ಕಸ್ಟಡಿಯಲ್ಲಿರುವ ಆರೋಪಿಯ ಬಾಯಲ್ಲಿ ಸತ್ಯ ಹೇಳಿಸೋಕೆ ಪೊಲೀಸರು ಹಿಂಸೆ ನೀಡೋದು ಎಲ್ಲರಿಗೂ ತಿಳಿದಿರುವ ವಿಚಾರವೇ. ಆದರೆ ಬೆಂಗಳೂರಿನ ಪೊಲೀಸ್ ಠಾಣೆಯೊಂದರಲ್ಲಿ (Bengaluru police) ಮಾತ್ರ ವ್ಯಕ್ತಿಗೆ ಇನ್ನಿಲ್ಲದ ಕಿರುಕುಳ ( Man tortured ) ನೀಡಲಾಗಿದೆ. ತೌಸಿಫ್ ಹಾಗೂ ಅಕ್ಬರ್ ಎಂಬವರ ಮಧ್ಯೆ ಡಿಸೆಂಬರ್ 1ರಂದು ವೈಯಕ್ತಿಕ ಕಾರಣಕ್ಕೆ ಕಿತ್ತಾಟ ನಡೆದಿತ್ತು.
ಇಬ್ಬರ ಗಲಾಟೆ ಪೊಲೀಸ್ ಠಾಣೆ ಮೆಟ್ಟಿಲೇರಿದ್ದರಿಂದ ಸ್ಥಳಕ್ಕೆ ಆಗಮಿಸಿದ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತೌಸಿಫ್ನನ್ನು ಬಂಧಿಸಿದ್ದರು. ಮೂಲಗಳ ಪ್ರಕಾರ ಪೊಲೀಸ್ ಕಸ್ಟಡಿಯಲ್ಲಿದ್ದ ತೌಸಿಫ್ಗೆ ಮೂರು ಗಂಟೆಗಳ ಕಾಲ ಇನ್ನಿಲ್ಲದ ಹಿಂಸೆ ನೀಡಲಾಗಿದೆ. ತೌಸಿಫ್ ನೀಡಿರುವ ಮಾಹಿತಿಯ ಪ್ರಕಾರ ಪೊಲೀಸರಿಂದ ಹೊಡೆತ ತಿಂದು ಹೈರಾಣಾಗಿದ್ದ ಆತ ನೀರು ಕೊಡುವಂತೆ ಕೇಳಿದ್ದಾನೆ. ಈ ವೇಳೆ ಬಾಟಲಿಯಲ್ಲಿ ಮೂತ್ರವನ್ನು ತುಂಬಿಸಿ ಕುಡಿಯಲು ಹೇಳಿದ್ದರು ಎನ್ನಲಾಗಿದೆ.ಇದಕ್ಕೆ ತೌಸಿಫ್ ಒಪ್ಪದೇ ಇದ್ದರೂ ಸಹ ಪೊಲೀಸರು ಮೂತ್ರ ಕುಡಿಯುವಂತೆ ಒತ್ತಡ ಹೇರಿದ್ದಾರೆ. ಇಷ್ಟು ಮಾತ್ರವಲ್ಲದೇ ಇದರಿಂದಾಗಿ ತನ್ನ ಗುಪ್ತಾಂಗಕ್ಕೂ ಹಾನಿಯಾಗಿದೆ ಎಂದು ತೌಸಿಫ್ ಆರೋಪ ಮಾಡಿದ್ದನೆ.
ಪ್ರಾಥಮಿಕ ತನಿಖೆಯ ವೇಳೆ ಈ ಎಲ್ಲಾ ರೀತಿಯಲ್ಲಿ ಹಿಂಸೆ ನೀಡಲಾಗಿದೆ ಎಂದು ತೌಸಿಫ್ ಆರೋಪಿಸಿದ್ದಾನೆ. ಈ ಪ್ರಕರಣದಲ್ಲಿ ಸಬ್ ಇನ್ಸಪೆಕ್ಟರ್ ಕೂಡ ಭಾಗಿಯಾಗಿದ್ದಾರೆ ಎನ್ನಲಾಗಿದೆ. ದೈಹಿಕವಾಗಿ ಹಿಂಸೆ ನೀಡಿದ್ದು ಮಾತ್ರವಲ್ಲದೇ ಠಾಣೆಯಲ್ಲಿ ತೌಸಿಫ್ಗೆ ಜಾತಿನಿಂದನೆ ಮಾಡಲಾಗಿದೆ. ಸಬ್ ಇನ್ಸ್ಪೆಕ್ಟರ್ ಒತ್ತಾಯಪೂರ್ವಕವಾಗಿ ಠಾಣೆಯಲ್ಲಿಯೇ ನನ್ನ ಗಡ್ಡ ಬೋಳಿಸಿದ್ದಾರೆ ಎಂದು ತೌಸಿಫ್ ಆರೋಪಿಸಿದ್ದಾನೆ. ಈ ಪ್ರಕರಣವನ್ನು ತನಿಖೆ ನಡೆಸಲು ಎಸಿಪಿ ಮಟ್ಟದ ಅಧಿಕಾರಿಯನ್ನು ನೇಮಿಸಲಾಗಿದೆ. ಇವರು ಪ್ರಕರಣದ ತನಿಖಾ ವರದಿಯನ್ನು ಪಶ್ಚಿಮ ಬೆಂಗಳೂರು ವಲಯದ ಡಿಸಿಪಿಗೆ ಸಲ್ಲಿಸಲಿದ್ದಾರೆ.ಸೂಕ್ತ ತನಿಖೆ ಬಳಿಕವಷ್ಟೇ ಪ್ರಕರಣದ ಸತ್ಯಾಸತ್ಯತೆ ಹೊರಬೀಳಲಿದೆ.
