ಬೆಂಗಳೂರು : ಕನ್ನಡದ ವರನಟ ಡಾ.ರಾಜ್ ಕುಮಾರ್ ಪುತ್ಥಳಿಯೊಂದು ಬಿಬಿಎಂಪಿ ಆವರಣದಲ್ಲಿ ರಾರಾಜಿಸುತ್ತಿದೆ. ಈಗ ತಂದೆಗೆ ಸಾಥ್ ನೀಡಲು ಡಾ.ರಾಜ್ ಪ್ರೀತಿಯ ಕೊನೆಯ ಪುತ್ರ ಪುನೀತ್ ರಾಜ್ ಕುಮಾರ್ ಕೂಡ ಸಾಥ್ ನೀಡಿದ್ದಾರೆ. ಹೌದು ಕನ್ನಡದ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರ ಕಂಚಿನ ಪುತ್ಥಳಿ (Puneeth Rajkumar statue ) ಬಿಬಿಎಂಪಿ ಆವರಣದಲ್ಲಿ ಅನಾವರಣಗೊಂಡಿದ್ದು, ಸ್ವತಃ ಪುನೀತ್ ಅಭಿಮಾನಿಯಾಗಿರೋ ಸಿಎಂ ಬೊಮ್ಮಾಯಿ ಪುತ್ಥಳಿ ಅನಾವರಣಗೊಳಿಸಿದ್ದಾರೆ.

ಪುನೀತ್ ರಾಜ್ ಕುಮಾರ್ (Puneeth Rajkumar) ಅಕ್ಟೋಬರ್ 29 ರಂದು ತೀವ್ರ ಹೃದಯಾಘಾತದಿಂದ ನಿಧನರಾದರು. ಅಂದಿನಿಂದ ಇಂದಿನವರೆಗೂ ರಾಜ್ಯದ ಹಲವೆಡೆ ಪುನೀತ್ ರಾಜ್ ಕುಮಾರ್ (Puneeth Rajkumar) ಪುತ್ಥಳಿ ನಿರ್ಮಾಣ ಸೇರಿದಂತೆ ಹಲವು ಪುನೀತ್ ಸ್ಮರಣೆ ಕಾರ್ಯಕ್ರಮಗಳು ನಡೆಯುತ್ತಿವೆ.ಇದರ ಮಧ್ಯೆಯೇ ಬೃಹತ ಬೆಂಗಳೂರು ಮಹಾನಗರ ಪಾಲಿಕೆ ಯ ಉದ್ಯೋಗಿಗಳ ಸಂಘ ಪುನೀತ್ ರಾಜ್ ಕುಮಾರ್ (Puneeth Rajkumar) ಪುತ್ಥಳಿ ಅನಾವರಣಕ್ಕೆ ನಿರ್ಧರಿಸಿತ್ತು. ಇದಕ್ಕೆ ಬಿಬಿಎಂಪಿ ಹಾಗೂ ಸರ್ಕಾರದ ಅನುಮತಿ ಸಿಕ್ಕಿದ್ದರಿಂದ ರವಿವಾರ ನಡೆದ ಅದ್ದೂರಿ ಸಮಾರಂಭದಲ್ಲಿ ಸಿಎಂ ಬೊಮ್ಮಾಯಿ ನಾಲ್ಕು ಅಡಿ ಎತ್ತರದ ಪುನೀತ್ ಕಂಚಿನ ಪ್ರತಿಮೆಯನ್ನು ಅನಾವರಣಗೊಳಿಸಿದ್ದಾರೆ.

ಈ ಸಮಾರಂಭದಲ್ಲಿ ನಟ ಪುನೀತ್ ರಾಜ್ ಕುಮಾರ್ ಪತ್ನಿ ಅಶ್ವಿನಿ ಪುನೀತ್ ರಾಜ್ ಕುಮಾರ್, ರಾಘವೇಂದ್ರ ರಾಜ್ ಕುಮಾರ್,ದೊರೈ ಭಗವಾನ್,ನಟಿ ತಾರಾ ಸೇರಿದಂತೆ ಹಲವು ಚಿತ್ರರಂಗದ ಗಣ್ಯರು ಪಾಲ್ಗೊಂಡಿದ್ದರು. ಪುತ್ಥಳಿ ಅನಾವರಣ ಸಮಾರಂಭಕ್ಕೆ ಹಿರಿಯ ನಟ ಹಾಗೂ ಅಪ್ಪು ಸಹೋದರ ಶಿವಣ್ಣ ಗೈರಾಗಿದ್ದರು. ಇವರನ್ನು ಹೊರತು ಪಡಿಸಿ ಉಳಿದ ಡಾ.ರಾಜ್ ಕುಟುಂಬದ ಸದಸ್ಯರು ಒಂದೇ ಬಸ್ ನಲ್ಲಿ ಪುನೀತ್ ಪುತ್ಥಳಿ ಅನಾವರಣಕ್ಕೆ ಆಗಮಿಸಿದ್ದರು.

