Opposition to conversion: ಮತಾಂತರಕ್ಕೆ ವಿರೋಧಿಸಿದಕ್ಕೆ ಹೆಂಡತಿಗೆ ಕಿರುಕುಳ: ಸಿಗರೇಟ್‌ ನಿಂದ ಸುಟ್ಟು, ಮಾಂಸ ತಿನ್ನಲು ಒತ್ತಾಯ

ಲಕ್ನೋ: (Opposition to conversion) ಮುಸ್ಲಿಂ ಧರ್ಮದವನನ್ನು ಮದುವೆಯಾಗಿದ್ದ ಹಿಂದೂ ಯುವತಿಗೆ ಆಕೆಯ ಪತಿ ಮತಾಂತರವಾಗಲು ಒತ್ತಾಯಿಸುತ್ತಿದ್ದು, ಇದನ್ನು ಆಕೆ ವಿರೋಧಿಸಿದ್ದಕ್ಕೆ ಪ್ರತಿದಿನ ಆಕೆಗೆ ಹೊಡೆದು, ಸಿಗರೇಟ್‌ ನಿಂದ ಸುಟ್ಟು ಚಿತ್ರಹಿಂಸೆ ನೀಡುತ್ತಿದ್ದ ಎಂದು ಆಕೆ ಆರೋಪಿಸಿದ್ದಾಳೆ. ಅಲ್ಲದೇ ಆಕೆಗೆ ಮಾಂಸವನ್ನು ತಿನ್ನಲು ಒತ್ತಾಯ ಮಾಡುತ್ತಿದ್ದ ಎಂಬ ಅರೋಪದ ಮೇಲೆ ಮಹಿಳೆಯು ತನ್ನ ಗಂಡನ ವಿರುದ್ದ ದೂರು ನೀಡಿದ್ದಾಳೆ.

ಉತ್ತರ ಪ್ರದೇಶದ ಲಕ್ನೋದಲ್ಲಿ ಘಟನೆ (Opposition to conversion) ನಡೆದಿದ್ದು, ತನ್ನ ಪತಿ ತಾನು ಮುಸ್ಲಿಂ ಎನ್ನುವುದನ್ನು ಮುಚ್ಚಿಟ್ಟು, ಹಿಂದೂ ಎಂದು ಹೇಳಿಕೊಂಡು ವಂಚಿಸಿ ಮದುವೆಯಾಗಿದ್ದಾನೆ ಎಂದು ಆರೋಪಿಸಿದ್ದು, ಆಕೆ ಮತಾಂತರವಾಗಲು ನಿರಾಕರಿಸಿದಾಗ ಗಂಡ ಆಕೆಯ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ್ದಾನೆ. ಅಲ್ಲದೇ ಸಿಗರೇಟ್‌ ನಿಂದ ಸುಟ್ಟು, ಬಿಸಿ ಎಣ್ಣೆಯನ್ನು ಸುರಿದಿದ್ದಾನೆ. ಪೊಲೀಸರಿಗೆ ದೂರು ನೀಡಿದರೆ ಕೊಲೆ ಮಾಡುವುದಾಗಿಯೂ, ಸಂಬಂಧಿಕರಿಂದ ಅತ್ಯಾಚಾರ ಮಾಡುವುದಾಗಿಯೂ ಬೆದರಿಕೆ ಹಾಕಿದ್ದಾನೆ ಎಂದು ಆಕೆ ದೂರಿನಲ್ಲಿ ತಿಳಿಸಿದ್ದಾಳೆ.

ಮೊಹಮ್ಮದ್‌ ನ ಚಿತ್ರಹಿಂಸೆ ತಾಳಲಾರದೇ ಮಹಿಳೆ ಮನೆಯಿಂಧ ಓಡಿಹೋಗಿ ದೂರು ದಾಖಲಿಸಲು ಪ್ರಯತ್ನಿಸಿದ್ದು, ಆಗ ಆಕೆಯನ್ನು ಕೋಣೆಯಲ್ಲಿ ಕೂಡಿಹಾಕಿ, ಥಳಿಸಿದ್ದ ಎಂದು ಮಹಿಳೆ ಆರೋಪಿಸಿದ್ದಾರೆ. ಅಲ್ಲದೇ ಆಕೆ ಗರ್ಭಿಣಿಯಾಗಿದ್ದಾಗ ಆಕೆಯ ಹೊಟ್ಟೆಯ ಮೇಲೆ ಹೊಡೆದಿದ್ದು, ಇದರಿಂದ ಆಕೆಗೆ ಗರ್ಭಪಾತವಾಗಿತ್ತು ಎಂದು ಕೂಡ ಆಕೆ ದೂರಿನಲ್ಲಿ ತಿಳಿಸಿದ್ದಾಳೆ.

ಮದುವೆಯಾದ ಬಳಿಕ ಲಕ್ನೋದಲ್ಲಿ ಬಾಡಿಗೆ ಮನೆಯೊಂದರಲ್ಲಿ ವಾಸಿಸಲು ಪ್ರಾರಂಭಿಸಿದ್ದಾರೆ. ಅಲ್ಲಿ ಆಕೆಗೆ ಆತ ಹಿಂದೂ ಅಲ್ಲ ಮುಸ್ಲಿಂ ಎಂದು ತಿಳಿದು ಬಂದಿದೆ. ಸದ್ಯ ಮಹಿಳೆಯ ದೂರಿನನ್ವಯ ಆರೋಪಿ ಚಾಂದ್‌ ಮೊಹಮ್ಮದ್‌ ನನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ಇದನ್ನೂ ಓದಿ : Nashik Bus accident: ಯಾತ್ರಾರ್ಥಿಗಳಿದ್ದ ಬಸ್ಸು ಟ್ರಕ್‌ಗೆ ಢಿಕ್ಕಿ: 10 ಸಾವು, ಹಲವರಿಗೆ ಗಾಯ

ಇದನ್ನೂ ಓದಿ: Bengaluru road collapse : ಬೆಂಗಳೂರಿನಲ್ಲಿ ಮತ್ತೊಂದು ಅವಾಂತರ: ರಸ್ತೆ ಕುಸಿದು ಬಿದ್ದು ಯುವಕ ಗಂಭೀರ ಗಾಯ

ಇದನ್ನೂ ಓದಿ : Mother got suicide with childrens: 3 ಹೆಣ್ಣು ಮಕ್ಕಳಿಗೆ ವಿಷವುಣಿಸಿ ತಾನೂ ಆತ್ಮಹತ್ಯೆ ಮಾಡಿಕೊಂಡ ತಾಯಿ

Opposition to conversion: Harassment of wife for opposing conversion: Burned by cigarette, forced to eat meat

Comments are closed.