ಬೆಂಗಳೂರು : ರೂಪದರ್ಶಿಯ ಖಾಸಗಿ ವಿಡಿಯೋ ಇಟ್ಟುಕೊಂಡು ಪ್ರಿಯಕರನೇ ಬ್ಲಾಕ್ ಮೇಲ್ ಮಾಡಿದ್ದು, ಪ್ರಿಯಕರ ಹಾಗೂ ಆತನ ಸ್ನೇಹಿತ ಸೇರಿಕೊಂಡು 16 ಬಾರಿ ಅತ್ಯಾಚಾರವೆಸಗಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

ಬೆಂಗಳೂರಿನಲ್ಲಿ ವಾಸವಿದ್ದ ಯುವತಿ ಮಾಡೆಲ್ ಆಗಿ ಗುರುತಿಸಿ ಕೊಂಡಿದ್ದಳು. ಫೇಸ್ ಬುಕ್ ನಲ್ಲಿ ಪ್ರಮೋದ್ ಎಂಬಾತನ ಪರಿಚಯ ವಾಗಿತ್ತು. ಪರಿಚಯ ಪ್ರೇಮಕ್ಕೆ ತಿರುಗಿ ಮದುವೆಯಾಗುವುದಾಗಿ ನಂಬಿಸಿದ್ದಾನೆ. ಒಂದು ದಿನ ಯುವತಿಗೆ ಮತ್ತು ಬರುವ ಔಷದ ಬೆರೆಸಿದ ಜ್ಯೂಸ್ ಕುಡಿಸಿದ್ದಾನೆ. ಯುವತಿ ನಿದ್ದೆಗೆ ಜಾರುತ್ತಿದ್ದಂತೆಯೇ ಯುವತಿಯ ಮೇಲೆ ಅತ್ಯಾಚಾರವೆಸಗಿದ್ದಾನೆ.

ಅಷ್ಟೇ ಅಲ್ಲ ಯುವತಿಯ ಖಾಸಗಿ ಪೋಟೋ ಹಾಗೂ ವಿಡಿಯೋ ವನ್ನು ಸೆರೆ ಹಿಡಿದು ಸಮಾಜಿಕ ಜಾಲತಾಣ ದಲ್ಲಿ ಹರಿಬಿಡುವುದಾಗಿ ಬೆದರಿಸಿದ್ದಾನೆ. ನಂತರದಲ್ಲಿ ಯುವತಿಯ ಮೇಲೆ ನಿರಂತರವಾಗಿ ಅತ್ಯಾಚಾರವೆಸ ಗಿದ್ದು, ಹೇಳಿದಂತೆ ಕೇಳದೇ ಇದ್ರೆ ತಂದೆ ತಾಯಿಗೂ ವಿಡಿಯೋ ಕಳುಹಿಸುತ್ತೇನೆಂದು ಬೆದರಿಕೆ ಹಾಕಿದ್ದಾನೆ.
ಇನ್ನು ಪ್ರಮೋದ್ ಮಾತ್ರವಲ್ಲ ಆತನ ಸ್ನೇಹಿತ ಧನಂಜಯನನ್ನೂ ಸ್ಥಳಕ್ಕೆ ಮರೆಯಿಸಿ ಆತನಿಂದಲೂ ಅತ್ಯಾಚಾರವೆಸಗಿದ್ದಾನೆ. ಸುಮಾರು 16 ಬಾರಿ ತನ್ನ ಮೇಲೆ ಲೈಂಗಿಕ ದೌರ್ಜನ್ಯವೆಸಗಲಾಗಿದೆ. ಅಲ್ಲದೇ ತನಗೆ ನಿರಂತರವಾಗಿ ಕಿರುಕುಳ ನೀಡಲಾಗಿದೆ ಎಂದು ರೂಪದರ್ಶಿ ಯಶವಂತಪುರ ಠಾಣೆಗೆ ನೀಡಿದ ದೂರಿನಲ್ಲಿ ಉಲ್ಲೇಖಿಸಿದ್ದಾಳೆ. ಪ್ರಕರಣ ದಾಖಲು ಮಾಡಿಕೊಂಡಿರುವ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.