ಬೆಂಗಳೂರು : ನಮ್ಮ ಮೆಟ್ರೋ ಪ್ರಯಾಣಿಕರಿಗೆ ಯುಗಾದಿ ಹಬ್ಬದ ಹಿನ್ನೆಲೆಯಲ್ಲಿ ಶುಭ ಸುದ್ದಿಯೊಂದನ್ನು ನೀಡಿದೆ. ಯುಗಾದಿಯ ಹೊತ್ತಲ್ಲೇ ಬಿಎಂಆರ್‌ಸಿಎಲ್ (BMRCL ) ಮೆಟ್ರೋ (Namma Metro) ಪ್ರಯಾಣಿಕರಿಗೆ ಹೊಸ ಪಾಸ್‌ವೊಂದನ್ನು ಪರಿಚಯಿಸಿದೆ. ಬಿಎಂಆರ್‌ಸಿಎಲ್ 1 ಮತ್ತು 3 ದಿನದ ಪಾಸ್ ಪರಿಚಯಿಸುತ್ತಿದೆ. ಹಾಗಾದ್ರೆ ಹೊಸ ಪಾಸ್‌ನ ವೈಶಿಷ್ಟ್ಯತೆಗಳು ಏನು, ಗ್ರಾಹಕರಿಗೆ ಏನೆಲ್ಲಾ ಲಾಭ ಸಿಗಲಿದೆ ಅನ್ನೋ ಕುರಿತ ಮಾಹಿತಿ ಇಲ್ಲಿದೆ. ಇನ್ನೊಂದೆಡೆಯಲ್ಲಿ ಕೆಎಸ್‌ಆರ್‌ಟಿಸಿ ಕೂಡ ಪ್ರಯಾಣಿಕರಿಗೆ ಸಿಹಿ ಸುದ್ದಿಯೊಂದನ್ನು ನೀಡಿದೆ.

ನಮ್ಮ ಮೆಟ್ರೋ ಪ್ರಯಾಣಿಕರು ಹೊಸ ಪಾಸ್ ಖರೀದಿ ಮಾಡಿದ ದಿನದಂದು ಅನಿಯಮಿತವಾಗಿ ಪ್ರಯಾಣಿಸಬಹುದು. ಒಂದು ದಿನದ ಪಾಸ್‌ಗೆ 200 ರೂಪಾಯಿ ನಿಗದಿ ಮಾಡಿದೆ. ಇನ್ನು 400 ರೂಪಾಯಿಯ ಪಾಸ್ ಖರೀದಿಸಿ ಮೂರನೇ ದಿನದಂದ ಪ್ರಯಾಣ ಮಾಡಬಹುದಾಗಿದೆ. ಅಲ್ಲದೇ ಪ್ರತಿ ಪಾಸ್‌ಗೆ 50 ರೂಪಾಯಿ ಹಿಂಪಡೆಯಲು ಅವಕಾಶವಿದೆ. ಈ ಕುರಿತು ಬಿಎಂಆರ್‌ಸಿಎಲ್ ಪತ್ರಿಕಾ ಪ್ರಕಟಣೆ ಹೊರಡಿಸಿದೆ.
ಯುಗಾದಿ ಹಬ್ಬಕ್ಕೆ ಕೆಎಸ್ಆರ್ ಟಿಸಿ ( KSRTC )ಹೆಚ್ಚುವರಿ 600 ಬಸ್
ನಮ್ಮ ಮೆಟ್ರೋ ಪ್ರಯಾಣಿಕರಿಗೆ ಕೆಎಸ್‌ಆರ್‌ಟಿಸಿ ಯುಗಾದಿ ಹಬ್ಬದ ಪ್ರಯುಕ್ತ ವಿಶೇಷ ಬಸ್ ವ್ಯವಸ್ಥೆ ಮಾಡಿದೆ. ಬೆಂಗಳೂರಿನಿಂದ ರಾಜ್ಯದ ವಿವಿಧ ಭಾಗಗಳಿಗೆ ಪ್ರಯಾಣಿಸುವ ಪ್ರಯಾಣಿಕರಿಗೆ ಬಸ್ಸುಗಳು ಲಭ್ಯವಿದೆ. ಕೆಎಸ್‌ಆರ್‌ಟಿಸಿ ಹೆಚ್ಚುವರಿಯಾಗಿ 600 ಬಸ್ ಸೇವೆಗಳನ್ನು ಸೇರಿಸಿದೆ.

ಬೆಂಗಳೂರಿನಿಂದ ಧರ್ಮಸ್ಥಳ, ಸುಬ್ರಹ್ಮಣ್ಯ, ಮಂಗಳೂರು, ಮೈಸೂರು, ಶಿವಮೊಗ್ಗ, ತಮಿಳುನಾಡು ಮತ್ತು ಕೇರಳಕ್ಕೆ ಹೆಚ್ಚುವರಿ ಬಸ್‌ಗಳು ಲಭ್ಯವಿದೆ. ಆನ್‌ಲೈನ್ ಮೂಲಕ ಟಿಕೆಟ್ ಮುಂಗಡ ಬುಕ್ಕಿಂಗ್ ಸೌಲಭ್ಯ ಕಲ್ಪಿಸಲಾಗಿದೆ.
ನಾಲ್ಕು ಅಥವಾ ಅದಕ್ಕಿಂತ ಹೆಚ್ಚು ಜನರು ಒಟ್ಟಿಗೆ ಬುಕ್ ಮಾಡಿದರೆ, ಶೇಕಡಾ 5 ರಷ್ಟು ರಿಯಾಯಿತಿ ಲಭ್ಯವಿರುತ್ತದೆ ಮತ್ತು 2 ಬದಿಯ ಟಿಕೆಟ್‌ಗಳನ್ನು ಬುಕ್ ಮಾಡಲು ಶೇಕಡಾ 10 ರಷ್ಟು ರಿಯಾಯಿತಿ ನೀಡಲಾಗುತ್ತದೆ. ಪ್ರಯಾಣಿಕರು ಕೋವಿಡ್-19 ಮಾರ್ಗಸೂಚಿಗಳನ್ನು ಅನುಸರಿಸಬೇಕು ಎಂದು ಕೆಎಸ್‌ಆರ್‌ಟಿಸಿ ತಿಳಿಸಿದೆ.
ಇದನ್ನೂ ಓದಿ : ಸಿಲಿಕಾನ್ ಸಿಟಿಗೆ ಮತ್ತೆ ಟ್ರಾಫಿಕ್ ಸಂಕಷ್ಟ: ಉಸಿರಾಡಲು ಯೋಗ್ಯವಲ್ಲ ನಗರದ ಗಾಳಿ
ಇದನ್ನೂ ಓದಿ : ಸಂಬಳಕ್ಕಾಗಿ ಸಾಲ, ಬಸ್ ನಿಲ್ದಾಣಗಳನ್ನೇ ಅಡವಿಡುತ್ತಿದೆ ಕೆಎಸ್‌ಆರ್‌ಟಿಸಿ
(Ugadi good news for Namma Metro and KSRTC passengers, BMRCL introduce new pass)