Halal free Karnataka : ಕರ್ನಾಟಕವನ್ನು ಹಲಾಲ್ ಮುಕ್ತ ಮಾಡಿ : ಜನರಿಗೆ ಪ್ರಮೋದ್ ಮುತಾಲಿಕ್ ಕರೆ

ಬೆಂಗಳೂರು : ಹಿಜಾಬ್ ವಿವಾದ ತಣ್ಣಗಾಗುವ ಮುನ್ನವೇ ತಲೆದೋರಿದ್ದ ಧರ್ಮವ್ಯಾಪಾರ ಸಂಘರ್ಷ ಜೋರಾಗಿರುವಾಗಲೇ ಬಾಯ್ಕಾಟ್ ಹಲಾಲ್ ಹೋರಾಟ ಜೋರಾಗಿದೆ. ಸಣ್ಣದಾಗಿ ಆರಂಭಗೊಂಡ ಬಾಯ್ಕಾಟ್ ಹಲಾಲ್ ಮಾಂಸ ಅಭಿಯಾನ ನಿಧಾನಕ್ಕೆ ರಾಜ್ಯಕ್ಕೆ ವ್ಯಾಪಿಸಲಾರಂಭಿಸಿದೆ. ಈ ಮಧ್ಯೆ ಹಲಾಲ್ ವಿರುದ್ದ ಹೋರಾಟಕ್ಕೆ ಶ್ರೀರಾಮ ಸೇನೆ ಸಾಥ್ ನೀಡಿದ್ದು ಭಾರತ ಹಾಗೂ ಕರ್ನಾಟಕವನ್ನು ಹಲಾಲ್ ಮುಕ್ತ (Halal free Karnataka) ಮಾಡಬೇಕಿದೆ ಎಂದು ಪ್ರಮೋದ್ ಮುತಾಲಿಕ್ ಕರೆ ನೀಡಿದ್ದಾರೆ.

ರಾಜ್ಯದಾದ್ಯಂತ ಹಲಾಲ್ (Halal ) ಮಾಂಸವನ್ನು ನಿಷೇಧಿಸುವಂತೆ ಹಿಂದೂ ಜನಜಾಗೃತಿ ಸಮಿತಿ ಕರೆ ನೀಡಿತ್ತು. ಈ ಹಲಾಲ್ ಹೋರಾಟಕ್ಕೆ ಶ್ರೀರಾಮಸೇನೆ ಬೆಂಬಲ ನೀಡಿದೆ. ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಬೆಂಗಳೂರಿನಲ್ಲಿ ಈ ಬಗ್ಗೆ ಮಾತನಾಡಿದ್ದು, ಭಾರತ ಹಾಗೂ ಕರ್ನಾಟಕವನ್ನ ಹಲಾಲ್ ಮುಕ್ತ ಮಾಡಬೇಕಾಗಿದೆ. ಎಲ್ಲಾ ಹಿಂದೂಗಳು ಹಲಾಲ್ ಉತ್ಪನ್ನಗಳನ್ನ ಬಹಿಷ್ಕರಿಸಬೇಕಿದೆ ಎಂದು ಕರೆ ನೀಡಿದ್ದಾರೆ.

ಹಿಂದೆ ಅಕ್ಬರ್, ಔರಂಗಜೇಬ್ ಹಿಂದೂಗಳ ಮೇಲೆ ಟ್ಯಾಕ್ಸ್ ಹೇರುತ್ತಿದ್ರು.ಈಗ ಹಲಾಲ್ (Halal ) ಎಂಬ ವಿಚಾರವನ್ನು ಹೇರಿದ್ದಾರೆ. ಹಲಾಲ್ ಬೇಕಿದ್ರೆ ಇಸ್ಲಾಂ ನಲ್ಲಿ ಇಟ್ಟುಕೊಳ್ಳಲಿ ಆದ್ರೆ ಹಿಂದೂಗಳು ಕೂಡ ಹಲಾಲ್ ಸರ್ಟಿಫಿಕೇಟ್ ತೆಗೆದುಕೊಳ್ಳುವ ಪರಿಸ್ಥಿತಿ ನಿರ್ಮಿಸಲಾಗಿದೆ. ಹಿಂದೂಗಳಿಗೆ ಹಲಾಲ್ ಸರ್ಟಿಫಿಕೇಟ್ ನ ಅಗತ್ಯ ಇಲ್ಲ ಎಂದು ಅವರು ಕಿಡಿಕಾರಿದ್ದಾರೆ.

