ಬೆಂಗಳೂರು : Namma Metro With Qr Code Ticket : ನಮ್ಮ ಮೆಟ್ರೋ ಪ್ರಯಾಣ ತುಂಬಾನೇ ಸುಖಕರ ಅನ್ನೋದ್ರಲ್ಲಿ ಎರಡು ಮಾತಿಲ್ಲ. ಯಾವುದೇ ಟ್ರಾಫಿಕ್ ಕಿರಿಕಿರಿಯಿಲ್ಲದೇ ಹವಾನಿಯಂತ್ರಿತ ಬೋಗಿಗಳಲ್ಲಿ ಪ್ರಯಾಣಿಕರು ಒಂದು ಸ್ಥಳದಿಂದ ಮತ್ತೊಂದು ಕಡೆಗೆ ಅನಾಯಾಸವಾಗಿ ಪ್ರಯಾಣ ಮಾಡಬಹುದಾಗಿದೆ. ಹೀಗಾಗಿ ಸ್ವಂತ ವಾಹನ ಇದ್ದವರೂ ಸಹ ಬೆಂಗಳೂರಿನಲ್ಲಿ ಮೆಟ್ರೋ ಪ್ರಯಾಣವನ್ನೇ ಆಯ್ಕೆ ಮಾಡಿಕೊಳ್ತಾರೆ. ಮೆಟ್ರೋ ಪ್ರಯಾಣ ಮಾಡುವ ಮುನ್ನ ಟಿಕೆಟ್ ಖರೀದಿ ಮಾಡೋದು ಕಡ್ಡಾಯ . ಆದರೆ ಈ ಟಿಕೆಟ್ ಪಡೆದುಕೊಳ್ಳಬೇಕು ಅಂದರೆ ಸರತಿ ಸಾಲಿನಲ್ಲಿ ಕಾಯಬೇಕು. ಆದರೆ ಇನ್ಮುಂದೆ ಇಂತಹ ಸಮಸ್ಯೆ ಮೆಟ್ರೋ ಪ್ರಯಾಣಿಕರಿಗೆ ಉದ್ಭವಿಸೋದಿಲ್ಲ. ಇದಕ್ಕೊಂದು ಪರಿಹಾರವನ್ನು ಶೀಘ್ರದಲ್ಲಿಯೇ ಬಿಎಂಆರ್ಸಿಎಲ್ ಅಸ್ತಿತ್ವಕ್ಕೆ ತರುತ್ತಿದೆ.
ರಾಜ್ಯ ರಾಜಧಾನಿ ಬೆಂಗಳೂರಿನ ಮೆಟ್ರೋ ನಿಲ್ದಾಣಗಳಲ್ಲಿ ಕ್ಯೂಆರ್ ಕೋಡ್ ರೀಡಿಂಗ್ ಉಪಕರಣಗಳನ್ನು ಅಳವಡಿಸುವ ಕಾರ್ಯವನ್ನು ಬಿಎಂಆರ್ಸಿಎಲ್ ಮಾಡುತ್ತಿದೆ. ಈ ತಿಂಗಳ ಅಂತ್ಯದ ವೇಳೆಗೆ ಎಲ್ಲಾ ಮೆಟ್ರೋ ನಿಲ್ದಾಣಗಳಲ್ಲಿ ಕ್ಯೂ ಆರ್ ಕೋಡ್ ರೀಡಿಂಗ್ ಉಪಕರಣ ಅಳವಡಿಕೆ ಕಾರ್ಯ ಪೂರ್ಣಗೊಳ್ಳಲಿದೆ ಇದಾದ ಬಳಿಕ ಪ್ರಯಾಣಿಕರು ಕ್ಯೂಆರ್ ಕೋಡ್ ಮೂಲಕ ಹಣ ಪಾವತಿ ಮಾಡಿ ಟಿಕೆಟ್ ಖರೀದಿ ಮಾಡಬಹುದಾಗಿದೆ.
ಪ್ರಯಾಣಿಕರ ಅನುಕೂಲಕ್ಕೆ ಎಂದಿಗೂ ಮೊದಲ ಪ್ರಾಶಸ್ತ್ಯ ನೀಡುವ ಬಿಎಂಆರ್ಸಿಎಲ್ ಈಗಾಗಲೇ ಮೆಟ್ರೋ ಪಾಸ್, ಸ್ಮಾರ್ಟ್ ಕಾರ್ಡ್ ಹಾಗೂ ಟೋಕನ್ಗಳಂತಹ ಸೌಕರ್ಯಗಳನ್ನು ಜಾರಿಗೆ ತಂದಿದೆ. ಇದೀಗ ಮೆಟ್ರೋ ಪ್ರಯಾಣದಲ್ಲಿ ಡಿಜಿಟಲ್ ವ್ಯವಸ್ಥೆಯನ್ನು ಮತ್ತೊಂದು ಹೆಜ್ಜೆ ಮುಂದೆ ಕೊಂಡೊಯ್ಯಲಾಗುತ್ತಿದ್ದು ಇದರಿಂದಾಗಿ ಪ್ರಯಾಣಿಕರು ಇನ್ಮೇಲೆ ಗಂಟೆಗಟ್ಟಲೇ ಸರತಿ ಸಾಲಿನಲ್ಲಿ ನಿಂತು ಟಿಕೆಟ್ಗಾಗಿ ಕಾಯಬೇಕು ಎಂದೇನಿಲ್ಲ. ಸ್ಮಾರ್ಟ್ಫೋನ್ಗಳಲ್ಲಿ ಇರುವ ಕ್ಯೂಆರ್ ಕೋಡ್ಗಳನ್ನು ಬಳಕೆ ಮಾಡಿ ಹಣ ಪಾವತಿ ಮಾಡುವ ಮೂಲಕ ಸಂಚರಿಸಬಹುದಾಗಿದೆ.
