Amulya Birthday:ಸ್ಯಾಂಡಲ್‌ ವುಡ್‌ನ “ಚೆಲುವಿನ ಚಿತ್ತಾರ” ಬೆಡಗಿ ಅಮೂಲ್ಯಗೆ ಇಂದು ಹುಟ್ಟುಹಬ್ಬದ ಸಂಭ್ರಮ

(Amulya Birthday)”ಚೆಲುವಿನ ಚಿತ್ತಾರ” ಖ್ಯಾತಿಯ ನಟಿ ಅಮೂಲ್ಯರವರು ಇಂದು ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. ತಮ್ಮ ಮೆಚ್ಚಿನ ನಟಿ ಅಮೂಲ್ಯರವರರ ಹುಟ್ಟುಹಬ್ಬಕ್ಕೆ ಅಭಿಮಾನಿಗಳಿಂದ ಶುಭಾಶಯಗಳನ್ನು ಕೋರುತ್ತಿದ್ದಾರೆ. ತಮ್ಮ ಮದುವೆಯ ನಂತರ ಸಿನಿಮಾರಂಗದಿಂದ ದೂರ ಉಳಿದಿದ್ದರು ಸಿನಿಪ್ರೇಮಿಗಳು ಮಾತ್ರ ತಮ್ಮ ನೆಚ್ಚಿನ ನಟಿಯನ್ನು ಮರೆಯಲಿಲ್ಲ. ಅಮೂಲ್ಯರ ಹುಟ್ಟುಹಬ್ಬಕ್ಕೆ ಸಿನಿಗಣ್ಯರು, ಕುಟುಂಬದರವರು ಹಾಗೂ ಸ್ನೇಹಿತರು ಶುಭಹಾರೈಸಿದ್ದಾರೆ. ಇತ್ತೀಚೆಗೆ ಅವಳಿ ಮಕ್ಕಳಿಗೆ ಜನ್ಮನೀಡಿದ ಅಮೂಲ್ಯ ಈ ವರ್ಷದ ಹುಟ್ಟುಹಬ್ಬವನ್ನು ತಮ್ಮ ಮಕ್ಕಳೊಂದಿಗೆ ಆಚರಿಸುತ್ತಿದ್ದಾರೆ. ಹಾಗೆ ಅವಳಿ ಮಕ್ಕಳ ಆರೈಕೆ ಮಾಡುವುದರಲ್ಲಿ ಹೆಚ್ಚಿನ ಸಮಯವನ್ನು ಕಳೆಯುತ್ತಿದ್ದಾರೆ. ಇನ್ನೂ ನಟಿ ಅಮೂಲ್ಯರವರ ಪತಿ ತಮ್ಮ ಹೆಂಡತಿಯ ಹುಟ್ಟುಹಬ್ಬವನ್ನು ವಿಶೇಷವಾಗಿ ಆಚರಿಸಿದ್ದಾರೆ. ಅಮೂಲ್ಯರವರ ಹುಟ್ಟುಹಬ್ಬವು ತನ್ನ ಪಾಲಿಗೆ “ಪ್ರೇಮಿಗಳ ದಿನ” ವೆಂದು ತಿಳಿಸಿದ್ದಾರೆ.

ಜಗದೀಶರವರು ತಮ್ಮ ಪತ್ನಿ ಅಮೂಲ್ಯ (Amulya Birthday) ಜೊತೆ ತೆಗೆಸಿಕೊಂಡ ಒಂದಷ್ಟು ಪೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುವುದರ ಮೂಲಕ “ನನಗೆ ಸೆಪ್ಟೆಂಬರ್‌ 14 ವ್ಯಾಲೆಂಟೈನ್‌ ಡೇ” ಎಂದು ಹೇಳಿ ಹುಟ್ಟುಹಬ್ಬದ ಶುಭಾಶಯವನ್ನು ಕೋರಿದ್ದಾರೆ. ನೀನು ಸದಾ ಮಿನುಗುವ ನಕ್ಷತ್ರವಾಗಿರಬೇಕು ಇದು ನಾವು ಕಳೆದ ಪ್ರೀತಿಯ ಕ್ಷಣಗಳು ಎಂದು ಪೋಸ್ಟ್ ಗೆ ಬರೆದುಕೊಂಡಿದ್ದಾರೆ.

ಚಿಕ್ಕ ವಯಸ್ಸಿನಲ್ಲೇ ಸಿನಿಮಾರಂಗಕ್ಕೆ ಕಾಲಿಟ್ಟು ಅನೇಕ ಚಿತ್ರಗಳಲ್ಲಿ ನಟಿಸಿದ್ದಾರೆ. ನಂತರದ ದಿನಗಳಲ್ಲಿ “ಚೆಲುವಿನ ಚಿತ್ತಾರ”ದ ಮೂಲಕ ಹೀರೋಯಿನ್‌ ಆಗಿ ಸಿನಿಲೋಕಕ್ಕೆ ಪಾದಾರ್ಪಣೆ ಮಾಡುತ್ತಾರೆ. ಈ ಚಿತ್ರ ಮೂಲಕ ಬೆಳ್ಳಿತೆರೆಯಲ್ಲಿ ದೊಡ್ಡ ಗೆಲುವನ್ನು ಪಡೆದುಕೊಳ್ಳುತ್ತಾರೆ. ಮೊದಲ ಬಾರಿಗೆ “ಗೋಲ್ಡನ್‌ ಸ್ಟಾರ್”‌ ಗಣೇಶ್‌ ರವರ ಜೊತೆ ನಟಿಸುತ್ತಾರೆ. ಆ ಸಿನಿಮಾ ಕೂಡ ಕನ್ನಡ ಚಿತ್ರರಂಗದಲ್ಲಿ ಪ್ರೇಕ್ಷಕರ ಪ್ರಶಂಸೆಗೆ ಪಾತ್ರವಾಗುತ್ತದೆ. ನಂತರ ದಿನಗಳಲ್ಲಿ ತುಂಬಾ ಸಿನಿಮಾದಲ್ಲಿ ಅವಕಾಶಗಳು ಇವರ ಕೈ ಸೇರುತ್ತದೆ. ಈ ಸಿನಿಮಾದ ನಂತರ ಸ್ಟಾರ್‌ ನಟರಾದ ದುನಿಯಾ ವಿಜಯ್‌, ಚಿರಂಜೀವಿ ಸರ್ಜಾ, ಯಶ್‌, ಪ್ರಕಾಶ್‌ ರಾಜ್‌, ಮುಂತಾದವರ ಜೊತೆ ನಟಿಸುವ ಅವಕಾಶವನ್ನು ಪಡೆದುಕೊಳ್ಳುತ್ತಾರೆ. ಗಣೇಶ್‌ ಜೊತೆ ನಟಿಸಿದ “ಶ್ರಾವಣಿ ಸುಬ್ರಹ್ಮಣ್ಯ” ಸಿನಿಮಾಕ್ಕೆ ಫಿಲ್ಮ್‌ಫೇರ್‌ ಪ್ರಶಸ್ತಿ ಕೂಡ ಪಡೆದುಕೊಂಡಿದ್ದಾರೆ.

ಇದನ್ನೂ ಓದಿ : ”ಕೆಜಿಎಫ್”‌ ನಟ ಯಶ್‌ ಗೆಟಪ್‌ ಅನುಕರಣೆ ಮಾಡಿದ ಬಾಲಿವುಡ್‌ ಸ್ಟಾರ್ ಸಲ್ಮಾನ್‌ ಖಾನ್‌

ಇದನ್ನೂ ಓದಿ : ಮಾಲ್ಡೀವ್ಸ್ ನಲ್ಲಿ ಮಾದಕ ಬೆಡಗಿ: ನಿದ್ದೆ ಕದಿಯುತ್ತಿದೆ ಸನ್ನಿ ಲಿಯೋನ್ ಪೋಟೋಸ್

ಕೊನೆಯ ಚಿತ್ರ 2017ರಲ್ಲಿ ಬಿಡುಗಡೆಯಾದ ಗೋಲ್ಡನ್‌ ಸ್ಟಾರ್‌ ಗಣೇಶ್‌ ಅಭಿನಯದ “ಮುಗುಳುನಗೆ” ಚಿತ್ರದಲ್ಲಿಅತಿಥಿ ಪಾತ್ರ ಮಾಡಿದ ಮೇಲೆ ಅವರು ಬೇರೆ ಯಾವ ಸಿನಿಮಾದಲ್ಲೂ ಕಾಣಿಸಿಕೊಳ್ಳಲಿಲ್ಲ. ಮದುವೆ ನಂತರ ಇನ್ನೇನು ಸಿನಿಮಾರಂಗಕ್ಕೆ ಬರಲಿದ್ದಾರೆ ಎನ್ನುವಷ್ಟರಲ್ಲಿ ತಾನು ತಾಯಿಯಾಗುವ ಖುಷಿಯನ್ನು ಹಂಚಿಕೊಳ್ಳುತ್ತಾರೆ. ಹೀಗಾಗಿ ಅವರ ಅಭಿಮಾನಿಗಳು ಮತ್ತೆ ಬೆಳ್ಳಿ ಪರದೆ ಮೇಲೆ ಕಾಣಲು ಕಾತುರದಿಂದ ಕಾಯುತ್ತಿದ್ದಾರೆ. ಅಭಿಮಾನಿಗಳ ಆಸೆಯನ್ನು ಯಾವಾಗ ಪೂರ್ತಿ ಮಾಡಲಿದ್ದಾರೋ ತಿಳಿದಿಲ್ಲ. ತಮ್ಮ ನೆಚ್ಚಿನ ನಟಿಯನ್ನು ಒಳ್ಳೆಯ ಕಥೆ ಹಾಗೂ ಒಳ್ಳೆಯ ಪಾತ್ರದೊಂದಿಗೆ ಪುನಃ ಚಿತ್ರರಂಗದಲ್ಲಿ ಕಾಣಲು ಅಭಿಮಾನಿಗಳು ಕಾಯುತ್ತಿದ್ದಾರೆ.

Comments are closed.