Pilot-free Metro Train : ಮೆಟ್ರೋ ಪ್ರಯಾಣಿಕರಿಗೆ ಸಿಹಿಸುದ್ದಿ: ಇನ್ಮುಂದೇ ಸಂಚರಿಸಲಿದೆ ಪೈಲಟ್ ರಹಿತ ಮೆಟ್ರೋ ರೈಲು

ಬೆಂಗಳೂರು : ದಿನದಿಂದ ದಿನಕ್ಕೆ ನಮ್ಮ ಮೆಟ್ರೋ ಬೆಂಗಳೂರಿನ ಜನರ ಪಾಲಿಗೆ ಆಪ್ತವಾಗುತ್ತಿದೆ. ಹೀಗಾಗಿ ಬೆಂಗಳೂರಿನ ಜನರಿಗೆ ಸ್ನೇಹಿಯಾಗಿರುವ ನಮ್ಮ ಮೆಟ್ರೋ ಯೋಜನೆಯನ್ನು ಮತ್ತಷ್ಟು ವಿಸ್ತರಿಸಲು ಸರ್ಕಾರ ಸಿದ್ಧತೆ ನಡೆಸಿದೆ.‌ ಇದರ ಮಧ್ಯೆ ಇದುವರೆಗೂ ಪೈಲಟ್ ಸಹಿತವಾಗಿ ಚಲಿಸುತ್ತಿದ್ದ ನಮ್ಮ‌ಮೆಟ್ರೋವನ್ನು ಇನ್ಮುಂದೆ ಪೈಲಟ್ ರಹಿತವಾಗಿ (Pilot-free Metro Train) ಚಲಿಸಲು ಸಿದ್ಧವಾಗುತ್ತಿದೆ.

ಹೌದು ಇದುವರೆಗೂ ಬೆಂಗಳೂರಿನಲ್ಲಿ ಸಂಚರಿಸಿದ ನಮ್ಮ‌ ಮೆಟ್ರೊ ರೈಲುಗಳಿಗೆ ಪೈಲೆಟ್ ಇರ್ತಿದ್ದರು. ಆದರೆ ಇನ್ಮುಂದೆ ಬೆಂಗಳೂರಿನಲ್ಲಿ ಚಾಲಕ ರಹಿತ ಮೆಟ್ರೋ ರೈಲು ಟ್ರಾಕ್ ಮೇಲೆ ಇಳಿಯಲಿದೆ. ಈ ರೈಲುಗಳನ್ನು ನಿಯಂತ್ರಣ ಕೊಠಡಿಯಿಂದ್ಲೇ ನಿಯಂತ್ರಿಸುವ ವ್ಯವಸ್ಥೆಯೂ ಜಾರಿಗೆ ಬರಲಿದೆ. ಮೆಟ್ರೋ ಚಾಲಕನ ತಪ್ಪು ಗಳಿಂದ ನಗರದಲ್ಲಿ ಆಗಾಗ ಟ್ರೇನ್ ಗಳು ಸ್ಥಗಿತವಾಗ್ತಿತ್ತು. ಇದೀಗ ಚಾಲಕ ರಹಿತ ಮೆಟ್ರೋ ರೈಲು ಓಡಿಸಲು ನಮ್ಮ ಮೆಟ್ರೋ ನಿಗಮ ತಯಾರಿ ನಡೆಸಿದ್ದು, ಪೈಲೆಟ್ ರಹಿತ ನಮ್ಮ ಮೆಟ್ರೋ ಕಾರ್ಯಾಚರಣೆಗೊಳಿಸಲು ಸಕಲ ಸಿದ್ದತೆ ನಡೆದಿದೆ.

ಬೇರೆ ದೇಶಗಳಲ್ಲಿ ಚಾಲಕನಿಲ್ಲದೆ ಸ್ವಯಂಚಾಲಿತವಾಗಿ ಚಲಿಸುವ ರೈಲು ವ್ಯವಸ್ಥೆ ಇದೆ. ಕರ್ನಾಟಕದಲ್ಲಿ ಅಧಿಕಾರಿಗಳು ಹಾಗೂ ಸಿಬ್ಬಂದಿಗೆ ಹೆಚ್ಚು ಅನುಭವವಿರದ ಕಾರಣ ಈ ವ್ಯವಸ್ಥೆ ಜಾರಿಗೆ ತಂದಿರಲಿಲ್ಲ. ಹೀಗಾಗಿ ಈಗ ಎರಡನೇ ಹಂತದಲ್ಲಿ ಚಾಲಕ ರಹಿತ ಮೆಟ್ರೋ ಚಾಲನೆ ಅನುಷ್ಠಾನಕ್ಕೆ ತರಲಾಗುತ್ತಿದ್ದು, ಗೊಟ್ಟಿಗೆರೆ – ನಾಗವಾರ ಮಾರ್ಗದಲ್ಲಿ ಚಾಲಕ ರಹಿತ ರೈಲು ಓಡಿಸಲು ಪ್ಲಾನ್ ನಡೆದಿದೆ. ಕಮ್ಯುನಿಕೇಷನ್‌ ಬೇಸ್ಡ್‌ ಟ್ರೈನ್‌ ಕಂಟ್ರೋಲ್‌ ಸಿಗ್ನಲಿಂಗ್‌ ಸಿಸ್ಟಮ್‌ ತಂತ್ರಜ್ಞಾನ ಅಳವಡಿಸಲಾಗುತ್ತಿದ್ದು, ಇದು ಚಾಲಕ ರಹಿತ ವ್ಯವಸ್ಥೆಗೆ ರೂಪಿಸಿರುವ ತಂತ್ರಜ್ಞಾನ ವಾಗಿದೆ. ಇದರಿಂದ ನಿಯಂತ್ರಣ ಕೊಠಡಿಯಿಂದಲೇ ಮೆಟ್ರೋ ಚಾಲನೆ ನಿರ್ವಹಣೆ ಸಾಧ್ಯವಿದೆ.