ಯುವಕನಿಗೆ ಮೂತ್ರ ನೆಕ್ಕಿಸಿದ ಪ್ರಕರಣ : ಪಿಎಸ್‌ಐ ಅರ್ಜುನ್‌ಗೆ ಜಾಮೀನು ನಿರಾಕರಣೆ
ಚಿಕ್ಕಮಗಳೂರು : ಪರಿಶಿಷ್ಟ ಜಾತಿಯ ಯುವಕನಿಗೆ ಠಾಣೆಯಲ್ಲಿ ಮೂತ್ರವನ್ನು ಕುಡಿಸಿದ ಆರೋಪ ಎದುರಿಸುತ್ತಿರುವ ಪಿಎಸ್‌ಐ ಅರ್ಜುನ್ ಅವರಿಗೆ ಚಿಕ್ಕಮಗಳೂರು ನಗರದ ಒಂದನೇ ಹೆಚ್ಚುವರಿ ಸೆಷನ್ಸ್ ನ್ಯಾಯಾಲಯ ಜಾಮೀನು ನೀಡಲು ನಿರಾಕರಿಸಿದೆ.
ಮೂಡಿಗೆರೆ ತಾಲೂಕಿನ ಕಿರಗುಂದದ ನಿವಾಸಿ ಪುನೀತ್ ಎಂಬಾತನನ್ನು ಪ್ರಕರಣವೊಂದರ ವಿಚಾರಣೆಯ ನೆಪದಲ್ಲಿ ಪೊಲೀಸ್ ಠಾಣೆಗೆ ಕರೆಯಿಸಿಕೊಂಡಿದ್ದರು. ಗೋಣಿಬೀಡು ಠಾಣೆಯಲ್ಲಿ ಪಿಎಸ್‌ಐ ಆಗಿದ್ದ ಅರ್ಜುನ್ ತನಗೆ ವಿಚಾರಣೆಯ ವೇಳೆಯಲ್ಲಿ ಮೂತ್ರವನ್ನು ಕುಡಿಸಿದ್ದರು ಎಂದು ಪುನಿತ್ ಆರೋಪ ಮಾಡಿದ್ದರು. ಈ ಕುರಿತು ಪ್ರಕರಣವೊಂದನ್ನು ದಾಖಲಿಸಿದ್ದರು. ಈ ಕುರಿತು ಚಿಕ್ಕಮಗಳೂರು ಜಿಲ್ಲಾ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನುಕೈಗೊಂಡಿದ್ದರು.
ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಪಿಎಸ್‌ಐ ಅರ್ಜುನ್ ಅವರನ್ನು ಬಂಧಿಸಿ ಚಿಕ್ಕಮಗಳೂರು ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿತ್ತು. ಇದೀಗ ಪ್ರಕರಣದ ವಿಚಾರಣೆ ಯನ್ನು ನಡೆಸಿ ಚಿಕ್ಕಮಗಳೂರು ಜಿಲಾ ಒಂದೇ ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶರದಾದ ಬಿ.ಪುಷ್ಪಾಂಜಲಿ ಅವರು ಮಧ್ಯಂತರ ಜಾಮೀನು ನೀಡಲು ನಿರಾಕರಿಸಿದ್ದಾರೆ.
ಅರ್ಜುನ್ ಈ ಹಿಂದೆ ಹೈಕೋರ್ಟ್‌ನಲ್ಲಿ ನಿರೀಕ್ಷಣಾ ಜಾಮೀನಿಗೆ ಅರ್ಜಿ ಸಲ್ಲಿಸಿದ್ದರೂ ಕೂಡ ಹೈಕೋರ್ಟ್ ಜಾಮೀನು ನೀಡಲು ನಿರಾಕರಿಸಿತ್ತು. ಅಲ್ಲದೇ ಚಿಕ್ಕಮಗಳೂರು ಒಂದೇ ಸೆಷನ್ಸ್ ನ್ಯಾಯಾಲಯ ಕೂಡ ಮದ್ಯಂತರ ಜಾಮೀನು ಅರ್ಜಿಯನ್ನು ತಿರಸ್ಕರಿಸಿತ್ತು.
ಇದನ್ನು ಓದಿ : Mantri Square Mall Lock : 27 ಕೋಟಿ ಆಸ್ತಿ ತೆರಿಗೆ ಬಾಕಿ : ಮಂತ್ರಿ ಮಾಲ್ ಗೆ ಮತ್ತೊಮ್ಮೆ ಬೀಗ ಭಾಗ್ಯ
ಇದನ್ನು ಓದಿ : Corona Rules Break : ಕೊರೊನಾ ರೂಲ್ಸ್ ಬ್ರೇಕ್ ಮಾಡಿದ್ರೆ ಬೀಳುತ್ತೆ ಫೈನ್ : 14 ಕೋಟಿ ದಂಡ ಸಂಗ್ರಹಿಸಿದ ಬಿಬಿಎಂಪಿ
Man tortured, made to drink urine in police custody in Bengaluru