ಕ್ಯೂಆರ್ ಕೋಡ್ ಹೇಗೆ ಕಾರ್ಯ ನಿರ್ವಹಿಸುತ್ತೆ..?
ಪೇಟಿಎಂ, ನಮ್ಮ ಮೆಟ್ರೋ ಹಾಗೂ ಯಾತ್ರಾ ಅಪ್ಲಿಕೇಶನ್ಗಳನ್ನು ಬಳಸಿ ನೀವು ಮೆಟ್ರೋ ಟಿಕೆಟ್ ಖರೀದಿಸಬಹುದು. ನೀವು ಹಣ ಪಾವತಿ ಮಾಡಿದ ಬಳಿಕ ಟಿಕೆಟ್ನ ಕ್ಯೂಆರ್ ಕೋಡ್ನನ್ನು ಡೌನ್ಲೋಡ್ ಮಾಡಿಕೊಳ್ಳಬೇಕು. ಇದನ್ನು ಮೆಟ್ರೋ ಸ್ವಯಂ ಚಾಲಿತ ಶುಲ್ಕ ಗೇಟ್ಗೆ ಅಳವಡಿಸಲಾದ ಕ್ಯೂಆರ್ ಕೋಡ್ಗೆ ನೀವು ಡೌನ್ಲೋಡ್ ಮಾಡಿದ ಕ್ಯೂಆರ್ ಕೋಡ್ ತೋರಿಸಬೇಕು. ಆಗ ನಿಮಗೆ ಮೆಟ್ರೋ ಗೇಟ್ ತೆರೆದುಕೊಳ್ಳುತ್ತದೆ. ನಿರ್ಗಮಿಸುವ ಸಂದರ್ಭದಲ್ಲಿಯೂ ಇದೇ ರೀತಿ ಮಾಡಿ ಗೇಟ್ ತೆರೆಯಬಹುದಾಗಿದೆ.
ಪ್ರಸ್ತುತ ರಾಷ್ಟ್ರ ರಾಜಧಾನಿ ದೆಹಲಿ ಮೆಟ್ರೋ ನಿಲ್ದಾಣಗಳಲ್ಲಿ ಈ ಕ್ಯೂಆರ್ ಕೋಡ್ ಟಿಕೆಟ್ ವ್ಯವಸ್ಥೆ ಜಾರಿಯಲ್ಲಿದೆ. ದೆಹಲಿಯಲ್ಲಿ ಕ್ಯೂಆರ್ ಕೋಡ್ ಟಿಕೆಟ್ ವ್ಯವಸ್ಥೆಗೆ ಪ್ರಯಾಣಿಕರಿಂದ ಮೆಚ್ಚುಗೆ ವ್ಯಕ್ತವಾಗಿದ್ದು ಹೆಚ್ಚಿನ ಜನರು ಕ್ಯೂಆರ್ ಕೋಡ್ ಟಿಕೆಟ್ನ್ನೇ ಬಳಕೆ ಮಾಡಿಕೊಂಡು ಪ್ರಯಾಣ ಮಾಡುತ್ತಿದ್ದಾರೆ. ಈ ಸಮೀಕ್ಷೆಯನ್ನು ಗಮನಿಸಿದ ಬಿಎಂಆರ್ಸಿಎಲ್ ರಾಜ್ಯ ರಾಜಧಾನಿಯಲ್ಲಿಯೂ ಕ್ಯೂ ಆರ್ ಟಿಕೆಟ್ ವ್ಯವಸ್ಥೆಯನ್ನು ಜಾರಿಗೆ ತರುವ ಮೂಲಕ ಪ್ರಯಾಣಿಕರಿಗೆ ಅನುಕೂಲ ಮಾಡಿಕೊಡಲು ನಿರ್ಧರಿಸಿದೆ ಎನ್ನಲಾಗಿದೆ.
ಇದನ್ನು ಓದಿ : House Demolished: ಬಾಲಕಿಗೆ ಲೈಂಗಿಕ ದೌರ್ಜನ್ಯ.. ಶಾಲಾ ಬಸ್ ಡ್ರೈವರ್ ಮನೆ ಧ್ವಂಸ
ಇದನ್ನೂ ಓದಿ : Virat Kohli: ಲಂಡನ್‌ನಲ್ಲಿ ವಿರಾಟ್; ಪತ್ನಿ ಅನುಷ್ಕಾ ಜೊತೆ ಸೂರ್ಯರಶ್ಮಿಯನ್ನು ಚುಂಬಿಸಿದ ಕಿಂಗ್ ಕೊಹ್ಲಿ
Soon Travel In Namma Metro With Qr Code Ticket