ಈ ವೇಳೆ ಮಾತನಾಡಿದ ರಾಘವೇಂದ್ರ ರಾಜ್ ಕುಮಾರ್ ಪುನೀತ್ ಕೇವಲ ನಮ್ಮ ಮನೆ ಮಗ ಅಲ್ಲ. ನಿಮ್ಮೆಲ್ಲರ ಮನೆ ಮಗ. ಅಪ್ಪಾಜಿ ತೀರಿಕೊಂಡಾಗ ಜನಸಾಗರ ಅಂದುಕೊಂಡ್ವಿ. ಅದರೆ ಈಗ ಪುನೀತ್ ರಾಜ್ ಕುಮಾರ್ ಎಲ್ಲದಕ್ಕಿಂತ ಹೆಚ್ಚು ಜನಸಾಗರವನ್ನು ತೋರಿಸಿ ಹೋಗಿದ್ದಾನೆ. ಇದೆಲ್ಲದಕ್ಕಿಂತ ಬಿಬಿಎಂಪಿ ಆವರಣದಲ್ಲಿ ಡಾ.ರಾಜ್ ಕುಮಾರ್ ಪುತ್ಥಳಿಯನ್ನು ನನ್ನ ತಮ್ಮ ಪುನೀತ್ ಅನಾವರಣಮಾಡಿ ಹೋಗಿದ್ದ. ಆದರೆ ಈಗ ಅವನ ಪುತ್ಥಳಿಯನ್ನು ನಾವು ಅನಾವರಣ ಮಾಡುತ್ತಿದ್ದೇವೆ ಎಂದು ದುಃಖದಿಂದ ನೆನಪಿಸಿಕೊಂಡಿದ್ದಾರೆ. ಇನ್ನು ಕಾರ್ಯಕ್ರಮದಲ್ಲಿ ಮಾತನಾಡಿದ ಸಿಎಂ ಬೊಮ್ಮಾಯಿ ಸದ್ಯವೇ ಭಾವಪೂರ್ಣ ಕಾರ್ಯಕ್ರಮದಲ್ಲಿ ಪುನೀತ್ ಗೆ ಕರ್ನಾಟಕ ರತ್ನ ಪ್ರಶಸ್ತಿ ಪ್ರಧಾನ ಮಾಡಲಾಗುವುದು ಎಂದಿದ್ದಾರೆ.
ಮುಖ್ಯಮಂತ್ರಿ @BSBommai ಅವರು ಇಂದು ಬೆಂಗಳೂರಿನಲ್ಲಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ನೌಕರರ ಕನ್ನಡ ಸಂಘ ಆಯೋಜಿಸಿದ್ದ ಪುನೀತ್ ರಾಜ್ಕುಮಾರ್ ಪುತ್ಥಳಿ ಅನಾವರಣ ಹಾಗೂ ಗಂಧದ ಗುಡಿ ಉದ್ಯಾನವನವನ್ನು ಉದ್ಘಾಟಿಸಿದರು. ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದವರಿಗೆ ಪುನೀತ್ ರಾಜ್ಕುಮಾರ್ ಪ್ರಶಸ್ತಿ ಪ್ರದಾನ ಮಾಡಿದರು.
— CM of Karnataka (@CMofKarnataka) March 27, 2022
1/2 pic.twitter.com/lTi3EOvHQR
ಇದನ್ನೂ ಓದಿ : ಪುನೀತ್ ನಿವಾಸಕ್ಕೆ ಸಂಜಯ್ ದತ್ : ಡಾ.ರಾಜ್ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ ಕೆಜಿಎಫ್-2 ವಿಲನ್
ಇದನ್ನೂ ಓದಿ : ಆರ್‌ಆರ್‌ಆರ್‌ಗಾಗಿ ಬಲಿಯಾಗುತ್ತಾ ಜೇಮ್ಸ್ ಚಿತ್ರ : ಖಡಕ್ ಎಚ್ಚರಿಕೆ ಕೊಟ್ಟ ಕರವೇ
Puneeth Rajkumar statue inaugurated CM Basavaraj Bommai in BBMP