿ ಹೇಳಿದ್ದಕ್ಕೆ ಮನನೊಂದು ಎಲ್.ಎಲ್‌.ಬಿ ವಿದ್ಯಾರ್ಥಿ ಅತ್ಮಹತ್ಯೆ

ಇದನ್ನೂ ಓದಿ : Metro pillar collapse: ನಿರ್ಮಾಣ ಹಂತದ ಮೆಟ್ರೋ ಪಿಲ್ಲರ್ ಕುಸಿತ: ಇಬ್ಬರಿಗೆ ಗಂಭೀರ ಗಾಯ

KSRTC EV Power Plus: KSRTC Electrical Bus: Starting today

RELATED ARTICLES

Most Popular