ಬೆಂಗಳೂರು : ಸಿಲಿಕಾನ್ ಸಿಟಿ ಜನರ ಜೀವನಾಡಿ ಎನಿಸಿಕೊಂಡಿರುವ ಬಿಎಂಟಿಸಿ ಸದ್ಯ ಮುಳುಗೋ ಹಡಗು. ಇರುವ ಸಿಬ್ಬಂದಿಗಳಿಗೆ ಸಂಬಳ ಕೊಡಲಾಗದೇ ನಿಗಮ ಹೆಣಗಾಡ್ತಿದೆ. ಹೀಗಿರುವಾಗ ನಷ್ಟದ ಸುಳಿಯಿಂದ ಬಿಎಂಟಿಸಿಯನ್ನ ಮೇಲೆತ್ತಲು ಮಾಸ್ಟರ್ ಪ್ಲಾನ್ ಒಂದು ರೆಡಿಯಾಗಿದೆ. ಹೊಸ ಪ್ಲಾನ್ ಪ್ರಕಾರ ಬಸ್ ಓಡುತ್ತೆ, ಡ್ರೈವರ್ ಇರ್ತಾರೆ. ಆದ್ರೆ ಕಂಡೆಕ್ಟರ್ (BMTC cut the conductor job) ಮಾತ್ರ ಕಾಣಿಸೋದಿಲ್ಲ.
ಹೌದು ಕಾಸ್ಟ್ ಕಟ್ಟಿಂಗ್ ಮೂಲಕವಾದ್ರೂ ನಷ್ಟದಿಂದ ಹೊರಬರೋಕೆ ಬಿಎಂಟಿಸಿ ಮಾಸ್ಟರ್ ಪ್ಲ್ಯಾನ್ ಮಾಡಿದೆ. ಸದ್ಯ ನಿಗಮದಲ್ಲಿ ಕೆಲಸ ಮಾಡ್ತಿರೋ ಬಹುತೇಕರು ಡ್ರೈವರ್ ಕಮ್ ಕಂಡಕ್ಟರ್. ಹೀಗಾಗಿ ಕೆಲವರನ್ನು ಕಂಡಕ್ಟರ್ ಮತ್ತು ಕೆಲವರನ್ನ ಡ್ರೈವರ್ ಆಗಿ ಬಳಸಲಾಗ್ತಿತ್ತು. ಆದರೆ ಈಗ ಆರ್ಥಿಕ ಹೊರೆ ಕಾಡ್ತಿದ್ದು, ನಿಗಮದ ಸಿಬ್ಬಂದಿಗೆ ಸಂಬಳಕೊಡೋದೇ ಕಷ್ಟವಾಗಿದೆ.
ಈ ಮಧ್ಯೆ ಬಿಎಂಟಿಸಿಯಲ್ಲಿ ಡ್ರೈವರ್ ಕೊರತೆಯೂ ಕಾಡ್ತಿದೆ. ಹೊಸ ನೇಮಕಾತಿಗೂ ಸರ್ಕಾರ ಒಪ್ಪಿಗೆ ಸೂಚಿಸ್ತಿಲ್ಲ. ಹೀಗಾಗಿ ಕಂಡೆಕ್ಟರ್ ಪೋಸ್ಟ್ ಗಳನ್ನೇ ಎತ್ತಂಗಡಿ ಮಾಡೋಕೆ ನಿಗಮ ಪ್ಲಾನ್ ಮಾಡಿದೆ. ಬಿಎಂಟಿಸಿ ಇನ್ಮುಂದೆ ಟಿಕೇಟ್ ವಿತರಿಸಲು ಡ್ರೈವರ್ ಕಮ್ ಕಂಡಕ್ಟರ್ ಹಾಗೂ ಡಿಜಿಟಲ್ ತಂತ್ರಜ್ಞಾನ ಬಳಸಿಕೊಳ್ಳಲಿದ್ದು, ಕಾಮನ್ ಮೊಬಿಲಿಟಿ ಕಾರ್ಡ್, ಇ ಪಾಸ್, ಸೇರಿ ಹಲವು ಡಿಜಿಟಲ್ ಫೆಸಿಲಿಟಿನ ಜಾರಿಗೆ ತಂದು ಟಿಕೆಟ್ ಕಲೆಕ್ಷನನ್ನು ಸಂಪೂರ್ಣ ಡಿಜಿಟಲೈಸ್ ಮಾಡಲು ಬಿಎಂಟಿಸಿ ತೀರ್ಮಾನಿಸಿದೆ.
