ಬೆಂಗಳೂರು : Siddaramaiah inspected the rain damage : ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಭಾನುವಾರ ಸುರಿದ ಭಾರೀ ಮಳೆಯಿಂದಾಗಿ ಜನಜೀವನ ಸಂಪೂರ್ಣ ಅಸ್ತವ್ಯಸ್ತವಾಗಿದೆ. ಅದರಲ್ಲೂ ವಿಶೇಷವಾಗಿ ಬೆಳ್ಳಂದೂರು ಹಾಗೂ ಮಹದೇವಪುರ ಭಾಗದಲ್ಲಿ ನೆರೆಹಾನಿ ವಿಪರೀತ ಮಟ್ಟದಲ್ಲಿ ಉಂಟಾಗಿದೆ. ಇಂದು ವಿರೋಧ ಪಕ್ಷದ ನಾಯಕ ಹಾಗೂ ಮಾಜಿ ಸಿಎಂ ಸಿದ್ದರಾಮಯ್ಯ ಬೆಂಗಳೂರಿನ ನೆರೆಹಾನಿ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ವರುಣನ ಆರ್ಭಟದಿಂದ ಸಂಪೂರ್ಣ ಹಾನಿಗೊಳಗಾದ ಸ್ಥಳಗಳ ವೀಕ್ಷಣೆಗೆಂದು ಬಂದ ಸಿದ್ದರಾಮಯ್ಯ ಬೆಳ್ಳಂದೂರು ರಿಂಗ್ ರಸ್ತೆಯಲ್ಲಿ ಜೀವರಕ್ಷಕ ಬೋಟ್ ಮೂಲಕ ಪ್ರಯಾಣ ಮಾಡುವ ಮೂಲಕ ವೀಕ್ಷಣೆ ಮಾಡಿದರು. ರಿಂಗ್ ರಸ್ತೆಯಲ್ಲಿರುವ ಎಕೋ ಸ್ಪೇಸ್ ಬಡಾವಣೆಗೆ ತೆರಳಿದ ಸಿದ್ದರಾಮಯ್ಯ ಅಲ್ಲಿನ ಜನರ ಕಷ್ಟಗಳನ್ನು ಆಲಿಸಿದ್ದಾರೆ.
ಬೆಂಗಳೂರಿನಲ್ಲಿರುವ ಉಂಟಾಗಿರುವ ಈ ಪರಿಸ್ಥಿತಿಗೆ ಹಿಂದಿನ ಕಾಂಗ್ರೆಸ್ ಸರ್ಕಾರವೇ ಕಾರಣ ಎಂಬುದು ಬಿಜೆಪಿಯ ಆರೋಪವಾಗಿದೆ. ಸಿದ್ದರಾಮಯ್ಯ ಸರ್ಕಾರದ ಅವಧಿಯಲ್ಲಿ ಒತ್ತುವರಿಗಳನ್ನು ಮಾಡಿದ್ದ ಕಾರಣಕ್ಕೆ ಇಂದು ಬೆಂಗಳೂರಿನಲ್ಲಿ ನೆರೆ ಹಾನಿ ಸಂಭವಿಸಿದೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ನೇರ ಆರೋಪ ಮಾಡಿದ್ದರು. ಈ ಬೆನ್ನಲ್ಲೇ ಇಂದು ಸಿದ್ದರಾಮಯ್ಯ ನೆರೆ ಹಾನಿ ಪ್ರದೇಶವನ್ನು ವೀಕ್ಷಿಸಿದ್ದು ಈ ಬಗ್ಗೆ ಅಧಿವೇಶನದಲ್ಲಿ ರಾಜ್ಯ ಸರ್ಕಾರವನ್ನು ತರಾಟೆಗೆ ತೆಗೆದುಕೊಳ್ಳುವ ಸಾಧ್ಯತೆ ಇದೆ.
ಭಾನುವಾರದಂದು ರಾಜಧಾನಿ ಬೆಂಗಳೂರಿನಲ್ಲಿ ವರುಣಾರ್ಭಟ ಜೋರಾಗಿತ್ತು. ಮಹದೇವಪುರ ಹಾಗೂ ಬೆಳ್ಳಂದೂರು ವ್ಯಾಪ್ತಿಯಲ್ಲಿ ಭಾರೀ ಪ್ರಮಾಣದಲ್ಲಿ ಹಾನಿ ಉಂಟಾಗಿದೆ. ಚಿಕ್ಕ ಚಿಕ್ಕ ಮನೆಗಳಿಂದ ಹಿಡಿದು ವಿಲ್ಲಾಗಳಿಗೂ ನೀರು ನುಗ್ಗಿದ್ದು ಅವಾಂತರವೇ ಸೃಷ್ಟಿಯಾಗಿದೆ.
ಇದನ್ನೂ ಓದಿ : BBMP’s work in rain damage : ರಾಜ್ಯ ರಾಜಧಾನಿಯಲ್ಲಿ ವರುಣನ ಅವಾಂತರ : ನೆರೆ ಸಂತ್ರಸ್ತರ ಕರೆಗಿಲ್ಲ ಬಿಬಿಎಂಪಿ ಸ್ಪಂದನೆ
ಇದನ್ನೂ ಓದಿ : NEET UG Result 2022 : ನೀಟ್ ಯುಜಿ ಪರೀಕ್ಷಾ 2022 ಪ್ರಕಟ ; ರಾಜಸ್ಥಾನದ ತನಿಷ್ಕಾಗೆ 99.99% ಅಂಕ ಅಗ್ರಸ್ಥಾನ
Siddaramaiah inspected the rain damage in the state capital: