Girl Molested : ವಿದ್ಯುತ್‌ ಮೀಟರ್‌ ರೀಡಿಂಗ್‌ಗೆ ಮನೆಗೆ ಬಂದ : 12 ವರ್ಷದ ಬಾಲಕಿಗೆ ಲೈಂಗಿಕ ದೌರ್ಜನ್ಯವೆಸಗಿದ ಕಾಮುಕ

ಭೋಪಾಲ್ : ವಿದ್ಯುತ್ ಮೀಟರ್ ರೀಡಿಂಗ್‌ ಮಾಡಲು ಮನೆಗೆ ಬಂದಿದ್ದ ಸಿಬ್ಬಂದಿಯೋರ್ವ 12 ವರ್ಷದ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ (Girl Molested) ಎಸಗಿರುವ ಘಟನೆ ಮಧ್ಯಪ್ರದೇಶದ ಹಬೀಬ್‌ಗಂಜ್ ಪ್ರದೇಶದಲ್ಲಿ ನಡೆದಿದೆ. ವಿದ್ಯುತ್‌ ಇಲಾಖೆಯ ಸಿಬ್ಬಂದಿ ( Meter Reader ) ಸೋನು ವರ್ಮಾ ವಿರುದ್ಧ ದೂರು ದಾಖಲಾಗಿದೆ.

ಬಾಲಕಿಯ ಪೋಷಕರು ಸಂಬಂಧಿಯೋರ್ವರ ಅಂತ್ಯಕ್ರೀಯೆಗೆ ತೆರಳಿದ್ದರು. ಹೀಗಾಗಿ ಬಾಲಕ ಒಬ್ಬಳೆ ಮನೆಯಲ್ಲಿದ್ದಳು. ಈ ವೇಳೆಯಲ್ಲಿ ಮನೆಗೆ ಬಂದಿದ್ದ ವಿದ್ಯುತ್‌ ಮೀಟಿಂಗ್‌ ರೀಡಿಂಗ್‌ ಮಾಡುವ ಸಿಬ್ಬಂದಿ ಬಾಲಕಿಯ ಬಳಿಯಲ್ಲಿ ಕುಡಿಯಲು ಒಂದು ಲೋಟ ನೀರು ಕೇಳಿದ್ದಾನೆ. ನಂತರ ಬಾಲಕಿ ಮತ್ತೊಂದು ಲೋಟ ನೀರು ತರಲು ತೆರಳಿದ್ದ ವೇಳೆಯಲ್ಲಿ ಮನೆಗೆ ನಿಗ್ಗಿದ ಸೋನು ವರ್ಮಾ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ್ದಾನೆ. ಘಟನೆಯಿಂದಾಗಿ ಹೆದರಿಯ ಬಾಲಕಿ ಕಿರುಚಿಕೊಂಡಿದ್ದಾಳೆ. ಈ ವೇಳೆಯಲ್ಲಿ ಅಕ್ಕಪಕ್ಕದ ಮನೆಯವರು ಓಡಿ ಬಂದಿದ್ದಾರೆ. ಕೂಡಲೇ ಸ್ಥಳಕ್ಕೆ ಆಗಮಿಸಿದ ನೆರೆ ಹೊರೆಯವರು ಸಿಬ್ಬಂದಿ ಸೋನು ವರ್ಮಾನನ್ನು ಸೆರೆ ಹಿಡಿದು ಥಳಿಸಿದ್ದಾರೆ. ನಂತರ ಆರೋಪಿಯನ್ನು ಪೊಲೀಸರಿಗೆ ಒಪ್ಪಿಸಿದ್ದಾರೆ.