ಹಲಾಲ್ ಸರ್ಟಿಫಿಕೇಟ್ ಕೊಡೋದು ಮುಸ್ಲಿಂ ಸಂಸ್ಥೆ ಹಲಾಲ್ ಸರ್ಟಿಫಿಕೇಟ್ ಗೆ ಕೊಡುವ ದುಡ್ಡು ದೇಶ ವಿರೋಧಿ ಕೃತ್ಯಕ್ಕೆ ಬಳಕೆ ಆಗುತ್ತದೆ. PFI, SDPI, CFI, MIM ಸಂಘಟನೆಗಳಿಗೆ ಹಲಾಲ್ ಹಣವನ್ನ ಬಳಸುತ್ತಾರೆ. ಹಲಾಲ್ ಸರ್ಟಿಫಿಕೇಟ್ ನೀಡೋದು ದೊಡ್ಡ ಉದ್ಯಮ ಆಗಿದೆ.ಮುಂದೆ ಇದು ದೇಶಕ್ಕೆ ಅಪಾಯಕಾರಿ ಆಗಲಿದೆ. ಹೀಗಾಗಿ ಹಲಾಲ್ ಮುಕ್ತ ಕರ್ನಾಟಕ ಮಾಡಬೇಕಾಗಿದೆ . ಇದಕ್ಕೆ ಎಲ್ಲರೂ ಕೈಜೋಡಿಸಿ ಮುತಾಲಿಕ್ ಹಿಂದೂಗಳಿಗೆ ಕರೆ ನೀಡಿದ್ದಾರೆ.

ರಾಜ್ಯ ವ್ಯಾಪಿ ತೀವ್ರಗೊಂಡಿರುವ ಬಾಯ್ಕಾಟ್ ಹಲಾಲ್ ಅಭಿಯಾನಕ್ಕೆ (Halal free Karnataka) ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ನೆಲಮಂಗಲ ಸೇರಿದಂತೆ ರಾಜ್ಯದ ಹಲವೆಡೆ ಹಲವು ಹಿಂದೂಪರ ಸಂಘಟನೆಗಳು ಬಾಯ್ಕಾಟ್ ಹಲಾಲ್ ಬೆಂಬಲಿಸಿವೆ. ಮಾತ್ರವಲ್ಲ ಮುಸ್ಲಿಂ ಅಂಗಡಿಗಳಿಂದ ಮಾಂಸ ಖರೀದಿಯನ್ನು ನಿಲ್ಲಿಸುವಂತೆ ಹಿಂದೂಗಳಿಗೆ ಹಿಂದೂ ಪರ ಸಂಘಟನೆಗಳು ಕರೆ ನೀಡಿವೆ. ಒಟ್ಟಿನಲ್ಲಿ ರಾಜ್ಯದಲ್ಲಿ ಹಿಂದೂ ಮುಸ್ಲಿಂ ಧರ್ಮಸಂಘರ್ಷ ಮತ್ತಷ್ಟು ತೀವ್ರಗೊಳ್ಳುವ ಲಕ್ಷಣವಿದ್ದು, ಹಿಜಾಬ್ ಬಳಿಕ ಹುಟ್ಟಿಕೊಂಡ ಈ ಧರ್ಮ ಸಂಘರ್ಷ ಎಲ್ಲಿಗೆ ಹೋಗಿ ತಲುಪುತ್ತೆ ಅನ್ನೋದನ್ನು ಕಾದುನೋಡಬೇಕಿದೆ.

ಇದನ್ನೂ ಓದಿ : ಟಿಪ್ಪು ಮಾತ್ರವಲ್ಲ ಯಾರ ವೈಭವಿಕರಣಕ್ಕೂ ಅವಕಾಶವಿಲ್ಲ

ಇದನ್ನೂ ಓದಿ : 20 ಕೋಟಿ ಬಂಡವಾಳಕ್ಕೆ 231 ಕೋಟಿ ಆದಾಯ: ಇದು ದಿ‌ ಕಾಶ್ಮೀರಿ ಫೈಲ್ಸ್ ಸಾಧನೆ

Halal free Karnataka Pramod Muthalik calls on people

Comments are closed.