Congress attack On Ministers : ಕಾಣೆಯಾಗಿದ್ದಾರೆ ಸಚಿವರು, ಬಿಜೆಪಿ ಕಾಲೆಳೆದ ‘ಕೈ’

ಬೆಂಗಳೂರು : Congress attack On Ministers  ರಣಮಳೆಯಲ್ಲಿ ಬೆಂಗಳೂರು ಅಕ್ಷರಶಃ ತತ್ತರಿಸಿ ಹೋಗಿದೆ. ಇದೇ ಹೊತ್ತಲ್ಲಿ ರಾಜ್ಯ ಕಾಂಗ್ರೆಸ್ ಘಟಕ ಟ್ವೀಟ್ ಮೂಲಕ ಬಿಜೆಪಿ ಸರ್ಕಾರದ ವಿರುದ್ಧ, ಬೆಂಗಳೂರನ್ನ ಪ್ರತಿನಿಧಿಸುವ ಜನಪ್ರತಿನಿಧಿಗಳು ಹಾಗೂ ಸಚಿವರ ವಿರುದ್ಧ ಕುಟುಕಿದೆ

ಸರಣಿ ಟ್ವೀಟ್ ಮಾಡಿರೋ ರಾಜ್ಯ ಕಾಂಗ್ರೆಸ್ ಘಟಕ ತೋಟಗಾರಿಕೆ ಸಚಿವ ಮುನಿರತ್ನ, ಉನ್ನತ ಶಿಕ್ಷಣ ಸಚಿವ ಅಶ್ವತ್ಥ್ ನಾರಾಯಣ, ನಗರಾಭಿವೃದ್ಧ ಸಚಿವ ಭೈರತಿ ಬಸವರಾಜು, ಅಬಕಾರಿ ಸಚಿವ ಕೆ.ಗೋಪಾಲಯ್ಯ, ವಸತಿ ಸಚಿವ ವಿ.ಸೋಮಣ್ಣ ಸಹಕಾರ ಸಚಿವ ಎಸ್.ಟಿ.ಸೋಮಶೇಖರ್, ಕಂದಾಯ ಸಚಿವ ಆರ್. ಅಶೋಕ್, ಗೃಹ ಸಚಿವ ಆರಗ ಜ್ಞಾನೇಂದ್ರ ಮತ್ತು  ಬೆಂಗಳೂರು ದಕ್ಷಿಣ ಕ್ಷೇತ್ರದ ಸಂಸದ ತೇಜಸ್ವಿ ಸೂರ್ಯ ವಿರುದ್ಧ ಸರಣಿ ಟ್ವೀಟ್ ಮಾಡಿದೆ. ಜನಪ್ರತಿನಿಧಿಗಳು ಕಾಣೆಯಾಗಿದ್ದಾರೆ ಅಂತಾ ಕುಟುಕಿದೆ.

“ಆರಗ ಜ್ಞಾನೇಂದ್ರಗೆ ಟಾಂಗ್ : ಕಳೆದ ಒಂದು ವಾರದಿಂದ ಮಳೆಯಲ್ಲಿ ಜನತೆ ಮುಳುಗಲು ಶುರುವಾದಾಗಿನಿಂದ ರಾಜ್ಯದ ಗೃಹ ಸಚಿವರು ನೆರೆ ಪೀಡಿತ ಪ್ರದೇಶದಲ್ಲಾಗಲಿ, ಬೆಂಗಳೂರಿನಲ್ಲಾಗಲಿ, ವಿಧಾನಸೌಧದಲ್ಲಾಗಲಿ, ಕಾಣಿಸಲಿಲ್ಲ, ಸ್ವಕ್ಷೇತ್ರದಲ್ಲಿ ಠಿಕಾಣಿ ಹೂಡಿರುವ ಆರಗ ಜ್ಞಾನೇಂದ್ರ ಅವರು ಗೃಹಚಿವರಾಗಿ ಕೆಲಸ ಮಾಡಲು ಆರಂಭಿಸುವುದು ಯಾವಾಗ..?” ಹೀಗಂತಾ ಟ್ವೀಟ್ ಮೂಲಕ ಟಾಂಗ್ ಕೊಟ್ಟಿದೆ,

