Sini Shetty : ಮಿಸ್ ಇಂಡಿಯಾ 2022 ವಿಜೇತೆ ಸಿನಿ ಶೆಟ್ಟಿ ಬಗ್ಗೆ ನಿಮಗೆ ತಿಳಿದಿರದ 5 ವಿಚಾರಗಳು ಇಲ್ಲಿದೆ ನೋಡಿ

Sini Shetty : ಕರ್ನಾಟಕದ ಸಿನಿ ಶೆಟ್ಟಿ ಫೆಮಿನಾ ಮಿಸ್​ ಇಂಡಿಯಾ 2022ರ ಕಿರೀಟವನ್ನು ಮುಡಿಗೇರಿಸಿಕೊಂಡಿದ್ದಾರೆ. ಮುಂಬೈನ ಜಿಯೋ ಕನ್ವೆಕ್ಷನ್​​ ಸೆಂಟರ್​ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಿನಿ ಶೆಟ್ಟಿ ವಿಜೇತರಾಗಿ ಹೊರ ಹೊಮ್ಮಿದ್ದಾರೆ. ರೂಪಲ್​ ಶೇಖಾವತ್​ ರನ್ನರ್​ ಅಪ್​ ಆಗಿದ್ದರೆ ಶಿನಾತಾ ಚೌಹಾಣ್​ ಎರಡನೇ ರನ್ನರ್​ ಅಪ್​ ಸ್ಥಾನಕ್ಕೆ ತೃಪ್ತಿ ಪಟ್ಟರು. ರೂಪಲ್​ ರಾಜಸ್ಥಾನವನ್ನು ಪ್ರತಿನಿಧಿಸಿದ್ದರೆ ಶೀನಾತಾ ಉತ್ತರ ಪ್ರದೇಶವನ್ನು ಪ್ರತಿನಿಧಿಸಿದ್ದರು. ಈ ಕಾರ್ಯಕ್ರಮದಲ್ಲಿ ಟಾಪ್​ 5 ಫೈನಲಿಸ್ಟ್​ಗಳಾದ ಸಿನಿ ಶೆಟ್ಟಿ, ರುಬಲ್​ ಶೇಖಾವತ್​, ಶಿನಾತಾ ಚೌಹಾಣ್​, ಪ್ರಜ್ಞಾ ಅಯ್ಯಗಾರಿ ಹಾಗೂ ಗಾರ್ಗಿ ಆಯ್ಕೆಯಾಗಿದ್ದರು.


ಗ್ರ್ಯಾಂಡ್​ ಫಿನಾಲೆ ಕಾರ್ಯಕ್ರಮವು ಅತ್ಯಂತ ಅದ್ಧೂರಿಯಾಗಿ ನಡೆದಿದ್ದು ಈ ಕಾರ್ಯಕ್ರಮದಲ್ಲಿ ನೇಗಾ ಧೂಪಿಯಾ, ಕೃತಿ ಸನೋನ್​, ಮನೀಷ್​ ಪಾಲ್​, ರಾಜಕುಮಾರ್​ ರಾವ್​, ಡಿನೋ ಮೋರಿಯಾ, ಮಿಥಾಲಿ ರಾಜ್​, ಮಲೈಕಾ ಅರೋರಾ ಸೇರಿದಂತೆ ಹಲವರು ಭಾಗವಹಿಸಿದ್ದರು. ಕೃತಿ ಸನೋನ್​ ಹಾಗೂ ಲಾರೆನ್​ ಗಾಟ್ಲೀಬ್​ ಅದ್ಭುತ ಪ್ರದರ್ಶನ ಕಾರ್ಯಕ್ರಮಕ್ಕೆ ಇನ್ನಷ್ಟು ಮೆರುಗನ್ನು ನೀಡಿತ್ತು. ಪ್ರತಿಷ್ಠಿತ ಫೆಮಿನಾ ಮಿಸ್​ ಇಂಡಿಯಾ ಕಿರೀಟವನ್ನು ಇದೇ 20 ವರ್ಷಗಳ ಹಿಂದೆ ನೇಹಾ ಧೂಪಿಯಾ ಗೆದ್ದಿದ್ದರು.