ಪೈಲೆಟ್ ರಹಿತ ಮೆಟ್ರೋ ಲಾಭಗಳೇನು? ಅನ್ನೋದನ್ನು ಗಮನಿಸೋದಾದರೇ, ಹೊಸ ತಂತ್ರಜ್ಞಾನದಿಂದ ಚಾಲಕರ ತಪ್ಪುಗಳೇ ಇಲ್ಲದಂತೆ ಮಾಡಬಹುದು. ಚಾಲಕರು ರೈಲು ಚಲಾಯಿಸುವಾಗ ಸಣ್ಣ ತಪ್ಪು ಮಾಡಿದರೂ ಸಂಚಾರ ಸ್ಥಗಿತಗೊಳ್ಳುತ್ತಿತ್ತು.ನಗರದ ಹಲವು ಮೆಟ್ರೋ ಕಡೆ ನಿಲ್ದಾಣಕ್ಕೆ ಪ್ರವೇಶಿಸುವ ಮಾರ್ಗದಲ್ಲಿ ಸಂಕೀರ್ಣವಾದ ತಿರುವು ಇದೆ.ಹಲವು ಬಾರಿ ಈ ತಿರುವಿನಲ್ಲಿ ನಿಗದಿಪಡಿಸಿದ್ದಕ್ಕಿಂತ ಹೆಚ್ಚು ವೇಗವಾಗಿ ರೈಲು ಚಲಾಯಿಸಿದ್ದರಿಂದ ರೈಲು ಸಂಚಾರ ಸ್ಥಗಿತಗೊಂಡು ಪ್ರಯಾಣಿಕರು ಪರದಾಡಿದ್ದರು.

ಈಗ ಎರಡನೇ ಹಂತದ ಯೋಜನೆಯ ಮಾರ್ಗದಲ್ಲಿ ಹಲವಾರು ತಿರುವುಗಳಿವೆ.ಇಂತಹ ತಿರುವುಗಳಲ್ಲಿ ಬಹಳ ಜಾಗರೂಕತೆಯಿಂದ ರೈಲು ಚಲಾಯಿಸಬೇಕಿದೆ. ಇದು ಮಾತ್ರವಲ್ಲದೆ ರೈಲು ಕಾರ್ಯಾಚರಣೆಯ ಕೆಲಸದಲ್ಲಿ ಸಣ್ಣ ತಪ್ಪುಗಳನ್ನು ಮಾಡಿದರೂ ರೈಲು ಸಂಚಾರಕ್ಕೆ‌ಅಡ್ಡಿಯಾಗುತ್ತದೆ. ಇದರ ಬದಲು ಸ್ವಯಂಚಾಲಿತ ತಂತ್ರಜ್ಞಾನವನ್ನು ಬಳಸಿಕೊಂಡರೆ ಮಾನವ ತಪ್ಪುಗಳನ್ನು ಶೂನ್ಯಗೊಳಿಸಬಹುದು ಎಂಬ ಕಾರಣಕ್ಕೆ ನಮ್ಮ ಮೆಟ್ರೊ ಪೈಲಟ್ ರಹಿತ ಚಾಲನೆಗೆ ಸಿದ್ಧವಾಗಿದ್ದು, ಎಷ್ಟರ ಮಟ್ಟಿಗೆ ಯಶಸ್ವಿಯಾಗಲಿದೆ ಅನ್ನೋದನ್ನು ಕಾದು ನೋಡಬೇಕಿದೆ.

ಇದನ್ನೂ ಓದಿ : ಖಿನ್ನತೆಯಿಂದ ಬಳಲುತ್ತಿದ್ದ ವೈದ್ಯಕೀಯ ವಿದ್ಯಾರ್ಥಿ : ಮದುವೆಯಾಗಿ ಮೂರೇ ತಿಂಗಳಿಗೆ ಆತ್ಮಹತ್ಯೆ

ಇದನ್ನೂ ಓದಿ : ರಸ್ತೆಗಿಳಿಯಲಿದೆ ವಿಶೇಷಚೇತನ ಸ್ನೇಹಿ ಬಸ್ : ಹೊಸ ಪ್ರಯೋಗಕ್ಕೆ ಸಜ್ಜಾದ ಬಿಎಂಟಿಸಿ

Pilot-free Metro Train Good News for Namma Metro Passengers

Comments are closed.