ಈ ಮೂಲಕವಾಗಿ ನಿಗಮದಲ್ಲಿರೋ ಎಲ್ಲಾ ಕಂಡೆಕ್ಟರ್ಗಳು ಕೆಲಸದಿಂದ ಮುಕ್ತರಾಗಲಿದ್ದಾರೆ. ಸದ್ಯ ಇರೋ ಪ್ರತಿಯೊಬ್ಬ ಕಂಡೆಕ್ಟರ್ಗಳೂ ಕಂಡೆಕ್ಟರ್ ಕಂ ಡ್ರೈವರ್ ಆದವರೇ. ಹೀಗಾಗಿ ಈ ಎಲ್ಲಾ ಕಂಡೆಕ್ಟರ್ಗಳನ್ನ ಡ್ರೈವಿಂಗ್‌ಗೆ ನಿಯೋಜಿಸಲು ಬಿಎಂಟಿಸಿ ತೀರ್ಮಾನಿಸಿದೆ. ಈ ಮೂಲಕ ಹೊಸ ನೇಮಕಾತಿ ಇಲ್ಲದೇ ಹೆಚ್ಚುವರಿ ಬಸ್ ಗಳನ್ನು ರಸೆಗಿಳಿಸೋದು ಬಿಎಂಟಿಸಿ ಪ್ಲಾನ್.
ಈ ಮಧ್ಯೆ ಸರ್ಕಾರ ಮತ್ತು ಬಿಎಂಟಿಸಿಯ ಈ ಪ್ಲ್ಯಾನ್ ಗೆ ಸಾಕಷ್ಟು ಅಡ್ಡಿ ಆತಂಕಗಳೂ ಇದೆ. ಕಾಲಎಷ್ಟೇ ಮುಂದುವರೆದಿದ್ದರೂ ಬಿಎಂಟಿಸಿಯನ್ನು ಎಲ್ಲ ವರ್ಗದ ಜನರು ಬಳಸುತ್ತಾರೆ. ಹೀಗಾಗಿ ಎಲ್ಲರಿಗೂ ಡಿಜಿಟಲ್ ತಂತ್ರಜ್ಞಾನ ಒಪ್ಪಿಕೊಳ್ಳೋಕೆ ಸಮಯ ಬೇಕಾಗಲಿದೆ. ಹೀಗಾಗಿ ಕಂಡಕ್ಟರ್ ಲೆಸ್ ಬಸ್ ಯೋಜನೆ ಜಾರಿ ಅಂದುಕೊಂಡಷ್ಟು ಸುಲಭವಾಗಿಲ್ಲ. ಆದರೂ ಬಿಎಂಟಿಸಿ ಸಿಬ್ಬಂದಿ ಹೊರೆ ತಪ್ಪಿಸೋ ನಿಟ್ಟಿನಲ್ಲಿ ಈ ಯೋಜನೆ ಜಾರಿಗೆ ಮುಂದಾಗಿದೆ. ಮುಂದಿನ ಒಂದೆರಡು ವರ್ಷದಲ್ಲಿ 100 ಶೇಕಡಾದಷ್ಟು ಕಂಡೆಕ್ಟರ್ ಲೆಸ್ ಬಸ್ ರಸ್ತೆಗಿಳಿಯಬೇಕು ಅನ್ನೋದು ಬಿಎಂಟಿಸಿ ಲೆಕ್ಕಾಚಾರವಾಗಿದ್ದು ಇದಕ್ಕೆ ಜನರ ರಿಯಾಕ್ಷನ್ ಹೇಗಿರುತ್ತೆ ಕಾದುನೋಡಬೇಕಿದೆ.
ಇದನ್ನೂ ಓದಿ : ಸಮನ್ವಿ ಸಾವಿನ ಶೋಕದಲ್ಲಿದ್ದ ಕುಟುಂಬಕ್ಕೆ ಸಿಕ್ಕಿತು ಸಮಾಧಾನ: ಗಂಡು ಮಗುವಿನ ತಾಯಿಯಾದ ಅಮೃತಾ ರೂಪೇಶ್
ಇದನ್ನೂ ಓದಿ : Himachal Pradesh : ಭೀಕರ ಬಸ್ ಅಪಘಾತ : ಶಾಲಾ ಮಕ್ಕಳು ಸೇರಿದಂತೆ 16 ಮಂದಿ ದುರ್ಮರಣ
Ticket will be available in digital form, BMTC cut the conductor job