ಆರ್.ಅಶೋಕ್ ಗೆ ಪಂಚ್ : “ಬೆಂಗಳೂರಿನ ಜನರು ಕೊಟ್ಟ ಅಧಿಕಾರವನ್ನ ಅನುಭವಿಸುತ್ತಿರುವ ಸಚಿವ ಆರ್. ಅಶೋಕ್ ಅವರು ಯಾವ ಬಡಾವಣೆ, ಗಲ್ಲಿಗಳಲ್ಲೂ ಕಾಣಿಸಿ ಕೊಳ್ಳಲಿಲ್ಲ, ಜನತೆಯ ನೆರವಿಗೆ ನಿಂತಿದ್ದು ಕಾಣಲಿಲ್ಲ, ಜನರಿಗೆ ಕಷ್ಟದ ಸಮಯವೆಂದರೆ ಬಿಜೆಪಿಗೆ ವಿಶ್ರಾಂತಿಯ ಸಮಯ, ಮಳೆ ಮುಗಿದ ನಂತರ ಹಿಜಾಬ್, ಹಲಾಲ್ ಗಳಿಗೆ ಕ್ರಿಯಾಶೀಲರಾಗುತ್ತಾರೆ.” ಹೀಗೆ ಟಾಂಗ್ ಕೊಟ್ಟಿದ್ದಾರೆ. ಅಷ್ಟೇ ಅಲ್ಲ ಅಶೋಕ್ ಕೊನೆಯ ಬಾರಿ ಸಭೆಯಲ್ಲಿ ನಿದ್ದೆ ಮಾಡುತ್ತಿದ್ದಾಗ ಕಾಣಿಸಿಕೊಂಡಿದ್ದು ಮತ್ತೆ ನಾಪತ್ತೆಯಾಗಿದ್ದಾರೆ ಕುಟುಕಿದೆ.

ತೇಜಸ್ವಿ ಸೂರ್ಯ : ಸಂಸದ ತೇಜಸ್ವಿ ಸೂರ್ಯ ವಿರುದ್ಧವೂ ಟ್ವೀಟ್ ಮೂಲಕ ಕುಟುಕಿರುವ ಕಾಂಗ್ರೆಸ್, ‘ತೇಜಸ್ವಿ ಸೂರ್ಯ ಅವರನ್ನ, ಸಂಸದರನ್ನಾಗಿಸಿದ್ದು ಆಡುವ ಮಕ್ಕಳನ್ನ ಶಾಲೆಗೆ ಸೇರಿಸಿದಂತಾಗಿಸಿದೆ. ಹಿಂದೆ ಕೊವಿಡ್ ಕಾಲದಲ್ಲಿ ಫುಟ್ಬಾಲ್ ಆಡಲು ಹೋಗಿದ್ರು, ಅತಿವೃಷ್ಟಿ ಕಾಲದಲ್ಲಿ ದೋಸೆ ತಿನ್ನಲು ಹೋಗಿದ್ದಾರೆ . ಕೆಲಸಕ್ಕೆ ಕರಿಬೇಡಿ ದೋಸೆ ತಿನ್ನೋಕೆ ಕರೆಯೋದನ್ನ ಮರೆಯಬೇಡಿ ಅನ್ನೋದು ತೇಜಸ್ವಿ ಸೂರ್ಯ ಅವರ ಮನವಿ. ಸಂಸದ ತೇಜಸ್ವಿ ಸೂರ್ಯ ಸಹ ಈಗ ನಾಪತ್ತೆಯಾಗಿದ್ದಾರೆ, ಇವ್ರನ್ನ ಕೊನೆಯಬಾರಿ ದೋಸೆ ತಿನ್ನೋಕೆ ಹೋದಾಗ ನೋಡಿರೋದಾಗಿ ಕಾಂಗ್ರೆಸ್ ಟ್ವೀಟ್ ಮಾಡಿದೆ

ಹೀಗೆ ಕಾಂಗ್ರೆಸ್ ಸಚಿವರ ವಿರುದ್ಧ ಸಂಸದರ ವಿರುದ್ಧ ಟ್ವೀಟ್ ಮೂಲಕ ಆಕ್ರೋಶ ಹೊರಹಾಕಿದೆ.

ಇದನ್ನೂ ಓದಿ : Janotsava programme : ಜನೋತ್ಸವವೋ..? ಜನಸ್ಪಂದನವೋ..? ಗೊಂದಲ ಮೂಡಿಸಿದ ಬಿಜೆಪಿ ನಾಯಕರ ಹೇಳಿಕೆಗಳು

ಇದನ್ನೂ ಓದಿ : Siddaramaiah : ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ನೆರೆ ಹಾನಿ ಪ್ರದೇಶಗಳಿಗೆ ಸಿದ್ದರಾಮಯ್ಯ ಭೇಟಿ

Congress attack On Ministers-Bangalore heavy rain-no minister was there in Bangalore

Comments are closed.