ಭಾನುವಾರ, ಏಪ್ರಿಲ್ 27, 2025
HomekarnatakaKSRTC Mortgaging : ಸಂಬಳಕ್ಕಾಗಿ ಸಾಲ, ಬಸ್‌ ನಿಲ್ದಾಣಗಳನ್ನೇ ಅಡವಿಡುತ್ತಿದೆ ಕೆಎಸ್‌ಆರ್‌ಟಿಸಿ

KSRTC Mortgaging : ಸಂಬಳಕ್ಕಾಗಿ ಸಾಲ, ಬಸ್‌ ನಿಲ್ದಾಣಗಳನ್ನೇ ಅಡವಿಡುತ್ತಿದೆ ಕೆಎಸ್‌ಆರ್‌ಟಿಸಿ

- Advertisement -

ಬೆಂಗಳೂರು : ರಾಜ್ಯದ ಸಾರಿಗೆ ಸಂಸ್ಥೆಗಳು ನಷ್ಟದಿಂದ ಹೊರಗೆ ಬರುವ ಯಾವುದೇ ಸಾಧ್ಯತೆಗಳು ಸದ್ಯಕ್ಕೆ ತೋರುತ್ತಿಲ್ಲ. ಈಗಾಗಲೇ ಬಿಎಂಟಿಸಿ ಕೊರೋನಾ ಸೇರಿದಂತೆ ನಾನಾ ಕಾರಣಕ್ಕೆ ನಷ್ಟದ ಅಂಚು ತಲುಪಿದ್ದು ಚೇತರಿಸಿಕೊಳ್ಳುವುದಕ್ಕಾಗಿ ಆಸ್ತಿಗಳನ್ನು ಅಡಮಾನ ಇಟ್ಟಿದೆ. ಈಗ ಈ ಸಾಲಿಗೆ ಕೆಎಸ್ಆರ್ಟಿಸಿ ಹೊಸ ಸೇರ್ಪಡೆ. ಹೌದು ನಾಲ್ಕು ನಿಗಮದಲ್ಲಿ ಲಾಭದಲ್ಲಿದ್ದ ಕೆಎಸ್ ಆರ್ ಟಿ ಸಿ ವೇತನ ಕೊಡಲು ಸಂಕಷ್ಟ ಎನ್ನುವ ಹಂತ ತಲುಪಿದೆ. ಅಕ್ಷರಷಃ ದಿವಾಳಿ ಹಂತಕ್ಕೆ ತಲುಪಿದ ಕೆಎಸ್ಆರ್‌ಟಿಸಿ ನಿಗಮ ಸಾರಿಗೆ ಇಲಾಖೆ ನಷ್ಟ ತಪ್ಪಿಸಿಕೊಳ್ಳಲು ಹಾಗೂ ನೌಕರರ ಸಂಬಳ ಪಾವತಿಸಲು ಕೆಎಸ್ಆರ್ಟಿಸಿಬಸ್ ನಿಲ್ದಾಣಗಳನ್ನ(KSRTC Mortgaging) ಅಡ ಇಡಲು ಸಿದ್ಧವಾಗಿದೆ.

ಈಗಾಗಲೇ ಬೆಂಗಳೂರಿನ ಪೀಣ್ಯಾದ ಬಸವೇಶ್ವರ ಬಸ್ ನಿಲ್ದಾಣ ಅಡವಿರಿಸಿದ (KSRTC Mortgaging) ನಿಗಮ ಇದರ ಬೆನ್ನಲ್ಲೇ, 220 ಕೋಟಿ ಸಾಲಕ್ಕಾಗಿ ಬಸವೇಶ್ವರ ಬಸ್ ನಿಲ್ದಾಣವನ್ನ ಕೆಎಸ್ಆರ್ಟಿಸಿ ಅಡಮಾನ ಇಟ್ಟಿದೆ. ಇದೇ ರೀತಿ ರಾಜ್ಯದ ಹಲವು ಬಸ್ ನಿಲ್ದಾಣ ಅಡವಿರಲು ನಿಗಮ ಸಿದ್ಧವಾಗಿದೆ. ಒಂದೊಂದೆ ಬಸ್ ನಿಲ್ದಾಣಗಳನ್ನು ಅಡವಿಟ್ಟು ಪ್ರತಿ ತಿಂಗಳ ಖರ್ಚು ನಿಭಾಯಿಸಲು ಪ್ಲ್ಯಾನ್ ಮಾಡಿದೆ.