ಫೆಮಿನಾ ಮಿಸ್ ಇಂಡಿಯಾ 2021 ರ ಮಾನಸಾ ವಾರಣಾಸಿ ಅವರು ಪ್ರತಿಷ್ಠಿತ ಸಮಾರಂಭದಲ್ಲಿ ಮಿಸ್ ಇಂಡಿಯಾ 2022 ಸಿನಿ ಶೆಟ್ಟಿಗೆ ಕಿರೀಟವನ್ನು ಹಸ್ತಾಂತರಿಸಿದರು.ನೂತನ ಬ್ಯೂಟಿ ಕ್ವೀನ್​ ಬಗ್ಗೆ ನೀವು ತಿಳಿದುಕೊಳ್ಳಬೇಕಾದ ಐದು ವಿಚಾರಗಳು ಇಲ್ಲಿವೆ ನೋಡಿ :
ಸಿನಿ ಶೆಟ್ಟಿ 21 ವರ್ಷ ಪ್ರಾಯದವರಾಗಿದ್ದು ಮುಂಬೈನಲ್ಲಿ ಜನಿಸಿದ್ದಾರೆ. ಪ್ರಸ್ತುತ ಇವರು ಕರ್ನಾಟಕದಲ್ಲಿದ್ದಾರೆ.
ಅಕೌಂಟಿಂಗ್​ ಹಾಗೂ ಫೈನಾನ್ಸ್​ ವಿಭಾಗದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದಿದ್ದಾರೆ.
ಮಿಸ್​ ಇಂಡಿಯಾ 2022 ಸಿನಿ ಶೆಟ್ಟಿ ಪ್ರಸ್ತುತ ಚಾರ್ಟರ್ಡ್ ಫೈನಾನ್ಶಿಯಲ್​ ಅನಾಲಿಸ್ಟ್​ ವೃತ್ತಿಪರ ಕೋರ್ಸ್​ನ್ನು ಮಾಡುತ್ತಿದ್ದಾರೆ.
ಸಿನಿ ತಮ್ಮ ನಾಲ್ಕನೇ ವಯಸ್ಸಿನಿಂದ ನೃತ್ಯಾಭ್ಯಾಸ ಮಾಡುತ್ತಿದ್ದಾರೆ ಹಾಗೂ ತ್ಮ 14ನೇ ವಯಸ್ಸಿನಲ್ಲಿ ಅರಂಗೇತರಂ ಹಾಗೂ ಭರತನಾಟ್ಯವನ್ನು ಪೂರೈಸಿದ್ದಾರೆ.
ಸಿನಿ ಶೆಟ್ಟಿ ಕುಟುಂಬಸ್ಥರು ಇವರ ಶೈಕ್ಷಣಿಕ ಹಾಗೂ ಸೃಜನಶೀಲ ಬೆಳವಣಿಗೆಗಳಿಗೆ ಬೆಂಗಾವಲಾಗಿ ನಿಂತಿದೆ.

ಇದನ್ನು ಓದಿ : ಗುಡ್ ನ್ಯೂಸ್ : ರೋಹಿತ್ ಶರ್ಮಾಗೆ ಕೋವಿಡ್ ನೆಗೆಟಿವ್ !

ಇದನ್ನೂ ಓದಿ : ನಿನ್ನೆ ದೋಸ್ತಿ.. ಇವತ್ತು ದುಷ್ಮನ್.. ಇಂಗ್ಲೆಂಡ್ ಆಟಗಾರನಿಗೆ ಚಳಿ ಬಿಡಿಸಿದ ಕಿಂಗ್ ಕೊಹ್ಲಿ!

Here’s 5 things to know about Miss India 2022 winner Sini Shetty

Comments are closed.