ಸ್ನೇಹಿತನ ಮಗನ ಪತ್ನಿಗೆ ಲೈಂಗಿಕ ಕಿರುಕುಳ : ಆರೋಪಿ ಬಂಧನ

ಇನ್ನೊಂದು ಪ್ರಕರಣದಲ್ಲಿ ಸ್ನೇಹಿತನ ಮಗ ಯುವತಿಯೋರ್ವಳನ್ನು ವಿವಾಹವಾಗಿದ್ದ. ಹೀಗಾಗಿ ಸ್ನೇಹಿತನ ಜೊತೆ ರಾಜಿ ಪಂಚಾಯಿತಿ ಮಾಡಿಸುವ ಸಲುವಾಗಿ ಸ್ನೇಹಿತ, ಸ್ನೇಹಿತನ ಮಗ ಹಾಗೂ ಸೊಸೆ ತನ್ನ ಮನೆಗೆ ಕರೆಯಿಸಿಕೊಂಡಿದ್ದ ಆರೋಪಿ ಸ್ನೇಹಿತನ ಸೊಸೆಯ ಮೇಲೆಯೇ ಅತ್ಯಾಚಾರವೆಸಗಿರುವ ಘಟನೆ ತಿರುವನಂತಪುರದಲ್ಲಿ ನಡೆದಿದೆ. ಯುವಾವ್‌ ಎಂಬಾತನ ಸ್ನೇಹಿತನ ಮಗ ಪೋಷಕರಿಗೆ ತಿಳಿಸದೇ ಮದುವೆಯಾಗಿದ್ದ. ಇದರಿಂದ ಮನನೊಂದ ತಂದೆ ತನ್ನ ಸ್ನೇಹಿತನ ಬಳಿಯಲ್ಲಿ ವಿಚಾರವನ್ನು ತಿಳಿಸಿದ್ದಾನೆ. ಹೀಗಾಗಿ ರಾಜಿ ಪಂಚಾಯಿತಿ ಮಾಡಿಸುವುದಾಗಿ ಹೇಳಿ ಸ್ನೇಹಿತ ಹಾಗೂ ಆತನ ಪತ್ನಿ ಮತ್ತು ಆತನ ಮಗ ಹಾಗೂ ಸೊಸೆಯನ್ನು ತನ್ನ ಮನೆಗೆ ಕರೆಯಿಸಿಕೊಂಡಿದ್ದ. ರಾಜಿ ಪಂಚಾಯಿತಿ ನಡೆಸಿದ ಬಳಿಕ ಮಗ, ಸೊಸೆಯನ್ನು ತನ್ನ ಮನೆಯಲ್ಲಿ ಇರಿಸಿಕೊಂಡು ಬುದ್ದಿ ಮಾತು ಹೇಳುವುದಾಗಿ ನಂಬಿಸಿದ್ದಾನೆ. ನಂತರ ಮಗ, ಸೊಸೆಯನ್ನು ಬಿಟ್ಟು ಸ್ನೇಹಿತ ತನ್ನ ಮನೆಗೆ ತೆರಳಿದ್ದಾನೆ.

ಸ್ನೇಹಿತನ ಮಗ ಕೆಲಸದ ನಿಮಿತ್ತ ಮನೆಯಿಂದ ಹೊರಗೆ ಹೋದ ಸಂದರ್ಭದಲ್ಲಿ ಯುವಾವ್‌ ಎಂಬಾತ ಯುವತಿಯ ಮೇಲೆ ಅತ್ಯಾಚಾರವೆಸಗಿದ್ದಾನೆ. ಈ ವಿಚಾರ ಆಕೆಯ ಪತಿಗೆ ತಿಳಿಯುತ್ತಲೇ ಪೊಲೀಸ್‌ ಠಾಣೆಗೆ ತೆರಳಿ ದೂರು ನೀಡಿದ್ದಾರೆ. ಇದೀಗ ಪ್ರಕರಣ ದಾಖಲು ಮಾಡಿಕೊಂಡಿರುವ ಪೊಲೀಸರು ಆರೋಪಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದಾರೆ.

ಇದನ್ನೂ ಓದಿ : School girl : ಸಿನಿಮಾದಲ್ಲಿ ನಟಿಸುವ ಆಮಿಷ : ಶಾಲಾ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಶಿಕ್ಷಕನ ಬಂಧನ

ಇದನ್ನೂ ಓದಿ : School Close Karnataka : ಶಾಲೆಗಳ ಮೇಲೆ‌ ಮತ್ತೆ ಕೊರೊನಾ ಕರಿನೆರಳು: ಮತ್ತೆ ಬಾಗಿಲು‌ಮುಚ್ಚಲಿದೆ ಶಿಕ್ಷಣ ಸಂಸ್ಥೆಗಳು ?!

Home Alone 12 Years Girl Molested by electricity Meter Reader in MPS Bhopal

Comments are closed.