ಕೆಎಸ್ ಆರ್ ಟಿಸಿ (KSRTC)ಯ ಈ ದುಸ್ಥಿತಿ ಹಾಗೂ ಕಟ್ಟಡಗಳನ್ನು ಅಡ ಇಡ್ತಿರೋ ಸಂಗತಿಯನ್ನು ಸತ್ವಃ ಸಾರಿಗೆ ಸಚಿವ ಶ್ರೀರಾಮುಲು ಖಚಿತಪಡಿಸಿದ್ದು, ಅಡ ಇಟ್ಟ ಎಲ್ಲ ವರಮಾನ ಸಿಬ್ಬಂದಿಗಳ ಭವಿಷ್ಯದ‌ ನಿಧಿ ಸಲುವಾಗಿದೆ. ಬಡ್ಡಿ ವಿಚಾರದ ಸಲುವಾಗಿ ಅಡಮಾನ ಇಡಲಾಗಿದೆ. ಸಿಬ್ಬಂದಿಗಳಿಗೆ ಒಂದೂವರೆ ತಿಂಗಳ ಸಂಬಳ ಬಾಕಿ ಇದೆ. ವಾರದಲ್ಲಿ ಒಂದೂವರೆ ತಿಂಗಳ ಬಾಕಿ‌ ಸಂಬಳ ಕೊಡಲು ಅಡ ಇಟ್ಟಿದ್ದೇವೆ ಎಂದು ಸಚಿವರು ಸಮರ್ಥಿಸಿಕೊಳ್ಳುತ್ತಿದ್ದಾರೆ.

ಇದಕ್ಕೆಲ್ಲ ಸರ್ಕಾರ ಬಜೆಟ್ ನಲ್ಲಿ ಅನುದಾನ ಮೀಸಲಿಡದೇ ಇರೋದೆ ಕಾರಣ ಎನ್ನಲಾಗಿದೆ. ಈ ಬಗ್ಗೆ ಅಸಮಧಾನ ವ್ಯಕ್ತಪಡಿಸಿರುವ ಸಾರಿಗೆ ನೌಕರರ ಸಂಘಟನೆಗಳ ಮುಖಂಡ ಅನಂತ್‌ಸುಬ್ಬರಾವ್, ಈ ಬಾರಿಯ ಬಜೆಟ್ ನಲ್ಲಿ ಕನಿಷ್ಠ ಎರಡು ಸಾವಿರ ಕೋಟಿಯನ್ನ ಮೀಸಲಿಡಬೇಕಿತ್ತು. ಸಾರಿಗೆ ನಿಗಮಗಳಿಗೆ (KSRTC) ಸ್ವಲ್ಪವೂ ಹಣ ಮೀಸಲಿಟ್ಟಿಲ್ಲ. ಬದಲಾಗಿ ನಮಗೆ ಕೊಡುವ ಹಣವನ್ನೇ ಸರ್ಕಾರ ಬಾಕಿ ಉಳಿಸಿಕೊಂಡಿದೆ.ಸರ್ಕಾರ ನಿಗಮಗಳಿಗೆ ಹಣ ನೀಡದೇ ಇದ್ರೆ ಎಲ್ಲ ಆಸ್ತಿ ಮಾರಿ ದಿವಾಳಿ ಬರಬೇಕಾಗುತ್ತೆ ಎಂದು ಎಚ್ಚರಿಸಿದ್ದಾರೆ.

ಆದರೆ ನಿಗಮ (KSRTC) ಅದಾಯವಿಲ್ಲದೇ ಸೊರಗುತ್ತಿದೆ. ಸಾರಿಗೆ ನಿಗಮದ ಎಲ್ಲ ಸಿಬ್ಬಂದಿಗಳು ಪ್ರತಿ ತಿಂಗಳ ಸಂಬಳಕ್ಕೆ ಪರದಾಡುವ ಸ್ಥಿತಿ ಇದೆ. ಚಾಲಕ ಮತ್ತು ನಿರ್ವಾಹಕ ಸಿಬ್ಬಂದಿ ಸಂಬಳಕ್ಕಾಗಿ ಕಾಯಬಾರದ. ಹೀಗಾಗಿ ನಿಗಮ ಈ‌ ಅಡಮಾನ ಇಡುವ ತೀರ್ಮಾನ ತೆಗೆದುಕೊಂಡಿದೆ ಎಂದು ಅಧಿಕಾರಿಯೊಬ್ಬರು ನಿಗಮ ಹಾಗೂ ಸಚಿವರ ನಿರ್ಧಾರವನ್ನು ಸಮರ್ಥಿಸಿಕೊಂಡಿದ್ದಾರೆ.‌

ಇದನ್ನೂ ಓದಿ : ತಮಿಳುನಾಡು ವಿರುದ್ಧ ಕರ್ನಾಟಕ ಗರಂ : ಮೇಕೆದಾಟು ಜಾರಿ ಸಿದ್ಧ ಎಂದ ಸಿಎಂ ಬೊಮ್ಮಾಯಿ

ಇದನ್ನೂ ಓದಿ : ACB Raid : ಬಿಡಿಎ ಭ್ರಷ್ಟಾಚಾರ : ಬೆಳ್ಳಂಬೆಳಗ್ಗೆ ಬೆಂಗಳೂರಿನ 9 ಕಡೆ ಎಸಿಬಿ ದಾಳಿ

( KSRTC Mortgaging bus stops to pay staff )

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular